Karnataka Rains: ಮಳೆ ಇನ್ನೂ ನಿಂತಿಲ್ಲ, ಮತ್ತಷ್ಟು ದಿನ ಭರ್ಜರಿ ಮಳೆ ಸುರಿಯೋದು ಗ್ಯಾರಂಟಿ!

ಸೈಕ್ಲೋನ್ & ವಾಯುಭಾರ ಕುಸಿತದ ಪರಿಣಾಮ ಮಳೆ ಅಬ್ಬರಿಸಿದೆ, ಹೀಗೆಲ್ಲಾ ಮಳೆ ಅಬ್ಬರಿಸುತ್ತಿರುವ ಕಾರಣಕ್ಕೆ ಇಡೀ ಕರ್ನಾಟಕ ಬೆಚ್ಚಿ ಬೀಳುವಂತೆ ಆಗಿದೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಅಕಾಲಿಕ ಮಳೆಯ ಕಾರಣ ಈಗ ಹಲವು ರೀತಿಯ ಸಮಸ್ಯೆಗಳು ಕೂಡ ಎದುರಾಗುತ್ತಿವೆ. ಇಷ್ಟೆಲ್ಲದರ ನಡುವೆ ಮತ್ತಷ್ಟು ದಿನಗಳ ಕಾಲ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆ & ಯಾವೆಲ್ಲಾ ದಿನಾಂಕದಂದು ಮಳೆ ಸುರಿಯಲಿದೆ?

ಮಳೆ... ಮಳೆ... ಮಳೆ... ಈ ರೀತಿ ಮಳೆ ಯಾಕಾದ್ರೂ ಬೀಳುತ್ತಿದೆಯೋ ಗೊತ್ತಿಲ್ಲ. ಆದರೆ ಹೀಗೆ ಮಳೆ ಬೀಳುತ್ತಿರುವ ರಭಸಕ್ಕೆ ಕನ್ನಡ ನಾಡು ಮಾತ್ರ ತತ್ತರಿಸಿ ಹೊಗಿದ್ದು ಜನ, ಅದರಲ್ಲೂ ಅನ್ನದಾತ ರೈತರು ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣ ಆಗಿದೆ. ಇದು ಸಾಲದೆಂಬ ರೀತಿ ಮತ್ತೆ ಮಳೆ ಎಚ್ಚರಿಕೆ ಇದೀಗ ನೀಡಲಾಗಿದೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಮತ್ತೊಮ್ಮೆ ವಾಯುಭಾರ ಕುಸಿತ ಎದುರಾಗಿ ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆಯಂತೆ. ಅರೆರೆ ಹಾಗಾದ್ರೆ, ಮುಂದಿನ ವಾಯುಭಾರ ಕುಸಿತ & ಮಳೆಯ ಮುಹೂರ್ತ ಯಾವಾಗ ಫಿಕ್ಸ್ ಆಗಿದೆ? ಅಂತಾ ಕುತೂಹಲ ಕಾಡುತ್ತಿದೆಯೇ, ಮುಂದೆ ಓದಿ.

Rain Alert Given To Karnataka On December 14th Of 2024

ಡಿಸೆಂಬರ್ 17ರ ತನಕ ಭಾರಿ ಮಳೆ?

ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಪದೇ, ಪದೇ ವಾಯುಭಾರ ಕುಸಿತ & ಚಂಡಮಾರುತಗಳ ಸೃಷ್ಟಿ ಆಗುತ್ತಿದೆ. ಅದ್ರಲ್ಲೂ ಡಿಸೆಂಬರ್ 14 ರಿಂದ 17ರ ವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಗುಡುಗು ಸಹಿತ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಪ್ರದೇಶಗಳು ಸೇರಿದಂತೆ ಮಲೆನಾಡು ಭಾಗದಲ್ಲಿ ಕೂಡ ಭಾರಿ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಭಾರಿ ಮಳೆ?

ಈಗಿರುವ ಮುನ್ನೆಚ್ಚರಿಕೆ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಆರ್ಭಟ ಗ್ಯಾರಂಟಿ ಆಗಿದೆ. ಹೀಗೆ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮಡಿಕೇರಿ, ಮೈಸೂರು ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸುವುದು ಈ ಸಮಯದಲ್ಲಿ ಗ್ಯಾರಂಟಿ ಆಗಿದೆ.

ಇನ್ನುಳಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಕೂಡ ಮಳೆ ಎಚ್ಚರಿಕೆ ನೀಡಿದ್ದು. ಈ ನಡುವೆ ಮಲೆನಾಡು ಭಾಗ ಚಿಕ್ಕಮಗಳೂರು, ​​ಬೆಳಗಾವಿ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ಗುಡುಗು ಸಹಿತ ಭರ್ಜರಿ ಮಳೆ ಗ್ಯಾರಂಟಿ ಎನ್ನಲಾಗಿದೆ.

ಒಟ್ನಲ್ಲಿ ಹಿಂಗೆಲ್ಲಾ ಅಕಾಲಿಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕೈಗೆ ಬಂದಿರುವ ಬೆಳೆ ನಾಶವಾಗಿ ಹೋಗುವ ಭಯ ಕಾಡುತ್ತಿದೆ. ಮತ್ತೊಂದು ಕಡೆ ರಾಗಿ, ಭತ್ತ ಸೇರಿ ವಿವಿಧ ರೀತಿ ತರಕಾರಿ ಬೆಳೆಗಳು ನಾಶವಾಗಿದ್ದು, ಚಿಂತೆ ಕೂಡ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಸುರಿದರೆ ಇನ್ನಷ್ಟು ಅವಾಂತರ ಗ್ಯಾರಂಟಿ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+