ಮಳೆ ಅಬ್ಬರ ಶುರು, ಕರ್ನಾಟಕದ ಡ್ಯಾಂಗಳಲ್ಲಿ ಎಷ್ಟು ನೀರು ಇದೆ?
ಕರ್ನಾಟಕದಲ್ಲಿ ಈಗ ಮೆಲ್ಲಗೆ ಮಳೆಯ ಅಬ್ಬರ ಶುರುವಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿರುವ ಡ್ಯಾಂಗಳು ನಿಧಾನವಾಗಿ ತುಂಬುತ್ತಿವೆ. ಅದರಲ್ಲೂ ಕಳೆದ ವರ್ಷ ಮಳೆಯ ಕೊರತೆಯಿಂದ ಈ ಬೇಸಿಗೆ ಆರಂಭದಲ್ಲೇ ಒಣಗಿ ಹೋಗಿದ್ದ ಡ್ಯಾಂಗಳಿಗೆ ಇದೀಗ ಮೆಲ್ಲಗೆ ನೀರು ಹರಿದು ಬರುತ್ತಿದೆ. ಹಾಗಾದರೆ ಕರ್ನಾಟಕದ ಯಾವ ಯಾವ ಜಲಾಶಯದಲ್ಲಿ ಎಷ್ಟು ನೀರು ಇದೆ? ಕರ್ನಾಟಕದಲ್ಲಿ ಡ್ಯಾಂಗಳ ನೀರಿನ ಮಟ್ಟ ತಿಳಿಯಲು ಮುಂದೆ ಓದಿ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು. ಹೀಗಾಗಿಯೇ ಡ್ಯಾಂಗಳ ನೀರಿನ ಮಟ್ಟ ಕುಸಿದು ಬಿದ್ದು ರೈತರು ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ಇತ್ತು. ಬೇಸಿಗೆ ಬೇಗೆ ನಡುವೆ, ಇದೀಗ ಮಳೆಯ ಅಬ್ಬರ ಮೆಲ್ಲಗೆ ಶುರುವಾಗಿದೆ. ಹವಾಮಾನ ತಜ್ಞರ ಮುನ್ಸೂಚನೆಯ ಪ್ರಕಾರ ಮಳೆ ಬೀಳುವ ನಿರೀಕ್ಷೆ ಇದೆ. ಈಗ ಅಲ್ಲಲ್ಲಿ ಮೋಡಗಳು ಕವಿದು ಮಳೆಯ ಸೂಚನೆಯು ಶುರುವಾಗಿದೆ. ಹೀಗಾಗಿ ಉತ್ತಮವಾಗಿ ಮಳೆ ಬೀಳುತ್ತಿದೆ. ಹಾಗಾದ್ರೆ ಕರ್ನಾಟಕದಲ್ಲಿ ಜಲಾಶಯಗಳ ನೀರಿನ ಮಟ್ಟ ಈಗ ಎಷ್ಟಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಕರ್ನಾಟಕದಲ್ಲೂ ಮಳೆ ಗ್ಯಾರಂಟಿ!
ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಿಂದ ಮಳೆಯಾಗಲಿದೆ ಅಂತಾ ಇದೀಗ ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಪೂರಕವಾಗಿ ಈಗಾಗಲೇ, ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ಹಾಗೇ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ & ಗಾಳಿ ಬಂದು ಸಂತಸ ತಂದಿದೆ. ಈ ನಡುವೆ ದೇಶದ ಇನ್ನೂ ಹಲವು ಕಡೆ ಭಾರಿ ಮಳೆ ಶುರುವಾಗಿದೆ.
ಕರುಣೆ ತೋರಿಸೋ ಮಳೆರಾಯ...
ಮಳೆಯೇ ಇಲ್ಲ, ಮಳೆ ಬಾರದೆ ಭೂಮಿ ಒಣಗಿ ಹೋಗಿದೆ. ಅದ್ರಲ್ಲೂ ನಮ್ಮ ಬೆಂಗಳೂರು ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿಗೆ ತಲುಪಿದೆ. ಹೀಗಿದ್ದಾಗ ಮಳೆ ಬರಲೇಬೇಕಿದೆ ಇಲ್ಲವಾದರೆ ಪರಿಸ್ಥಿತಿ ಕೈಮೀರಿ ಹೋಗುವ ಲಕ್ಷಣ ಕಾಣುತ್ತಿದ್ದು. ಇಂತಹ ಸಮಯದಲ್ಲೇ ಜನರಿಗೆ ಗುಡ್ ನ್ಯೂಸ್ ಸಿಗುತ್ತಿದೆ. ಶೀಘ್ರದಲ್ಲೇ ಮಳೆ ಬರಲಿದೆ ಅಂತಿದ್ದಾರೆ ಹವಾಮಾನ ಇಲಾಖೆ ತಜ್ಞರು. ಅಲ್ಲದೆ ಏಪ್ರಿಲ್‌ನಲ್ಲಿ ಈ ಮಾಹಿತಿ ನಿಜವಾಗದೆ ಹೋದರೆ, ಅಂದ್ರೆ ಮಳೆ ಬಾರದೆ ಹೋದರೆ ಪರಿಸ್ಥಿತಿ ಮತ್ತಷ್ಟು ಹೀನಾಯ ಆಗಲಿದೆ. ಈಗಾಗಲೇ ಬಹುತೇಕ ನೀರಿನ ಮೂಲಗಳು ಒಣಗಿ ಹೋಗಿದ್ದು, ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ ಜನ. ಹೀಗಾಗಿ ವರುಣ ದೇವ ಒಂದಷ್ಟು ಕರುಣೆ ತೋರಿಸಬೇಕಿದೆ.
ಮಳೆ ನೀರು ಸಂಗ್ರಹ ಮಾಡಿ!
ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ದರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲ ಆರಂಭಕ್ಕೆ ಇನ್ನು ಕೇವಲ 2 ತಿಂಗಳು ಬಾಕಿ ಇದೆ. ಹಾಗಾದರೆ ಮಳೆ ನೀರು ಸಂಗ್ರಹ ಹೇಗೆ ಮಾಡುವುದು? ಬನ್ನಿ ತಿಳಿಯೋಣ.












Click it and Unblock the Notifications