Heavy Rain: ಮಳೆ.. ಮಳೆ... ಕರ್ನಾಟಕದ ರೈತರಿಗೆ ಕಾಡುತ್ತಿದೆ ಹೊಸ ಭಯ...
ಮಳೆ.. ಮಳೆ.. ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಬೇಡ ಬೇಡ ಎಂದರೂ ಮಳೆ ಸುರಿದು ಜನರಿಗೆ ಟೆನ್ಷನ್ ಕೊಡುತ್ತಿದೆ. 2024ರ ಮೇ ತಿಂಗಳಲ್ಲಿ ಆರಂಭ ಆಗಿದ್ದ ಮಳೆಯ ಆರ್ಭಟ, ನವೆಂಬರ್ ತಿಂಗಳು ಬಂದರೂ ನಿಲ್ಲುತ್ತಿಲ್ಲ. ಮುಂಗಾರು ಮಳೆ ಆರ್ಭಟ ಕಂಡು ಬೆಚ್ಚಿಬಿದ್ದ ಕನ್ನಡಿಗರು, ಇನ್ನೇನು ಮಳೆ ನಿಲ್ಲುತ್ತದೆ ಎಂಬ ಭರವಸೆಯಲ್ಲಿ ಇದ್ದರು. ಆದರೆ ಹಿಂಗಾರು ಮಳೆ ಕೂಡ ಅಬ್ಬರಿಸುತ್ತಿರುವ ಸಮಯದಲ್ಲಿ, ಕರ್ನಾಟಕದ ರೈತರಿಗೆ ಕಾಡ್ತಿದೆ ಹೊಸ ಭಯ...
ಕರ್ನಾಟಕ ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ, ಇನ್ನೇನು ಮಳೆಗಾಲ ಮುಗಿದು ಹೋಯಿತು ಅಂತಾ ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯದಲ್ಲೇ ಮತ್ತೆ ಮಳೆ ಆರ್ಭಟ ಶುರುವಾಗಿದೆ. ಹೀಗಾಗಿ, ಹೊಸ ಸಂಚಲನ ಕೂಡ ಸೃಷ್ಟಿಯಾಗಿದ್ದು, ಸಾಮಾನ್ಯ ಜನರಿಂದ ಹಿಡಿದು ಅನ್ನದಾತ ರೈತರ ತನಕ ಎಲ್ಲರೂ ಯೋಚಿಸುವ ವಾತಾವರಣ ಸೃಷ್ಟಿಯಾಗಿದೆ. ಈ ಮೂಲಕ ಮಳೆ ಬಂದರೂ ಕಷ್ಟ, ಮಳೆ ಬರದೇ ಇದ್ದರೂ ಕಷ್ಟ ಎಂಬಂತೆ ಆಗಿದೆ.

2023 ಮಳೆ ಇಲ್ಲ, ಈಗ ಮಳೆ ಬಂದರೂ...
ದಸರಾ ಹಬ್ಬದಲ್ಲಿ ಶುರುವಾಗಿದ್ದ ಮಳೆ ಮುಂದೆ ದೀಪಾವಳಿ ಸಮಯದಲ್ಲೂ ಅಬ್ಬರಿಸಿತ್ತು, ಇದು ಸಾಲದು ಎನ್ನುವಂತೆ ದೀಪಾವಳಿ ಹಬ್ಬ ಮುಗಿದ ನಂತರ ಕೂಡ ಮತ್ತೆ ಭಾರಿ ಮಳೆ ಬಗ್ಗೆ ಇದೀಗ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಕೈಗೆ ಬಂದ ಬೆಳೆ ಉಳಿಸಿಕೊಳ್ಳಲು ಈಗ ಅನ್ನದಾತ ರೈತರು ನರಳುವಂತೆ ಆಗಿದೆ. 2023 ರಲ್ಲಿ ಮಳೆ ಬಾರದ ಹಿನ್ನೆಲೆ ಬರ ಆವರಿಸಿ ರೈತರು ನರಳಿದ್ದರು, ಆ ನಂತರ 2024 ರಲ್ಲಿ ಮಳೆ ಬಂದರೂ ಪ್ರಯೋಜನ ಇಲ್ಲ ಎಂಬಂತೆ ಆಗುತ್ತಿದೆ.
6 ಜಿಲ್ಲೆಗಳಲ್ಲಿ ಭಾರಿ ಮಳೆ!
ರಾಜ್ಯದಲ್ಲಿ ಈಗ ಭರ್ಜರಿ ಹಿಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಕರ್ನಾಟಕ ರಾಜ್ಯದ 6 ಜಿಲ್ಲೆಗಳಲ್ಲಿ ಮಳೆ ಅಬ್ಬರ ತೋರಿಸುವ ಬಗ್ಗೆ ವಾರ್ನಿಂಗ್ ಕೊಡಲಾಗಿದೆ. ಕೇವಲ 6 ಜಿಲ್ಲೆಗಳಲ್ಲಿ ಮಾತ್ರವಲ್ಲ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ತೋರಲಿದೆ. ನವೆಂಬರ್ 9 ರಿಂದಲೇ ಒಟ್ಟು 3 ದಿನಗಳ ಕಾಲ ಭಾರಿ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಮೈಸೂರು, ಕೋಲಾರ, ಕೊಡಗು, ಚಿಕ್ಕಮಗಳೂರು & ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎನ್ನಲಾಗಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜಧಾನಿ ಬೆಂಗಳೂರಿಗೂ ಮಳೆ ಶಾಕ್!
ದಕ್ಷಿಣ ಕನ್ನಡ ಸೇರಿ ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗೂ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಮತ್ತೊಂದು ಕಡೆ ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಿಗೆ ಕೂಡ ಮಳೆ ಸಿಂಚನ ಆಗಲಿದ್ದು, ಜನರಿಗೆ ಚಿಂತೆ ಕೂಡ ಶುರುವಾಗಿದೆ. ಹಾಗೇ ಹವಾಮಾನ ವೈಪರಿತ್ಯದ ಪರಿಣಾಮ ಇನ್ನಷ್ಟು ಸಮಸ್ಯೆ ಎದುರಾಗುವ ಭಯ ಕಾಡುತ್ತಿದೆ.












Click it and Unblock the Notifications