• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮ ಮಂದಿರ ಭೂಮಿ ಪೂಜೆ; ಬಿಜೆಪಿ ಕಾರ್ಯಕರ್ತರಿಗೆ ಸಂದೇಶ

|
Google Oneindia Kannada News

ಬೆಂಗಳೂರು, ಆಗಸ್ಟ್ 04 : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಶಂಕು ಸ್ಥಾಪನೆ ಮಾಡಲಾಗುತ್ತದೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.

   DK Shivakumar : ಫೀಲ್ಡಿಗಿಳಿದು ಗೆದ್ದರಷ್ಟೇ ಪದಾಧಿಕಾರಿ ಹುದ್ದೆ | Oneindia Kannada

   ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಶಂಕು ಸ್ಥಾಪನೆ ನಡೆಯಲಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 12ರ ತನಕ ಈ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

   'ರಾಮ ಮಂದಿರ ನಿರ್ಮಿಸಿದ್ರೆ ಸಾಲದು, ರಾಮರಾಜ್ಯ ನಿರ್ಮಿಸುವುದು ನಮ್ಮ ಗುರಿ''ರಾಮ ಮಂದಿರ ನಿರ್ಮಿಸಿದ್ರೆ ಸಾಲದು, ರಾಮರಾಜ್ಯ ನಿರ್ಮಿಸುವುದು ನಮ್ಮ ಗುರಿ'

   ಪ್ರಧಾನಿ ನರೇಂದ್ರ ಮೋದಿ ಮೊದಲು ಅವರು ಹನುಮಾನ್ ಗಡಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಂಕು ಸ್ಥಾಪನೆ ಕಾರ್ಯಕ್ರಮದ ಸ್ಥಳಕ್ಕೆ ತೆರಳಲಿದ್ದಾರೆ. ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

   ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅಡ್ವಾಣಿಗಿಲ್ಲ ಆಹ್ವಾನ!ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಅಡ್ವಾಣಿಗಿಲ್ಲ ಆಹ್ವಾನ!

   ರಾಮ ಮಂದಿರ ನಿರ್ಮಾಣದ ಐತಿಹಾಸಿಕ ಭೂಮಿ ಪೂಜೆಯ ದಿನದಂದು ಬಿಜೆಪಿ ಕಾರ್ಯಕರ್ತರು ಮಾಡಬೇಕಾಗಿರುವ ಕಾರ್ಯದ ಕುರಿತು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.

   ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 5 ಕೋಟಿ ರು ಕೊಟ್ಟ ಬಾಪು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 5 ಕೋಟಿ ರು ಕೊಟ್ಟ ಬಾಪು

   ದೀಪವನ್ನು ಹಚ್ಚಿ ಸಂಭ್ರಮಿಸಿ

   ದೀಪವನ್ನು ಹಚ್ಚಿ ಸಂಭ್ರಮಿಸಿ

   * ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕು.

   * ಭೂಮಿ ಪೂಜೆ ಕಾರ್ಯಕ್ರಮ ಬುಧವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 12ರ ತನಕ ನಡೆಯಲಿದೆ. ಕುಟುಂಬ ಸದಸ್ಯರು ಸೇರಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಟಿವಿ / ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಬೇಕು.

   ಪೂಜೆಗಳನ್ನು ಸಲ್ಲಿಸಿ

   ಪೂಜೆಗಳನ್ನು ಸಲ್ಲಿಸಿ

   * ದೇವಾಲಯಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್-19ರ ಸುರಕ್ಷಾ ನಿಯಮಗಳನ್ನು ಪಾಲನೆ ಮಾಡುತ್ತಾ ದೀಪಗಳನ್ನು ಹಚ್ಚಿ ಪೂಜೆ ಸಲ್ಲಿಸಬೇಕು.

   * ಕಾರ್ಯಕರ್ತರು ಬಹಿರಂಗವಾಗಿ ಯಾವುದೇ ರೀತಿಯ ಮೆರವಣಿಗೆ ಮಾಡುವುದು ಮತ್ತು ಪಟಾಕಿ ಹಚ್ಚುವುದು ಮಾಡಬಾರದು.

   ಮಾಸ್ಕ್ ಬಳಕೆ ಮಾಡಿ

   ಮಾಸ್ಕ್ ಬಳಕೆ ಮಾಡಿ

   * ಯಾವುದೇ ರೀತಿಯ ಕಾರ್ಯಕ್ರಮಗಳಲ್ಲೂ ಕೋವಿಡ್-19 ಸುರಕ್ಷಾ ನಿಯಮಗಳನ್ನು ಪಾಲಿಸುತ್ತಾ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಎಲ್ಲ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾನಿಟೈಸರ್ ಬಳಸಬೇಕು.

   * ದೇಶದ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯರವರ ಸ್ವಹಸ್ತದಿಂದ ನೆರವೇರಿಸುವ ಈ ಭೂಮಿ ಪೂಜನೆಯ ಕಾರ್ಯಕ್ರಮದ ಸಾಮಾಜಿಕ ಜಾಲತಾಣದ ಲಿಂಕ್‌ಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಪ್ರಯತ್ನ ಮಾಡಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕು.

   ಸಂಕಲ್ಪ ಮಾಡಬೇಕು

   ಸಂಕಲ್ಪ ಮಾಡಬೇಕು

   ಧರ್ಮನಗರಿ ಶ್ರೀ ಅಯೋಧ್ಯಾದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭವ್ಯ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಈ ಶುಭ ಘಳಿಗೆಯಲ್ಲಿ ಎಲ್ಲ ಕಾರ್ಯಕರ್ತರು ಇಂದಿನಿಂದ "ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ" ಪಾಲಿಸುವ ಸಂಕಲ್ಪ ಮಾಡಬೇಕು, ತನ್ಮೂಲಕ ಭಾರತ ಆತ್ಮನಿರ್ಭರವಾಗಬೇಕು ಎಂದು ಸಂದೇಶ ನೀಡಲಾಗಿದೆ.

   English summary
   Bhoomi Puja of the Ram Mandir at Ayodhya will be held on 8 am and 12 noon on August 5, 2020. Here are the message of Karnataka BJP president Nalin Kumar Kateel for party activist.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X