Heavy Rain: ಮಳೆ.. ಮಳೆ.. ಮುಂದಿನ 1 ವಾರ ಕಂಡೂ ಕೇಳರಿಯದ ಮಳೆ!
ಮಳೆಯ ಅಬ್ಬರ ಜೋರಾಗಿದ್ದು, ಕರ್ನಾಟಕದಲ್ಲಿ ಮತ್ತೆ ನಿನ್ನೆಯಿಂದಲೇ ಮಳೆ ಫುಲ್ ಆಕ್ಟಿವ್ ಆಗಿದೆ. ಅದ್ರಲ್ಲೂ ಭರ್ಜರಿ ಮಳೆಯ ಅಬ್ಬರಕ್ಕೆ ಕರ್ನಾಟಕದ ನದಿ, ಹಳ್ಳ, ಕೆರೆಗಳು ಈಗ ಜೀವ ತುಂಬಿಕೊಳ್ಳುತ್ತಿವೆ. ಹೀಗಿದ್ದಾಗಲೇ ಮತ್ತೊಂದು ಸಿಹಿ ಸುದ್ದಿ ಇದೀಗ ಕನ್ನಡಿಗರಿಗೆ ಸಿಕ್ಕಿದೆ, ಅದು ಏನಂದ್ರೆ ಮುಂದಿನ 1 ವಾರ ಕಂಡೂ ಕೇಳರಿಯದ ಮಳೆ ಸುರಿಯಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ!
ಕರ್ನಾಟಕ ರಾಜ್ಯ 2023 ರಲ್ಲಿ ಮಳೆ ಇಲ್ಲದೆ ನರಳಿತ್ತು. ಆದರೆ ಈ ಬಾರಿ ಮಳೆಗಾಲ ಸಖತ್ ಆಗಿದ್ದು, ಬಹುಬೇಗ ಮುಂಗಾರು ಮಳೆ ಮೋಡಗಳು ಕರ್ನಾಟಕ ರಾಜ್ಯಕ್ಕೆ ಎಂಟ್ರಿ ಕೊಟ್ಟಿವೆ. ಹಾಗೇ, ಭರ್ಜರಿ ಮಳೆಯನ್ನ ಕೂಡ ಸುರಿಸುತ್ತಿವೆ. ಹೀಗಿದ್ದಾಗಲೇ ರೈತರ ಮೊಗದಲ್ಲಿ ಕೂಡ ಮಂದಹಾಸ ಮೂಡಿದೆ. ಮುಂದಿನ 7 ದಿನಗಳು ಪೂರ್ತಿ, ಹೀಗೆಯೇ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಸಿಂಚನ ಆಗಲಿದೆ? ಮುಂದೆ ಓದಿ.

ಕರ್ನಾಟಕದ ಈ ಭಾಗದಲ್ಲಿ ಮಳೆ!
ಕೊಡಗು ಜಿಲ್ಲೆ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಉಡುಪಿ, ಚಾಮರಾಜನಗರ & ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು & ಹಾಸನ ಜಿಲ್ಲೆಯ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಆಗಲಿದೆ. ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಗೆ ಭರ್ಜರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಿದ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪರಿಸ್ಥಿತಿ ಹೇಗಿದೆ? ಇನ್ನೆಷ್ಟು ದಿನ ಮಳೆ ಬರಲಿದೆ? ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.
ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ಹೀಗಾಗಿ ಭಾರಿ ಮಳೆಯ ಪರಿಣಾಮ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೆಲ್ಲಾ ಬಿಡಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆರಾಯ ಭರ್ಜರಿ ಅಬ್ಬರ ತೋರಿಸಲಿದ್ದು, ಹೀಗಾಗಿ ಉಡುಪಿ & ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ.
ಜೂನ್ 28ರ ತನಕ ಭರ್ಜರಿ ಮಳೆ!
ಕರ್ನಾಟಕ ರಾಜ್ಯದಲ್ಲಿ ತುಂತುರು ಮಳೆ, ಗುಡುಗು, ಮಿಂಚು & ಬಿರುಗಾಳಿ ಸಹಿತ ಮಳೆ ಬೀಳಲಿದೆ. ಈ ಮೂಲಕ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ವರದಿ ಹೇಳಿದೆ ಜೂನ್ 22 ರಿಂದ 7 ದಿನಗಳ ಕಾಲ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ, ಜೂನ್ 22 ರಿಂದ 28 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ, ಮಲೆನಾಡು ಪ್ರದೇಶಗಳಲ್ಲಿ ಕೂಡ ಮಳೆರಾಯ ಅಬ್ಬರ ತೋರಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹೀಗೆ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ, ಭಾರಿ ಮಳೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಮಾಹಿತಿ ನೀಡಿದೆ.












Click it and Unblock the Notifications