ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು, ಮೈಸೂರಿನಲ್ಲಿ ಭಾರಿ ಮಳೆ ಸಾಧ್ಯತೆ

|
Google Oneindia Kannada News

Recommended Video

ಬೆಂಗಳೂರು, ಮೈಸೂರು ಸೇರಿ ಹಲವು ಕಡೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ | Oneindia Kannada

ಬೆಂಗಳೂರು, ಜೂನ್ 1: ಮುಂದಿನ 24 ಗಂಟೆಗಳಲ್ಲ ಬೆಂಗಳೂರು, ಮೈಸೂರು ಹಾಗೂ ಕೋಳಿಕ್ಕೊಡ್‌ನಲ್ಲಿ ಭಾರಿ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್ ವರದಿ ಮಾಡಿದೆ.

ಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರುಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರು

ಕಲಬುರಗಿಯಲ್ಲಿ ಈಗಾಗಲೇ 7 ಮಿ.ಮೀನಷ್ಟು ಮಳೆಯಾಗಿದೆ, ಅಲ್ಲಿನ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 2 ಮಿ.ಮೀ, 3 ಮಿ.ಮೀ, 6 ಮಿ.ಮೀ ನಷ್ಟು ಮಳೆಯಾಗಿದೆ.

ಈಗ ತೆಲಂಗಾಣದ ವಿದರ್ಭದಲ್ಲಿ ಚಂಡಮಾರುತ ಚಲನೆ ಕಾಣಿಸಿಕೊಂಡಿದೆ. ವಿದರ್ಭದಿಂದ ತಮಿಳುನಾಡು ಮೂಲಕ ಚಂಡಮಾರುತ ಕರ್ನಾಟಕವನ್ನು ಪ್ರವೇಶಿಸಲಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು, ಚಿತ್ರದುರ್ಗ, ಮೈಸೂರು, ಚಾಮರಾಜನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

Rain in Bengaluru Mysore coming 24 hours

ಹಾಗೆಯೇ ರಾಯಚೂರು, ಬಳ್ಳಾರಿ, ಕಲಬುರಗಿಯಲ್ಲೂ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ. ಕೇರಳಕ್ಕೆ ಜೂನ್ 6ಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಈಗಾಗಲೇ ಶುಕ್ರವಾರ ಕಣ್ಣೂರಿನಲ್ಲಿ 6.9 ಮಿ.ಮೀನಷ್ಟು ಮಳೆಯಾಗಿದೆ.

ಮುಂಗಾರು ಅಧಿಕೃತವಾಗಿ ಜೂನ್ 6ರಂದು ಕೇರಳ ಪ್ರವೇಸಿಲಿದ್ದು 48 ಗಂಟೆಗಳಲ್ಲಿ ಕರ್ನಾಟಕಕ್ಕೂ ಲಗ್ಗೆ ಇಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಮೋಹಾಪಾತ್ರ ಅವರು ಹೇಳಿದ್ದಾರೆ.

English summary
Rain and thundershower activities at scattered places with gusty winds was witnessed in South Interior Karnataka along with Kerala in the last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X