ಯಾದಗಿರಿ:ಆ.18ರಂದು ರೈಲ್ವೆ ಬೋಗಿ ತಯಾರಿಕಾ ಘಟಕ ಲೋಕಾರ್ಪಣೆ
ಯಾದಗಿರಿ, ಆಗಸ್ಟ್ 17 : 7,500 ಕೋಟಿ ರೂ. ವೆಚ್ಚದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಘಟಕವು ಆಗಸ್ಟ್ 18 ಲೋಕಾರ್ಪಣೆಗೊಳ್ಳಲಿದೆ.
ಅಂದಿನ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜನ ಖರ್ಗೆ ಅವರು ರೈಲ್ವೆ ಬೋಗಿ ಕಾರ್ಖಾನೆ ಮಂಜೂರು ಮಾಡಿಸಿಕೊಂಡಿದ್ದರು. ಇದೀಗ ಇದು ಪೂರ್ಣಗೊಂಡಿದ್ದು, ಇದೇ ಶುಕ್ರವಾರದಂದು ರೈಲ್ವೆ ಸಚಿವ ಸುರೇಶ್ ಪ್ರಭು ಉದ್ಘಾಟಿಸಲಿದ್ದಾರೆ.

ಪಂಜಾಬ್‌ನ ಕಪುರ್ತಲಾ, ತಮಿಳುನಾಡಿನ ಪೆರಂಬೂರು, ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಇರುವ ರೈಲ್ವೆ ಕೋಚ್ ಘಟಕಗಳಿವೆ. ಯಾದಗಿರಿ ಜಿಲ್ಲೆಯಲ್ಲಿ ಫಿಯೆಟ್ ಫ್ರೇಮ್‌ಗಳ ತಯಾರಿಕಾ ಘಟಕ ಸ್ಥಾಪಿಸಲಾಗಿದೆ
ಒಟ್ಟು 470 ಕಾರ್ಮಿಕರು ಈ ಘಟಕದಲ್ಲಿ ಕೆಲಸ ಮಾಡಲಿದ್ದು, ಒಂದು ವರ್ಷಕ್ಕೆ 80 ಕೋಟಿ ವೆಚ್ಚದಲ್ಲಿ 600 ಜರ್ಮನಿ ತಂತ್ರಜ್ಞಾನದ ಎಲ್‌ಎಚ್‌ಬಿ ಫ್ರೇಮ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ












Click it and Unblock the Notifications