ಫೆ.24ರಿಂದ ಮತ್ತೆ ರಾಹುಲ್ ಗಾಂಧಿ ರಾಜ್ಯ ಪ್ರವಾಸ
ಬೆಂಗಳೂರು, ಫೆಬ್ರವರಿ 13 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಹಂತದ ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಫೆ.24ರಿಂದ ಎರಡನೇ ಹಂತದ ಪ್ರವಾಸ ಆರಂಭವಾಗಲಿದೆ.
ರಾಹುಲ್ ಗಾಂಧಿ ಅವರು ಫೆಬ್ರವರಿ 24, 25, 26 ರಂದು ಪುನಃ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮುಂಬೈ ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಅವರು ಮೂರು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ.
'ರಾಹುಲ್ ಗಾಂಧಿ ಅವರ ಪ್ರವಾಸದಿಂದ ನಮಗೆ ಲಾಭವಾಗುತ್ತದೆ. ಅವರು ಅಧ್ಯಕ್ಷರಾದ ಮೇಲೆ ಗುಜರಾತ್ ಚುನಾವಣೆಯಲ್ಲಿ ನಮಗೆ ಬಲ ಬಂದಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
In Pics : ಬೀದರ ಅನುಭವ ಮಂಟಪದಲ್ಲಿ ಶರಣೆಂದು ರಾಹುಲ್

ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದರು. ಫೆ.10ರಂದು ಹೊಸಪೇಟೆಯಿಂದ ಅವರು ಪ್ರವಾಸ ಆರಂಭಿಸಿದ್ದರು. ಫೆ.13ರಂದು ಬಸವಕಲ್ಯಾಣದಲ್ಲಿ ಅವರ ಮೊದಲ ಹಂತದ ರಾಜ್ಯ ಪ್ರವಾಸ ಮುಕ್ತಾಯಗೊಂಡಿದೆ.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ರಾಜ್ಯದ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಂಗ್ರೆಸ್ ತೆಗೆದುಕೊಂಡಿದೆ.












Click it and Unblock the Notifications