ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದು ಕೂಡ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಮಾರ್ಚ್ 21: ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸೇರಿದಂತೆ ಹಲವೆಡೆ ಮಳೆಯಾಗಿತ್ತು..ಇಂದು ಕೂಡ ರಾಜ್ಯದ ಹಲವೆಡೆ ಮಳೆಯಾಗಲಿದೆ. ಕೋಲಾರ ನಗರ ಮತ್ತು ಜಿಲ್ಲೆಯ ಮಾಲೂರು ಪಟ್ಟಣ, ಶ್ರೀನಿವಾಸಪುರ, ಬಂಗಾರಪೇಟೆ ತಾಲೂಕಿನಲ್ಲಿ ಮಳೆಯಾಗಿದೆ.

ಮೈಸೂರಿನ ಹಲವೆಡೆ ಭಾರೀ ಮಳೆ; ಎಚ್.ಡಿ.ಕೋಟೆಯಲ್ಲಿ ನೆಲಕ್ಕುರುಳಿದ ಮರಮೈಸೂರಿನ ಹಲವೆಡೆ ಭಾರೀ ಮಳೆ; ಎಚ್.ಡಿ.ಕೋಟೆಯಲ್ಲಿ ನೆಲಕ್ಕುರುಳಿದ ಮರ

ತುಮಕೂರು ಜಿಲ್ಲೆಯ ಗುಬ್ಬಿ, ನಿಟ್ಟೂರು, ಎಂಎನ್ ಕೋಟೆ, ಕಡಬ, ಕೆಜಿ ಟೆಂಪಲ್ ಭಾಗಗಳಲ್ಲಿ ಮಳೆಗೆ ಮಾವಿನ ಕಾಯಿಗಳೂ ಕೂಡ ಉದುರಿ ಹೋಗಿವೆ.

Rain Is Expected In Most Parts Of The State Today

ಬೆಂಗಳೂರಿನ ಜಯನಗರ, ಶಾಂತಿನಗರ, ಕೆಂಗೇರಿ, ಮೈಸೂರು ರಸ್ತೆ, ಸಂಪಂಗಿರಾಮನಗರದಲ್ಲಿ ಮಳೆಯಾಗಿದೆ.ರಾಯಚೂರಿನಲ್ಲಿ ಅತಿ ಹೆಚ್ಚು ಉಷ್ಣಾಂಶ ಅಂದರೆ 37.6 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಬೀದರ್‌ನಲ್ಲಿ ಅತಿ ಕಡಿಮೆ ಅಂದರೆ 17.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಇಂದು ಉತ್ತರ ಒಳನಾಡಿನಲ್ಲಿ ಮಳೆಯಾಗಲಿದ್ದು, ಕರಾವಳಿ ಭಾಗ, ಉತ್ತರ ಒಳನಾಡಿನಾದ್ಯಂತ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರದಲ್ಲಿ ಅತಿ ಹೆಚ್ಚಿನ ಮಳೆಯಾಗಲಿದ್ದು, ಕೊಪ್ಪಳ ಮತ್ತು ರಾಯಚೂರಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
Rain Is Expected Most Parts Of The Karnataka Today, Meteorological department Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X