ಬೆಂಗಳೂರಿಂದ ದೆಹಲಿಗೆ ವರ್ಗಾವಣೆಗೊಂಡ ಕಾಂಗ್ರೆಸ್‌ನ ಸಚಿವ ಸ್ಥಾನ ಕಿತ್ತಾಟ
ಬೆಂಗಳೂರು, ಜೂನ್ 04: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಕಿತ್ತಾಟಗಳು ಇಂದು ಅಧಿಕೃತವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಬರಲಿವೆ.
ವಿದೇಶದಿಂದ ವಾಪಸ್ಸಾಗಿರುವ ರಾಹುಲ್ ಗಾಂಧಿ ಅವರೊಂದಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಗುಲಾಂ ನಬಿ ಆಜಾದ್ ಹಾಗೂ ಇನ್ನಿತರ ನಾಯರುಗಳು ಮಾತುಕತೆ ನಡೆಸಲಿದ್ದು, ಅಂತಿಮ ಪಟ್ಟಿಯು ಇಂದು ಅಥವಾ ನಾಳೆ ಸಿದ್ದಗೊಳ್ಳಲಿದೆ.
ಕಾಂಗ್ರೆಸ್‌ಗೆ 22 ಖಾತೆಗಳು ದೊರೆತಿದ್ದು, ವೇಣುಗೋಪಾಲ್ ಈಗಾಗಲೇ ಮೂರು ಮಾದರಿ ಪಟ್ಟಿಗಳನ್ನು ತಯಾರು ಮಾಡಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿದ ಬಳಿಕ ಪಟ್ಟಿ ಅಂತಿಮಗೊಳ್ಳಲಿದೆ.

ಪ್ರದೇಶ, ಜಾತಿ, ಸಾಮರ್ಥ್ಯ, ಜನಬಲಗಳನ್ನು ಗಣನೆಗೆ ತೆಗೆದುಕೊಂಡು ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಭಾರಿ ಪೈಪೋಟಿ ಇರುವ ಕೆಲವು ಖಾತೆಗಳನ್ನು ಬಾಕಿ ಉಳಿಸಿಕೊಳ್ಳುವ ಸಾಧ್ಯತೆಯೂ ಇದೆ.
ನವ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆಗೆ ಚರ್ಚೆ ನಡೆಯಲಿದ್ದು, ಇಂದು ಸಂಜೆ ಅಥವಾ ನಾಳೆ ಪಟ್ಟಿ ಅಂತಿಮಗೊಳ್ಳಲಿದೆ. ಬುಧವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.












Click it and Unblock the Notifications