ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಜನವರಿ 07 : ಹೊಸವರ್ಷದಲ್ಲಿ ರೈಲ್ವೆ ಇಲಾಖೆ ಕರ್ನಾಟಕದ ಜನರಿಗೆ ಕೊಡುಗೆಯೊಂದನ್ನು ನೀಡಿದೆ. ತಾಳಗುಪ್ಪ-ಹುಬ್ಬಳ್ಳಿ ನಡುವಿನ ಹೊಸ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ನೀಡಿದ್ದು, ಅನುದಾನ ಮಂಜೂರು ಮಾಡಿದೆ.

ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್‌ಗೆ ಇಲಾಖೆ ಈ ಕುರಿತು ಅಧಿಕೃತ ಆದೇಶವನ್ನು ಕಳಿಸಿದೆ. ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ- ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಇಲಾಖೆ ಒಪ್ಪಿಗೆ ಕೊಟ್ಟಿದೆ.

ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?

ಈ ಮಾರ್ಗದ ಪಿಇಟಿ (ಪ್ರಿಲಿಮಿನರಿ ಎಂಜಿನಿಯರಿಂಗ್‌ ಕಮ್‌ ಟ್ರಾಫಿಕ್‌) ಸಮೀಕ್ಷೆ ನಡೆಸುವಂತೆ ಇಲಾಖೆ ಹೇಳಿದೆ. ಒಟ್ಟು 158 ಕಿ. ಮೀ. ಮಾರ್ಗದ ಸಮೀಕ್ಷೆಗಾಗಿ 79 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ರೈಲು ಪ್ರಯಾಣ ದರ ಹೆಚ್ಚಳಕ್ಕೆ ಪ್ರಧಾನಿ ಕಾರ್ಯಾಲಯ ಒಪ್ಪಿಗೆರೈಲು ಪ್ರಯಾಣ ದರ ಹೆಚ್ಚಳಕ್ಕೆ ಪ್ರಧಾನಿ ಕಾರ್ಯಾಲಯ ಒಪ್ಪಿಗೆ

Railway Approved For Pet Survey Of Talaguppa Hubballi Line

ಶಿರಸಿ ಶಾಸಕ ಮತ್ತು ಕರ್ನಾಟಕ ವಿಧಾಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ರೈಲ್ವೆಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯನ್ನು ಭೇಟಿ ಮಾಡಿ ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ- ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗಾಗಿ ಮನವಿ ಸಲ್ಲಿಸಿದ್ದರು.

ಮೈಸೂರು-ಬೆಳಗಾವಿ ರೈಲ್ವೆ ಪ್ರಯಾಣಿಕರ ಗಮನಕ್ಕೆ ಮೈಸೂರು-ಬೆಳಗಾವಿ ರೈಲ್ವೆ ಪ್ರಯಾಣಿಕರ ಗಮನಕ್ಕೆ

ತಾಳಗುಪ್ಪ-ಹುಬ್ಬಳ್ಳಿ ರೈಲಿಗಾಗಿ ಹಲವಾರು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದೆ. ಹೊನ್ನಾವರಕ್ಕೆ ಸಾಗರ ಸಮೀಪದ ತಾಳಗುಪ್ಪ ತನಕ ಬರುವ ರೈಲು ಸಿದ್ದಾಪುರ-ಶಿರಸಿ-ಮುಂಡಗೋಡ ಮೂಲಕ ಹುಬ್ಬಳ್ಳಿಗೆ ಬಂದರೆ ಮಲೆನಾಡು ಮತ್ತು ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ.

ಈ ರೈಲು ಮಾರ್ಗದ ಕಾಮಗಾರಿಯೂ ಸುಲಭವಾಗಿದೆ. ರೈಲು ಸೇವೆ ಆರಂಭವಾದರೆ ಸರಕು ಸಾಗಣೆಗೂ ಸಹಾಯಕವಾಗಲಿದ್ದು, ವಾಣಿಜ್ಯೋದ್ಯಮವೂ ಅಭಿವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಇದೆ.

English summary
Railway department ordered for PET (Preliminary engineering-cum-traffic) survey of Talaguppa and Hubballi via Siddapur, Sirsi, Mundagod, Tadas 158 Km line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X