'ಎಚ್ಡಿಕೆ ರಾಜಕಾರಣಿ ಅಲ್ಲ, ಅವರೊಬ್ಬ ರಾಜಕೀಯ ವಿಜ್ಞಾನಿ'

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜೂನ್ 03: "ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಜಕಾರಣಿಯಷ್ಟೇ ಅಲ್ಲ ಅವರೊಬ್ಬ ರಾಜಕೀಯ ವಿಜ್ಞಾನಿ " ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜೆಡಿಎಸ್ ಒಡೆಯುವ ಕೆಲಸ ಮಾಡಿಲ್ಲ. ಅವರು ಏನು, ಅವರ ಪಕ್ಷದ ನಿಲುವು ಎಂತಹದ್ದು ಎನ್ನುವುದು ಇಡೀ ಇಡೀ ರಾಜ್ಯಕ್ಕೆ ಗೊತ್ತಿದೆ. ಅವರ ಹೇಳಿಕೆಗಳು ಮಾಧ್ಯಮಗಳಿಗೆ ಮಾತ್ರ ಸೀಮಿತ. ಅವು ಕಾರ್ಯಗತವಾಗಲ್ಲ ಎಂದು ಟೀಕಿಸಿದರು.[ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]

karnataka

ರಾಜ್ಯದಲ್ಲಿ ಒಂದು ಜಾತ್ಯತೀತ ಪಕ್ಷ ಇರಬೇಕು. ಆದರೆ ಜೆಡಿಎಸ್ ಆ ತತ್ವ ಸಿದ್ಧಾಂತಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಒಂದು ಬಾರಿ ಬಿಜೆಪಿ ಜೊತೆ ಕೈಜೋಡಿಸಲ್ಲ ಎಂದು ಹೇಳುತ್ತಾರೆ. ಮತ್ತೊಮ್ಮೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳುತ್ತಾರೆ ಎಂದು ಛೇಡಿಸಿದರು.[ಡಿಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ 'ಬಿರಿಯಾನಿ' ಆರೋಪ!]

ಜೆಡಿಎಎಸ್ 5 ಮಂದಿ ಶಾಸಕರು ಯಾರಿಗೆ ಮತ ಹಾಕುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ. ಕಾಂಗ್ರೆಸ್ ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ. ಬೆಂಬಲಿಸುವರನ್ನು ಬೇಡ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Energy Minister D.K. Shivakumar hitting back to Janata Dal (Secular)( JDS) president H.D. Kumaraswamy, regarding Rajya Sabha Elections.
Please Wait while comments are loading...