Ram mandir: 15 ಕುಟುಂಬಗಳು ಭಾಗಿ, ಪೂಜಾ ಸ್ಥಳದಲ್ಲಿ ಕರ್ನಾಟಕದವರಿಗೆ ಮಾತ್ರ ಅವಕಾಶ-ಯಾರದು ಹಾಗೂ ಹಿನ್ನೆಲೆ ಏನು?
ಕಲಬುರಗಿ, ಜನವರಿ, 21: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕೆಲವೇ ಕ್ಷಣಗಳು ಮಾತ್ರ ಬಾಕಿಯಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಇನ್ನು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ 15 ಕುಟುಂಬಗಳಿಗೆ ಆಹ್ವಾನ ನೀಡಲಾಗಿದೆ, ಇದರಲ್ಲಿ ನಮ್ಮ ಕರ್ನಾಟಕದ ಕಲಬುರಗಿಯ ಈ ದಂಪತಿಗೆ ಮಾತ್ರ ಪೂಜಾ ಸ್ಥಳದಲ್ಲಿ ಹೋಗಲು ಅವಕಾಶ ಕಲ್ಪಿಸಲಾಗಿದೆ.
ಕಲಬುರಗಿಯ ಲಿಂಗರಾಜ್ ಅಪ್ಪಾ ದಂಪತಿಗಳು ಅಯೋದ್ಯಯಲ್ಲಿ ದಂಪತಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟು ಹದಿನೈದು ಕುಟುಂಭಗಳಿಗೆ ಮಾತ್ರ ದಂಪತಿ ಪೂಜೆಗೆ ಆಹ್ವಾನ ಮಾಡಲಾಗಿದ್ದು, ಈ ಕುಟುಂಬಗಳಲ್ಲಿ ಕಲಬುರಗಿಯ ದೀಪಾಲಿ ಲಿಂಗರಾಜ್ ಅಪ್ಪಾ ದಂಪತಿಗೆ ಮಾತ್ರ ಪೂಜಾ ಸ್ಥಳದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಕಲಬುರಗಿಯ ಗೋದುತಾಯಿ ನಗರದ ನಿವಾಸಿಯಾಗಿರುವ ಲಿಂಗರಾಜ್ ಅಪ್ಪಾ ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದ ವಂಶಸ್ಥರಾಗಿದ್ದಾರೆ. ಮತ್ತು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷರು ಕೂಡಾ ಆಗಿದ್ದಾರೆ. ಇದೀಗ ಕುಟುಂಬ ಸಮೇತರಾಗಿ ಅಯೋಧ್ಯೆಗೆ ಲಿಂಗರಾಜ್ ಅಪ್ಪಾ ತೆರಳಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ನೋಡುವುದಾದರೆ ಇವರು ಇಂಜಿನೀಯರಿಂಗ್ ಪಧವೀಧರರಾರಾಗಿದ್ದು, ಎಲ್‌ಎಲ್ಎಂ ಸಹ ಮುಗಿಸಿದ್ದಾರೆ.
ಮುಖ್ಯ ಪ್ರಾಣ ಪ್ರತಿಷ್ಠಾಪನಾ ಪೂಜೆಯಲ್ಲಿ, 15 ದಂಪತಿ ಬಾಗವಹಿಸಲಿದ್ದಾರೆ. ಅವರು ಭಾರತದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ಭಾಗದಿಂದ ಬದವರು. ಅವರು ಯಜಮಾನರಾಗಿರುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
20 ವರ್ಷಗಳ ಬಳಿಕ ಹಣ್ಣು ಬಿಟ್ಟ ರಾಮಫಲ ವೃಕ್ಷ
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹೊತ್ತಲ್ಲೇ ಕಾಕತಾಳೀಯ ಎಂಬಂತೆ ರಾಮಫಲ ವೃಕ್ಷ 20 ವರ್ಷದ ಬಳಿಕ ಫಲ ಕೊಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಸುರೇಶ್ ಋಗ್ವೇದಿ ಎಂಬುವರ ಮನೆಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಕಳೆದ 20 ವರ್ಷಗಳ ಹಿಂದೆ ರಾಮಫಲ ಗಿಡವನ್ನು ನೆಡಲಾಗಿತ್ತು. ಆದರೆ, ಫಲ ಕೊಟ್ಟಿರಲಿಲ್ಲ. ಕಾಕತಾಳೀಯ ಎಂಬಂತೆ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹೊತ್ತಲ್ಲೇ ರಾಮಫಲ ವೃಕ್ಷ 5-6 ಹಣ್ಣುಗಳನ್ನು ಬಿಟ್ಟಿರುವುದು ಮನೆಯವರಿಗೆ ಅಚ್ಚರಿ ಉಂಟು ಮಾಡಿದೆ.
ರಾಮ ದೇವರೇ ತಮಗೆ ಆಶೀರ್ವಾದ ಮಾಡಿದ್ದಾರೆಂದು ಕುಟುಂಬಸ್ಥರು ರಾಮಫಲ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದ್ದಾರೆ. ಶತಮಾನಗಳ ಕನಸು ನನಸಾಗುತ್ತಿರುವ ಸಮಯದಲ್ಲೇ ರಾಮಫಲ ಕೊಟ್ಟಿರುವುದು ಸಂತಸ ತಂದಿದೆ ಎಂದು ಸುರೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.












Click it and Unblock the Notifications