Karnataka Rain: ಮುಂದಿನ 5 ದಿನಗಳ ಕಾಲ ಮಳೆ ಆರ್ಭಟ, ಯಾವ ಯಾವ ಜಿಲ್ಲೆಗಳಲ್ಲಿ?
ಮಳೆ.. ಮಳೆ.. ಎಲ್ಲೆಲ್ಲೂ ಮುಂಗಾರು ಮಳೆ ತನ್ನ ಆರ್ಭಟ ತೋರಿಸುತ್ತಾ ಇದ್ದು, ಆತಂಕ ಶುರುವಾಗಿದೆ. ಮುಂಗಾರು ಮಳೆ ಆರ್ಭಟ ಅತಿ ಹೆಚ್ಚಾಗಿ ಪರಿಸ್ಥಿತಿ ಕೈಮೀರಿ ಹೋಗುವ ಸಂದರ್ಭ ಎದುರಾಗಿದೆ. ಹೀಗೆ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಈಗಾಗಲೇ ನೂರಾರು ಸಮಸ್ಯೆ ಎದುರಾಗಿ ಗ್ರಾಮೀಣ ಪ್ರದೇಶಗಳ ಜನರು ಪರದಾಡುವ ಪರಿಸ್ಥಿತಿ ಇದೆ. ಅಲ್ಲದೇ ಕೃಷಿ ಜಮೀನು ಮಳೆ ನೀರಲ್ಲಿ ಕೊಚ್ಚಿ ಹೋದ ಘಟನೆಗಳು ಕೂಡ ವರದಿಯಾಗುತ್ತಿವೆ. ಇಂತಹ ಸಮಯದಲ್ಲೇ, ಮತ್ತೊಂದು ಭಾರಿ ಗಂಭೀರ ಸುದ್ದಿ ಇದೀಗ ಹೊರ ಬಿದ್ದಿದೆ. ಮಳೆ ಅರ್ಭಟ ಮತ್ತಷ್ಟು ಹೆಚ್ಚಾಗುವುದು ಗ್ಯಾರಂಟಿಯೂ ಆಗಿದೆ!
ಮಳೆ.. ಮಳೆ.. ಮಳೆ.. ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಪ್ರಕಾರ ಮುಂದಿನ 48 ಗಂಟೆಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದು ಸಮಸ್ಯೆ ಎದುರಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ & ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ ಅಬ್ಬರಿಸುವುದು ಗ್ಯಾರಂಟಿ ಆಗುತ್ತಿದೆ. ಜೊತೆಗೆ ಕರ್ನಾಟಕದ ದಕ್ಷಿಣ ಭಾಗ & ಉತ್ತರ ಭಾಗದಲ್ಲೂ ಈ ಮಳೆರಾಯ ಆರ್ಭಟಿಸಲಿದ್ದಾನೆ. ಹಾಗಾದ್ರೆ, ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ? ಮುಂದೆ ಓದಿ.

ಮಳೆ.. ಮಳೆ.. ಮಳೆ..
ಮುಂಗಾರು ಮಳೆ ಮೋಡಗಳು ಮತ್ತೆ ಕರ್ನಾಟಕದ ಪೂರ್ತಿ ದಾಳಿ ಇಟ್ಟು ಮಳೆ ಸುರಿಸಲು ಶುರು ಮಾಡಿವೆ. ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ & ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುವ ಜೊತೆಗೆ ಮಂಡ್ಯ & ಮೈಸೂರು ಭಾಗದಲ್ಲೂ ಮಳೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಇನ್ನೊಂದು ಕಡೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೂ ಭಾರಿ ಮಳೆಯ ಕಾಟ ಇರಲಿದೆ ಎಂದು ಇದೀಗ ಮುನ್ನೆಚ್ಚರಿಕೆ ನೀಡಿರುವುದು ಭಾರಿ ಆತಂಕ ಮೂಡಿಸಿದೆ. ಹಾಗೇ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆರಾಯ ತನ್ನ ಆರ್ಭಟ ತೋರಿಸಲು ಸಜ್ಜಾಗಿದ್ದಾನೆ, ಹೀಗೆ ಎಲ್ಲಾ ಕಡೆ ಮಳೆ ತನ್ನ ಆರ್ಭಟ ತೋರಿಸುತ್ತಿದೆ.












Click it and Unblock the Notifications