Breaking: ರಾಜ್ಯಸಭೆ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಆರಂಭ
ಬೆಂಗಳೂರು ಜೂ.10: ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುತ್ತಿರುವ ಚುನಾಣೆಗೆ ಶುಕ್ರವಾರ ಬೆಳಗ್ಗೆ 9ರಿಂದ ಮತದಾನ ಆರಂಭವಾಯಿತು.
ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4ರವರೆಗೂ ಮತದಾನ ನಡೆಯಲಿದ್ದು, 224 ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸಂಜೆ 6ರ ಬಳಿಕ ಮತ ಎಣಿಕೆ ಆರಂಭವಾಗಿ ರಾತ್ರಿವೇಳೆಗೆ ಫಲಿತಾಂಶ ಘೋಷಣೆಯಾಗಿದೆ.
ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಜಯರಾಮ್ ರಮೇಶ್ ಮತ್ತು ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿ ಖಾನ್ ಅಭ್ಯರ್ಥಿಗಳಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಅಭ್ಯರ್ಥಿಯಾಗಿದ್ದಾರೆ.

ವಿಧಾನಸೌಧಕ್ಕೆ ಬರುತ್ತಿರುವ ಶಾಸಕರು:
ಮತದಾನದ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಶಾಸಕರೂ ಸಹ ವಿಧಾನಸೌಧದತ್ತ ಬರುತ್ತಿದ್ದಾರೆ. ಅಭ್ಯರ್ಥಿಗಳಾದ ನಿರ್ಮಲ ಸೀತಾರಾಮನ್, ಜಗ್ಗೇಶ್ ಈಗಾಗಲೇ ವಿಧಾನಸೌಧ ತಲುಪಿದ್ದಾರೆ.
ಮೊದಲ ಮತ ಅಂಗಾರ ಅವರಿಂದ:
ಸಚಿವ ಎಸ್. ಅಂಗಾರ ಅವರು ಬಿಜೆಪಿ ಅಭ್ಯರ್ಥಿಗಳ ಪರ ಮೊದಲ ಮತ ಚಲಾಯಿಸಿದರು. ಬಳಿಕ ಬೈರತಿ ಬಸವರಾಜ, ಕುಸುಮಾ ಶಿವಳ್ಳಿ, ಬಸನಗೌಡ ದದ್ದಲ ಸೇರಿ ಆರಂಭದಲ್ಲಿ ಮತ ಚಲಾಯಿಸಿದರು.
Recommended Video
ವಿಧಾನಸೌಧದತ್ತ ಜೆಡಿಎಸ್ ಶಾಸಕರು:
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎಲ್ಲ ಶಾಸಕರನ್ನು ಬಸ್‌ನಲ್ಲಿಯೇ ಕೂಡಿಸಿಕೊಂಡು ಖಾಸಗಿ ಹೋಟೆಲ್‌ನಿಂದ ವಿಧಾನಸೌಧದತ್ತ ಹೊರಟಿದ್ದಾರೆ. ಜೆಡಿಎಸ್‌ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ, ಎಲ್ಲಿಯೂ ಅಡ್ಡ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಲು ಕುಮಾರಸ್ವಾಮಿ ಸ್ವತಃ ತಾವೇ ಶಾಸಕರ ಜೊತೆ ಇದ್ದಾರೆ.












Click it and Unblock the Notifications