ಮಳೆ ಹಾನಿ: ರಾಜ್ಯದಲ್ಲಿ ವಿಕೋಪದಿಂದ 10 ಸಾವಿರ ಕೋಟಿ ರು ನಷ್ಟ!

ಬೆಂಗಳೂರು, ಆ. 14: ಮಳೆ ಹಾನಿ, ಪ್ರವಾಹದಿಂದ ಬಳಲಿರುವ ಕರ್ನಾಟಕಕ್ಕೆ 4 ಸಾವಿರ ಕೋಟಿ‌ ಪರಿಹಾರಕ್ಕೆ ಮನವಿ ಮಾಡಿಕೊಂಡಿದೆ. ವಿಕೋಪದಿಂದ ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ರು ಗೂ ಅಧಿಕ ಮೌಲ್ಯದಷ್ಟು ಆಸ್ತಿ ಪಾಸ್ತಿ ನಷ್ಟವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ 395 ಕೋಟಿ ರೂ ಮುಂಗಡವಾಗಿ ಕೊಡಿ ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎರಡು ಥರದ ಗಾಳಿ ಬೀಸಿದ್ದು, ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಿಂದ ನದಿಗಳು ತುಂಬಿವೆ. 56 ತಾಲೂಕುಗಳಲ್ಲಿ ಹಾನಿಯಾಗಿದ್ದು, 885 ಗ್ರಾಮಗಳು ಪ್ರವಾಹ ಪೀಡಿತವವಾಗಿವೆ. 3,500 ಕಿ.ಮೀ ರಸ್ತೆ ಹಾಳಾಗಿದ್ದು, 85 ಸಾವಿರ ಎಕರೆ ಬೆಳೆ ಹಾನಿಯಾಗಿದೆ. 3 ಸಾವಿರ ಮನೆಗಳು, 250 ಸೇತುವೆಗಳು ಹಾನಿಯಾಗಿದೆ. 392 ಕಟ್ಟಡಗಳು ಮಳೆಗೆ ಹಾನಿಯಾಗಿದ್ದು, ಕೇಂದ್ರದ 4 ರಕ್ಷಣಾ ಹೆಲಿಕಾಪ್ಟರ್ ಮೀಸಲಿರಿಸಿದೆ. ರಾಜ್ಯದಲ್ಲಿ ಈಗಾಗಲೆ 4 NDRF ತಂಡಗಳಿವೆ. 4 ಸಾವಿರ ಕೋಟಿ ನಷ್ಟದ ಅಂದಾಜು ಮಾಡಲಾಗಿದೆ. ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಿ ಗಮನಕ್ಕೆ ತಂದಿದ್ದೇವೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Rain-related losses Rs 10,000 crore, Rs 4,000 crore financial assistance sought

ಒಟ್ಟು 13 ಜಿಲ್ಲೆಗಳಲ್ಲಿ ಆಗಸ್ಟ್ 1ರತನಕ ಭಾರಿ ಮಳೆ ಸುರಿದಿದೆ. ನೂರಾರು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. 18 ಮಂದಿ ಹಾಗೂ 42 ಪ್ರಾಣಿಗಳನ್ನು ಮಳೆ ಬಲಿ ತೆಗೆದುಕೊಂಡಿವೆ, 125 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 3639 ಮನೆ ಅರ್ಧಂಬರ್ಧ ಜಖಂಗೊಂಡಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಸಂಸ್ಥೆ ಹೇಳಿದೆ.

Rain-related losses Rs 10,000 crore, Rs 4,000 crore financial assistance sought

ಸುಮಾರು 43,827 ಹೆಕ್ಟರ್ ನಷ್ಟು ಕೃಷಿಭೂಮಿ, 48,696 ಹೆಕ್ಟರು ತೋಟ ಕೇವಲ 10 ದಿನಗಳ ಮಳೆಯಲ್ಲೇ ನಾಶವಾಗಿದೆ. 109ಕ್ಕೂ ಅಧಿಕ ಮಂದಿ ಪರಿಹಾರ ಕೇಂದ್ರಗಳಲ್ಲಿ 3500 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. 50 ರಿಂದ 100 ರಸ್ತೆ, ಸೇತುವೆಗಳು ಹಾನಿಗೊಂಡಿವೆ, ಒಟ್ಟಾರೆ, 16,633 ಕಿ. ಮೀ ರಸ್ತೆ, ಹೆದ್ದಾರಿಗಳು ನಾಶವಾಗಿವೆ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+