Rain Alert: ಮಳೆ.. ಮಳೆ.. ಬಿಡುವು ಕೊಡದೆ ಸುರಿಯಲಿದೆ ಭರ್ಜರಿ ರಣ ಮಳೆ!

ಮಳೆ.. ಮಳೆ.. ಮಳೆರಾಯ ತನ್ನ ಅಬ್ಬರ ಮುಂದುರಿಸಿದ್ದಾನೆ. ಹೀಗಾಗಿ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ. ಈ ಕುರಿತು ಹವಾಮಾನ ಇಲಾಖೆ ಇದೀಗ ಎಚ್ಚರಿಕೆ ಸಂದೇಶ ಕೂಡ ನೀಡಿದ್ದು, ಎಲ್ಲೆಲ್ಲೂ ಅಲರ್ಟ್ ಘೋಷಣೆಯು ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಸುರಿಯಲಿದೆ? ಇನ್ನೂ ಎಷ್ಟು ದಿನಗಳ ಕಾಲ ಇದೇ ರೀತಿ ಮಳೆ ಬರಲಿದೆ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಮಳೆ ಅಬ್ಬರ ಮತ್ತೆ ಜೋರಾಗಿದ್ದು, ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಮಳೆಯ ಆರ್ಭಟ ಮತ್ತೆ ಹೆಚ್ಚಾಗಿದೆ. ಅದರಲ್ಲೂ ಇದೀಗ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ & ಅರಬ್ಬಿ ಸಮುದ್ರದಲ್ಲಿ ಮೇಲುಬ್ಬರ ಉಂಟಾದ ಕಾರಣ ಮತ್ತೆ ಮುಂಗಾರು ಮಳೆ ಮೋಡಗಳು ಅಲರ್ಟ್ ಆಗಿವೆ. ಹೀಗೆ ಎಲ್ಲೆಲ್ಲೂ ಮಳೆ ಮೋಡಗಳು ಕರ್ನಾಟಕ ರಾಜ್ಯವನ್ನು ಆವರಿಸಿವೆ. ಹೀಗೆ ಮುಂಗಾರು ಮಳೆ ಮತ್ತೊಮ್ಮೆ ಅಲರ್ಟ್ ಆಗಿರುವ ಕಾರಣಕ್ಕೆ ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ ಗೊತ್ತಾ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

Rain Alert Given To The Karnataka And The Bengaluru For Next 2 Days

ಮಳೆ.. ಮಳೆ.. ಭಾರಿ ಮಳೆ!

ಮೊದಲೇ ಹೇಳಿದಂತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ & ಅರಬ್ಬಿ ಸಮುದ್ರದಲ್ಲಿ ಮೇಲುಬ್ಬರ ಉಂಟಾದ ಕಾರಣ, ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಇಂದಿನಿಂದ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆರಾಯ ಆರ್ಭಟ ತೋರಿಸಲಿದ್ದಾನೆ. ಹಾಗೇ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಜಿಲ್ಲೆ ಸೇರಿದಂತೆ ಚಿಕ್ಕಮಗಳೂರು, ಕೊಡಗು, ಹಾಸನದ ಮಲೆನಾಡು ಭಾಗ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಬೆಂಗಳೂರಿನ ಸ್ಥಿತಿ ಹೇಗೆ ಇರಲಿದೆ? ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆಯಾ? ಬನ್ನಿ ಮುಂದೆ ಓದಿ ತಿಳಿಯೋಣ

ಬೆಂಗಳೂರಲ್ಲಿ ಭರ್ಜರಿ ಮಳೆ ಗ್ಯಾರಂಟಿ!

ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಕೂಡ, ಮಳೆರಾಯ ಅಬ್ಬರಿಸಲು ಶುರು ಮಾಡಿದ್ದು ಚಿಂತೆ ತರಿಸಿದೆ. ಯಾಕಂದ್ರೆ ಮಳೆ ಅಬ್ಬರಕ್ಕೆ ಕನ್ನಡಿಗರು ಈಗ ಬೆಚ್ಚಿಬಿದ್ದಿದ್ದಾರೆ. ಅದ್ರಲ್ಲೂ ಬೆಂಗಳೂರು ನಗರದ ಪ್ರಮುಖ ಪ್ರದೇಶಗಳಿಗೆ ಮಳೆಯಿಂದ ಇಂದು ಮತ್ತು ನಾಳೆ ಕಂಟಕವೇ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಗುರುವಾರ ಸಂಜೆಯ ನಂತರ ಮಳೆಯ ಆರ್ಭಟ ಬೆಂಗಳೂರಲ್ಲಿ ಜಾಸ್ತಿ ಆಗಲಿದ್ದು, ಶುಕ್ರವಾರ, ಶನಿವಾರ & ಭಾನುವಾರ ಕೂಡ ಮಳೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಈ ಮೂಲಕ ಕರ್ನಾಟಕದ ಒಳನಾಡಿನಲ್ಲಿ ಮಳೆ ಹೆಚ್ಚುವ ಮುನ್ಸೂಚನೆ ಇದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಆಗಲಿದ್ದು ದಕ್ಷಿಣ & ಉತ್ತರ ಒಳನಾಡು ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+