Rain Alert: ಚಂಡಮಾರುತ ತೀವ್ರತೆ: ಈ ಜಿಲ್ಲೆಗಳಿಗೆ ಭಾರೀ ಮಳೆ 'ಯೆಲ್ಲೋ ಅಲರ್ಟ್'
IMD Weather Forecast: ರಾಜ್ಯದ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಹಾವೇರಿ ಹಾಗೂ ಧಾರವಾಡ ಜಿಲ್ಲೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಒಣಹವೆ ಕಡಿಮೆ ಆಗಿದೆ. ಬಿರು ಬಿಸಿಲು ಮರೆಯಾಗಿ ಮಧ್ಯಾಹ್ನವೇ ಮಳೆ ಸಿಂಚನವಾಗಿದೆ. ಇಂದು ರಾತ್ರಿ ಹೊತ್ತಿಗೆ ಗುಡುಗು ಮಿಂಚು ಸಹಿತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹಾವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ಬೆಳಗ್ಗೆಯಿಂದ ಇದ್ದ ಬಿಸಿಲು ಮರೆಯಾಗಿ ಮಧ್ಯಾಹ್ನವೇ ಹಾವೇರಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಸಾಧಾರಣ ಮಳೆ ಆಯಿತು. ಜಿಲ್ಲೆ ರಟ್ಟಿಹಳ್ಳಿ, ಹಾನಗಲ್, ಸಿರ್ಸಿ ಕ್ರಾಸ್, ಬ್ಯಾಡಗಿ, ರಾಣಿಬೆನ್ನೂರು, ಶಿಗ್ಗಾವಿ ಭಾಗಗಳಲ್ಲಿ ಮಳೆ ಸುರಿದಿದೆ. ಎಲ್ಲೆಡೆ ಮಬ್ಬು ವಾತಾವರಣ ಜೊತೆಗೆ ತಂಪು ವಾತಾವರಣ ಕಂಡು ಬಂದಿದೆ. ತಾಪಮಾನ ಸಂಜೆಯಾಗುತ್ತಿದ್ದಂತೆ ಕುಸಿದಿದೆ. ಈ ಭಾಗದ ರೈತರ ಮೊಗದಲ್ಲಿ ಹರ್ಷ ಉಂಟಾಗಿದೆ.

110 ಮಿ.ಮೀ. ಮಳೆ ನಿರೀಕ್ಷೆ: ಯೆಲ್ಲೋ ಅಲರ್ಟ್
ಭಾರೀ ಮಳೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳು 'ಯೆಲ್ಲೋ ಅಲರ್ಟ್' ಪಡೆದಿವೆ. ಅದರಲ್ಲಿ ಹಾವೇರಿ ಜಿಲ್ಲೆಯಲ್ಲಿ ಮುಂದಿನ ವಾರ ಅತ್ಯಧಿಕ ಮಳೆ ಆಗುವ ನಿರೀಕ್ಷೆ ಇದೆ. ಮುನ್ಸೂಚನೆ ಪ್ರಕಾರ, ಮೇ 20 ಹಾಗೂ 21ರಂದು ಎರಡು ದಿನಗಳು 110 ಮಿಲಿ ಮೀಟರ್ ಮಳೆ ದಾಖಲಾಗಬಹುದೆಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಈ ಕಾರಣಕ್ಕಾಗಿ ಜಿಲ್ಲೆಗೆ ಆ ಎರಡು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಧಾರವಾಡದ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಕಂಡು ಬಂದಿದೆ. ಮುಂದಿನ 48 ಗಂಟೆಗಳಲ್ಲಿ (ಮೇ 17) ಅತ್ಯಧಿಕ ಮಳೆ ಸುರಿಯಲಿದೆ. ಮುನ್ಸೂಚನೆ ಪ್ರಕಾರ, ಧಾರವಾಡ ಜಿಲ್ಲೆಯ ಹಲವೆಡೆ ಗರಿಷ್ಠ 110 ಮಿಲಿ ಮೀಟರ್‌ಗಿಂತಲೂ ಹೆಚ್ಚಿನ ಮಳೆ ದಾಖಲಾಗಲಿದೆ. ಹೀಗಾಗಿ ಹವಾಮಾನ ಇಲಾಖೆಯು ಮೇ 17ರಂದು ಹಾಗೂ ಮುಂದಿನ ವಾರ ಮೇ 20, 21ರಂದು 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಚಂಡಮಾರುತ ಪರಿಚಲನೆ: ಭಾರೀ ಮಳೆಗೆ ಇದೇ ಕಾರಣ
ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ನಡುವೆ ಮೇಲಿನ ವಾಯು ಚಂಡಮಾರುತದ ಪರಿಚಲನೆ ಉಂಟಾಗಿದೆ. ನೈಋತ್ಯ ಮಾರ್ಗದತ್ತ ಸಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶದ ಕರಾವಳಿ ಮೇಲ್ಮೈನಲ್ಲಿ ಹಾಗೂ ಪಶ್ಚಿಮ ಮಧ್ಯ ಬಂಗಾಳಕೊಲ್ಲಿ ಮತ್ತು ಪಕ್ಕದ ಉತ್ತರ ಕರಾವಳಿ ಆಂಧ್ರಪ್ರದೇಶದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ದೂರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದೆ.
ಉತ್ತರ ಕರಾವಳಿ ತಮಿಳುನಾಡು ಮತ್ತು ನೆರೆಹೊರೆಗಳ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ದೂರದಲ್ಲಿ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಕಡಿಮೆ ಗುರುತಿಸಲ್ಪಟ್ಟಿದೆ. ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ದೂರದಲ್ಲಿ ತೆಲಂಗಾಣ ಮತ್ತು ನೆರೆಹೊರೆಗಳ ಮೇಲೆ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸೃಷ್ಟಿಯಾಗಿದೆ.
ಹೀಗೆ ಹವಾಮಾನದಲ್ಲಿ ಉಂಟಾಗಿರುವ ನಿರಂತರ ವೈಪರೀತ್ಯಗಳ ಪ್ರಭಾವದಿಂದ ಕರ್ನಾಟಕದ ಒಳನಾಡು ಜಿಲ್ಲೆಗಳು, ಕರಾವಳಿ ಜಿಲ್ಲೆಗಳು ಹಾಗೂ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಭಾಗದಲ್ಲಿ ಭಾರೀ ಮಳೆ ಎಚ್ಚರಿಕೆ ನಿಡಲಾಗಿದೆ. ಕರ್ನಾಟಕದ ಧಾರವಾಡ, ಹಾವೇರಿ ಸೇರಿ ವಿವಿಧ ಜಿಲ್ಲೆಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.












Click it and Unblock the Notifications