ಮುಂದಿನ 72 ಗಂಟೆ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಎಚ್ಚರಿಕೆ... Karnataka Rain
ಬೇಸಿಗೆ ಸಮಯದಲ್ಲೂ ಕರ್ನಾಟಕದಲ್ಲಿ ಭಾರಿ ಭರ್ಜರಿ ಮಳೆ ಬಿದ್ದು, ಭೂಮಿ ತಂಪಾಗಿದೆ & ಜಲಾಶಯಗಳು ಈಗ ತುಂಬಿ ತುಳುಕುತ್ತಿವೆ. ಅದರಲ್ಲೂ ಕಾವೇರಿ ನದಿಯ ಜೀವನಾಡಿ ಕೊಡಗು ಮತ್ತು ಸುತ್ತಮುತ್ತಲ ಭಾಗದಲ್ಲಿ ಭಾರಿ ಭರ್ಜರಿ ಮಳೆ ಆಗಿದೆ. ಕೆಲವು ದಿನಗಳಿಂದ ಸ್ವಲ್ಪ ಸೈಲೆಂಟ್ ಆಗಿದ್ದ ಮಳೆರಾಯ ಇದೀಗ ಮತ್ತೊಮ್ಮೆ ಆರ್ಭಟಿಸಲು ಸಜ್ಜಾಗಿದ್ದಾನೆ. ಹೀಗಿದ್ದಾಗ, ಮುಂದಿನ 72 ಗಂಟೆ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಎಚ್ಚರಿಕೆ ನೀಡಲಾಗಿದೆ.
ಮೇ ತಿಂಗಳಲ್ಲಿ ಸೈಕ್ಲೋನ್ & ವಾಯುಭಾರ ಕುಸಿತದ ಪರಿಣಾಮ ಮಳೆ ಅಬ್ಬರಿಸಿತ್ತು, ಹೀಗೆಲ್ಲಾ ಮಳೆ ಅಬ್ಬರಿಸುತ್ತಿರುವ ಕಾರಣಕ್ಕೆ ಇಡೀ ಕರ್ನಾಟಕ ಬೆಚ್ಚಿ ಬಿದ್ದು ಚಿಂತೆ ಮಾಡುವಂತೆ ಆಗಿತ್ತು. ಇನ್ನೊಂದು ಕಡೆ ಅಕಾಲಿಕ ಮಳೆ ಕಾರಣ ಇದೀಗ ಹಲವು ರೀತಿ ಸಮಸ್ಯೆಗಳು ಕೂಡ ಎದುರಾಗಿದ್ದವು. ಆದರೆ ಈಗ ಮಳೆಗಾಲ ಆರಂಭ ಆಗಿದ್ದು, ಮುಂಗಾರು ಮಳೆ ಭಾರಿ ಭರ್ಜರಿಯಾಗಿ ಅಬ್ಬರಿಸಲು ಸಜ್ಜಾಗಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಮಳೆ ಸುರಿಯುವ ಬಗ್ಗೆ ಇದೀಗ ಎಚ್ಚರಿಕೆ ನೀಡಲಾಗಿದೆ.

ಅಬ್ಬರಿಸಲಿದೆ ಮಳೆ, ಯಾವ ಜಿಲ್ಲೆಗಳಲ್ಲಿ?
ಮುಂಗಾರು ಮಳೆ ನಂಬಿ ರೈತರು ಇದೀಗ ಬಿತ್ತನೆ ಕಾರ್ಯ ಮಾಡಲು ಸಜ್ಜಾಗಿದ್ದಾರೆ. ಮೇ ತಿಂಗಳಲ್ಲಿ ಭರ್ಜರಿಯಾಗಿ ಸುರಿದ ಮಳೆರಾಯ ಈಗ ಯಾಕೋ ಸೈಲೆಂಟ್ ಆಗಿದ್ದಾನೆ. ಹೀಗಾಗಿ ಮಳೆ ಯಾವಾಗ ಸುರಿಯುತ್ತೆ? ಅಂತಾ ರೈತರು ಚಿಂತೆ ಮಾಡುತ್ತಿದ್ದರು. ಇದೀಗ ಹವಾಮಾನ ಇಲಾಖೆ ಭರ್ಜರಿ ಸುದ್ದಿ ನೀಡಿದ್ದು, ಮತ್ತೆ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರುವ ಮುನ್ಸೂಚನೆ ಸಿಕ್ಕಿದೆ.
ಮತ್ತೆ ಸುರಿಯಲಿದೆ ಭರ್ಜರಿ ಮಳೆ!
ಹೌದು, ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಜೂನ್ 06ರಿಂದ 09 ತನಕ ಮುಂಗಾರು ಮಳೆ ಹಂತ ಹಂತವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚುರುಕಾಗಲಿದೆ. ಶುಕ್ರವಾರದಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಮಾಡಲಾಗಿದೆ. ಬಿರುಗಾಳಿ ಸಹಿತ ಸಾಧಾರಣ ಮಳೆ ಸುರಿಯುವ ಸೂಚನೆ ಇದ್ದು, ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂಬ ಮುನ್ಸೂಚನೆ ಇದೆ. ಜೂನ್ 7 & 8ನೇ ತಾರೀಖು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಭಾಗ ಬಿಟ್ಟು ಉಳಿದ 28 ಜಿಲ್ಲೆಗಳಿಗೂ ಅಲ್ಲಲ್ಲಿ ಹಗುರ ಹಾಗೂ ಸಾಧಾರಣ ಮಳೆ ಸುರಿಯಲಿದೆ. ಗಾಳಿ ವೇಗ ಹೆಚ್ಚಿರಲಿದ್ದು, ಇದೇ ವೇಳೆ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋರು ಗಾಳಿ ಬೀಸಲಿದೆ ಎಂದು ಎಚ್ಚರಿಕೆಯ ನೀಡಲಾಗಿದೆ. ಈ ಮೂಲಕ ಮತ್ತೆ ಮಳೆರಾಯ ವೈಲೆಂಟ್ ಆಗುತ್ತಿದ್ದು, ಭಾರಿ ಮಳೆಯ ನಿರೀಕ್ಷೆ ಮಾಡಲಾಗುತ್ತಿದೆ.












Click it and Unblock the Notifications