Karnataka Rain: ಮಳೆ.. ಮಳೆ.. 24 ಗಂಟೆಯಲ್ಲಿ ಮತ್ತೆ ಮಳೆ ಆರ್ಭಟ ಶುರು!
ಮಳೆ ಕೋಪ ಕಡಿಮೆ ಆಗಿಲ್ಲ ಅಂತಾ ಕಾಣ್ತಿದೆ. ಹೀಗಾಗಿ 2024 ಕಳೆದು 2025 ಶುರುವಾಗಿದ್ರೂ ಮಳೆಯ ಅರ್ಭಟ ಕಡಿಮೆ ಆಗುತ್ತಿಲ್ಲ. ಇನ್ನೇನು ಬೇಸಿಗೆ ಕಾಲ ಶುರುವಾಯ್ತು ಬಿಡು ಅಂತ ಖುಷಿ ಪಡುವ ಸಮಯದಲ್ಲೇ ಮತ್ತೆ ಮಳೆಯ ಅಬ್ಬರ ಶುರುವಾಗಿದೆ. ಬೆಳಗ್ಗೆಯಿಂದ ಈಗಾಗಲೇ ಮೋಡ ಮುಸುಕಿದ ವಾತಾವರಣ ಶುರುವಾಗಿದ್ದು, ಭರ್ಜರಿ ಮಳೆಯ ಮುನ್ಸೂಚನೆ ಸಿಗ್ತಿದೆ. ಹಾಗಾದರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ?
ಬಂಗಾಳ ಕೊಲ್ಲಿ ಮತ್ತೆ ಚಂಡಮಾರುತಕ್ಕೆ ಸಾಕ್ಷಿಯಾಗಿ ಭಾರಿ ಮಳೆ ಅಬ್ಬರಿಸಲು ಕಾರಣ ಕೂಡ ಆಗಿದೆ. ಮಳೆರಾಯ ಬಿಟ್ಟೂ ಬಿಡದೆ ಅಬ್ಬರಿಸುತ್ತಿದ್ದು, ಮಳೆ ಅಬ್ಬರ ಕಾರಣಕ್ಕೆ ಬೆಂಗಳೂರಿನ ಜನ ಬೆಳ್ಳಂ ಬೆಳಗ್ಗೆ ಭಯಗೊಂಡಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮಳೆಯ ಅಸಲಿ ಆರ್ಭಟ ಆರಂಭ ಆಗಲಿದೆ. ಮುಂದಿನ 24 ಗಂಟೆಗಳಲ್ಲಿ ಮಳೆ... ಮಳೆ... ಅಂತಾನೇ ಜನರು ಗೊಣಗುವ ಪರಿಸ್ಥಿತಿ ಬರಲಿದೆ!

ಮಳೆ ಬೀಳುವ ಜಿಲ್ಲೆಗಳು ಯಾವುವು?
ಬೆಂಗಳೂರಲ್ಲಿ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕೂಡ ಭಾರಿ ಮಳೆ ಸುರಿದಿತ್ತು. ಹೀಗಾಗಿ ಜನವರಿ ತಿಂಗಳಲ್ಲಿ ಮಳೆ ಬರೋದಿಲ್ಲ ಬಿಡು, ಬರೀ ಚಳಿ ಇರುತ್ತೆ ಅಂತಾ ಬೆಂಗಳೂರಿನ ಜನರು ನಿರ್ಧಾರ ಮಾಡಿಕೊಂಡಿದ್ದರು. ಆದರೆ ಬೆಂಗಳೂರಿನಲ್ಲಿ ಜನವರಿ ತಿಂಗಳಲ್ಲೂ ಭರ್ಜರಿ ಮಳೆ ಶುರುವಾಗಿದೆ. ಈ ಮೂಲಕ ಮತ್ತಷ್ಟು ಸಂಕಷ್ಟ ಶುರುವಾಗಿದೆ.
ಬಂಗಾಳ ಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಈಗಾಗಲೇ ಶ್ರೀಲಂಕಾ ಸೇರಿ ದಕ್ಷಿಣ ಭಾರತದ ಚೆನ್ನೈ ಮತ್ತಿತರ ಪ್ರಮುಖ ನಗರಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದೇ ವೇಳೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೂಡ ಮಳೆ ಸುರಿಯುವ ಮುನ್ಸೂಚನೆ ಇದೀಗ ಸಿಕ್ಕಿದೆ. ಈ ಮೂಲಕ ಮತ್ತೊಂದು ಆತಂಕ ಶುರುವಾಗಿದೆ.
ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಬೆಂಗಳೂರು ಸೇರಿದಂತೆ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಇದೀಗ ಮಳೆಯ ಭಯ ಶುರುವಾಗಿದೆ. ಇದರ ಜೊತೆಗೆ ಮಲೆನಾಡು ಜಿಲ್ಲೆ, ಚಿಕ್ಕಮಗಳೂರು ಸೇರಿದಂತೆ ಹಾಸನ & ಶಿವಮೊಗ್ಗ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೂಡ ಮಳೆ ಬೀಳಲಿದೆ ಎಂದು ಈ ಸಮಯದಲ್ಲಿ ಮುನ್ಸೂಚನೆ ನೀಡಲಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಂ. ಜಿಲ್ಲೆಗಳಲ್ಲಿ ಕೂಡ ಮಳೆಯ ಮುನ್ಸೂಚನೆ ಇದ್ದು ಮೋಡ ಮುಸುಕಿದ ವಾತಾವರಣ ಶುರು ಆಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಆತಂಕ ಇಲ್ಲ, ಆದರೆ ಕರಾವಳಿ ಜಿಲ್ಲೆಗಳು ಕೂಡ ಮಳೆ ಬೀಳುವ ಭಯದಲ್ಲಿ ಇವೆ. ಹೀಗಾಗಿ ಕರಾವಳಿ ಜಿಲ್ಲೆಗಳ ಜನರು ಕೂಡ ಚಿಂತೆಯಲ್ಲಿ ಮುಳುಗಿದ್ದಾರೆ.
2025ರ ಆರಂಭದಲ್ಲೇ ಮಳೆ!
ಒಟ್ನಲ್ಲಿ ಮಳೆ ಮತ್ತೆ ತನ್ನ ಆಟ ಶುರು ಮಾಡಿದೆ, ಸುಗ್ಗಿ ಹಬ್ಬ ಸಂಕ್ರಾಂತಿ ಸಮಯದಲ್ಲೇ ಈ ರೀತಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿರುವುದು ಆತಂಕ ಸೃಷ್ಟಿ ಮಾಡಿದೆ. ಇನ್ನೇನು ಬೆಳೆ ಕೈಗೆ ಬಂತು ಅನ್ನೋ ಖುಷಿಯಲ್ಲಿ ಇದ್ದ ಜನರಿಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ. 2023ರ ಸಮಯದಲ್ಲಿ ಮಳೆ ಕೊರತೆ ಕಾರಣಕ್ಕೆ ರೈತರು ಪರದಾಡಿದ್ದರು. ಆದರೆ 2024 ರಲ್ಲಿ ಹೆಚ್ಚು ಮಳೆ ಬಿದ್ದು ಆತಂಕ ಎದುರಾಗಿದೆ. ಹಾಗೇ 2025ರ ಆರಂಭದಲ್ಲೇ ಮಳೆ ಅಬ್ಬರ ಮತ್ತೊಮ್ಮೆ ಶುರುವಾಗುವ ನಿರೀಕ್ಷೆ ಇದೆ.












Click it and Unblock the Notifications