ರಾಜ್ಯಸಭೆ ಚುನಾವಣೆ: ರೆಸಾರ್ಟ್‌ನತ್ತ ಮೂರೂ ಪಕ್ಷಗಳ ಶಾಸಕರು?
ಬೆಂಗಳೂರು, ಜೂ.7: ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆಯ ಕಾವು ಏರುತ್ತಿದ್ದು ಮೂರೂ ಪಕ್ಷಗಳು ತಮ್ಮ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನ ಆರಂಭಿಸಿವೆ. ಶಾಸಕಾಂಗ ಪಕ್ಷದ ಸಭೆಗಳನ್ನು ಕರೆದಿದ್ದು, ಅಗತ್ಯ ಬಿದ್ದರೆ ಶಾಸಕರನ್ನು ರೆಸಾರ್ಟ್‌ಗಳತ್ತ ಸ್ಥಳಾಂತರ ಮಾಡಲು ನಿರ್ಧರಿಸಿವೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸದ್ಯ ಯಾರಿಗೂ ಗೆಲುವು ಸುಲಭವಾಗಿಲ್ಲ. ಕುದುರೆ ವ್ಯಾಪಾರದ ಭಯ ಎಲ್ಲರನ್ನೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾ ಪಕ್ಷದ ಶಾಸಕರುಗಳನ್ನು ರೆಸಾರ್ಟ್‌ಗಳತ್ತ ಸ್ಥಳಾಂತರ ಮಾಡಲು ನೋಡಲಾಗುತ್ತಿದೆ. ಮಂಗಳವಾರ ಸಂಜೆ ಅಥವಾ ಬುಧವಾರ ಶಾಸಕರುಗಳು ರೆಸಾರ್ಟ್‌ಗಳಿಗೆ ಹೊರಡುತ್ತಾರೆ. ಚುನಾವಣೆ ನಡೆಯುವ ಜೂ.10ರಂದು ನೇರವಾಗಿ ವಿಧಾನಸೌಧಕ್ಕೆ ಕರೆತರಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಅವರು ಸುಲಭವಾಗಿ ಜಯಗಳಿಸಬಹುದು. ವಿಧಾನ ಪರಿಷತ್ ಮಾಜಿ ಸದಸ್ಯ ಲೆಹರ್ ಸಿಂಗ್ ಮೂರನೇ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಮೊದಲ ಅಭ್ಯರ್ಥಿ ಜಯರಾಮ್ ರಮೇಶ್ ಜಯಗಳಿಸಬಹುದು. ಆದರೆ, ಹೆಚ್ಚುವರಿ ಮತಗಳು ಇರುವುದರಿಂದ ಮನ್ಸೂರ್ ಆಲಿ ಖಾನ್ ಅವರನ್ನೂ ಸಹ ಕಣಕ್ಕೆ ಇಳಿಸಿದೆ. ಇನ್ನೂ 32 ಶಾಸಕರ ಸಂಖ್ಯಾಬಲ ಹೊಂದಿರುವ ಜೆಡಿಎಸ್ ಸಹ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿ ಅದೃಷ್ಟಿ ಪರೀಕ್ಷೆಗೆ ಇಳಿದಿದೆ. ಲೆಹರ್‌ಸಿಂಗ್, ಮನ್ಸೂರ್ ಆಲಿ ಖಾನ್ ಮತ್ತು ಕುಪೇಂದ್ರ ರೆಡ್ಡಿ ಮಧ್ಯೆ ಹಣಾಹಣಿ ಏರ್ಪಟ್ಟಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ:
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ನಾಳೆ ಸಂಜೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾ:ಯಿ ಅವರು ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ:
ಈ ಮಧ್ಯೆ ಕಾಂಗ್ರೆಸ್ ಸಹ ರಾಜ್ಯಸಭೆ ಚುನಾವಣೆ ಮುನ್ನಾ ದಿನವಾದ ಜೂ. 9ರಂದು ಹೋಟೆಲ್ ರ್ಯಾಡಿಸನ್ ಬ್ಲೂನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿಯ ಆತ್ಮಸಾಕ್ಷಿ ಮತಗಳು ನಮಗೆ ಬರುತ್ತವೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಮುಖ್ಯವಾಗಿ ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಹೀಗಾಗಿ ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ

ರೆಸಾರ್ಟ್‌ನತ್ತ ಶಾಸಕರು?:
ರಾಜ್ಯಸಭೆ ಚುನಾವಣೆ ಮೂರು ಪಕ್ಷಗಳಿಗೆ ಈಗ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ಮೊರೆ ಹೋಗಲಾಗುತ್ತಿದೆ. ಬಹುತೇಕ ಬುಧವಾರ ಶಾಸಕರನ್ನು ರೆಸಾರ್ಟ್‌ಗಳಿಗೆ ಶಿಫ್ಟ್ ಮಾಡಿಸುವ ಸಾಧ್ಯತೆ ಇದೆ. ರೆಸಾರ್ಟ್‌ಗಳಲ್ಲಿಯೇ ಶಾಸಕರ ಸಭೆ ನಡೆಸಲಾಗುತ್ತದೆ. ಹೀಗೆ ಆಯಾ ಪಕ್ಷಗಳ ಶಾಸಕರು ಅಡ್ಡಮತದಾನಕ್ಕೆ ಅವಕಾಶ ನೀಡದಿರುವುದು ಮತ್ತು ಕುದುರೆ ವ್ಯಾಪಾರಕ್ಕೆ ಬಲಿಯಾಗದಂತೆ ನೋಡಿಕೊಳ್ಳುಲು ರಾಜಕೀಯ ಪಕ್ಷಗಳ ತಂತ್ರಗಾರಿಕೆ ಎಣೆದಿರುವ ಬಗ್ಗೆ ಕೇಳಿಬರುತ್ತಿದೆ.












Click it and Unblock the Notifications