ಪತ್ರಕರ್ತರಿಗೂ ರಾಜೀವ್ ಆರೋಗ್ಯಭಾಗ್ಯ - ವಾರ್ತಾ ಇಲಾಖೆ
ಬೆಂಗಳೂರು, ಜೂ. 18 : ಕರ್ನಾಟಕ ಸರ್ಕಾರ 2014-15ನೇ ಸಾಲಿನ ಬಜೆಟ್‌ನಲ್ಲಿ ಕಾರ್ಯನಿರತ ಪತ್ರಕರ್ತರು ಮತ್ತು ಅವರ ಕುಟುಂಬವದವರಿಗೆ ಆರೋಗ್ಯ ವಿಮಾ ಯೋಜನೆಯನ್ನು ಘೋಷಿಸಿದೆ. ಯೋಜನೆಗೆ ಸೇರಬಯಸುವ ಪತ್ರಕರ್ತರು ಜೂನ್ 25ರೊಳಗೆ ಹೆಸರನ್ನು ನೋಂದಾಯಿಸುವಂತೆ ಮನವಿ ಮಾಡಲಾಗಿದೆ.
'ರಾಜೀವ್ ಆರೋಗ್ಯ ಭಾಗ್ಯ' ಯೋಜನೆಗೆ ಮಾನ್ಯತೆ ಪಡೆದ ಪತ್ರಕರ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರುಗಳನ್ನು ಪ್ರಥಮ ಹಂತದಲ್ಲಿ ಸೇರಿಸಿಕೊಳ್ಳಲಾಗುತ್ತದೆ.

ಬೆಂಗಳೂರಿನ ಮಾಧ್ಯಮ ಸಂಸ್ಥೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಹೆಸರುಗಳನ್ನು ಪೂರ್ಣ ವಿಳಾಸದೊಂದಿಗೆ ಪಟ್ಟಿಮಾಡಿ ವಾರ್ತಾ ಇಲಾಖೆ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ಕಳುಹಿಸುವಂತೆ ಕೋರಿದ್ದರೂ ಸಹ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪಟ್ಟಿ ಕಚೇರಿಗೆ ತಲುಪಿರುವುದಿಲ್ಲ. [ಪತ್ರಿಕೋದ್ಯಮದ ಕಟ್ಟಾಳು ಎಂ.ಬಿ. ಸಿಂಗ್ ಅವರಿಗೆ ಅಭಿನಂದನೆ]
ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ಉಪ ಸಂಪಾದಕರು, ಉಪ ಸಂಪಾದಕರು, ವರದಿಗಾರರು, ಬಾತ್ಮೀದಾರರು, ಬ್ಯೂರೋ ಚೀಫ್, ಕ್ಯಾಮೆರಾಮೆನ್, ಛಾಯಾಗ್ರಾಹಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಹೆಸರುಗಳನ್ನು ಮಾತ್ರ ಪಟ್ಟಿಯಲ್ಲಿ ನಮೂದಿಸುವಂತೆ ಕೋರಲಾಗಿದೆ.
ಯೋಜನೆಗೆ ಒಳಪಡುವ ಪತ್ರಕರ್ತರು, ಮಾಧ್ಯಮ ಸಂಸ್ಥೆ ಸೇರುವ ಸಂದರ್ಭ ಪಡೆದ ನೇಮಕಾತಿ ಪ್ರಮಾಣ ಪತ್ರ ಮತ್ತು ಇತ್ತೀಚಿನ ವೇತನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಈ ಕೆಳಕಂಡ ಮಾದರಿಯಲ್ಲಿ ಅರ್ಹ ಪತ್ರಕರ್ತರ ಪಟ್ಟಿಯನ್ನು ಸಂಸ್ಥೆಯ ಅಧಿಕೃತ ಮೊಹರು, ಸಹಿಯೊಂದಿಗೆ ಜೂನ್ 25 ರೊಳಗೆ ಕಳುಹಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಪ್ರತಿನಿಧಿಸುವ ಮಾಧ್ಯಮ :
ಪತ್ರಿಕೆ ಮಾಧ್ಯಮ ಪಟ್ಟಿಗೆ ಸೇರಿದೆಯೇ ಅಥವಾ ಇಲ್ಲವೇ :
ಶ್ರೀಮತಿ/ಶ್ರೀಯುತರು
| ಕ್ರಮ ಸಂಖ್ಯೆ | ಪತ್ರಕರ್ತರ ಹೆಸರು ಮತ್ತು ಹುದ್ದೆ | ನಿವಾಸ ವಿಳಾಸ ಹಾಗೂ ದೂರವಾಣಿ ಹಾಗೂ ಇ-ಮೇಲ್ ವಿಳಾಸ | ಮಾನ್ಯತಾ ಪತ್ರ ಹೊಂದಿದ್ದಾರೆಯೇ ಆಥವಾ ಇಲ್ಲವೇ |












Click it and Unblock the Notifications