ಬೆಂಗಳೂರು, ಏಪ್ರಿಲ್ 08 : ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಎಂ.ಜಿ.ರಸ್ತೆಗೆ ತೆರಳಿ, ಪುಸ್ತಕ ಮಳಿಗೆಗೆ ಭೇಟಿ ಕೊಟ್ಟರು.
ಭಾನುವಾರ ರಾಹುಲ್ ಗಾಂಧಿ ವಿಧಾನಸೌಧದಿಂದ ಎಂ.ಜಿ.ರಸ್ತೆಯ ತನಕ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಮೆಟ್ರೋದಲ್ಲಿ ರಾಹುಲ್ ಗಾಂಧಿ ಅವರನ್ನು ನೋಡಿದ ಪ್ರಯಾಣಿಕರು ಸೆಲ್ಫೀ ತೆಗೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸೇರಿದಂತೆ ಎಲ್ಲಾ ನಾಯಕರಿಗೆ ಮೆಟ್ರೋ ಟಿಕೆಟ್ ಖರೀದಿ ಮಾಡಿದರು. ಮೆಟ್ರೋ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರ ಜೊತೆ ಸೆಲ್ಫೀ ತೆಗೆದುಕೊಂಡರು.
ಎಂ.ಜಿ.ರಸ್ತೆಯಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ, ಇತರ ನಾಯಕರು ದಿ ಬುಕ್ ವರ್ಮ್‌ಗೆ ಭೇಟಿ ಕೊಟ್ಟರು. ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ 5 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.
ಒಟ್ಟು 2546 ರೂ. ಬಿಲ್ ಆಯಿತು. ಪುಸ್ತಕ ಮಳಿಗೆಯಲ್ಲಿ ಸಿದ್ದರಾಮಯ್ಯ ಅವರಿಗೆ 546 ರೂ. ರಿಯಾಯಿತಿ ಸಿಕ್ಕಿತು. ಮಳಿಗೆಯಿಂದ ಹೊರಬಂದ ರಾಹುಲ್ ಗಾಂಧಿ ಜನರ ಜೊತೆ ಕೆಲವು ಕಾಲ ಮಾತುಕತೆ ನಡೆಸಿದರು.
Congress President Rahul Gandhi stops by for a post-lunch kulfi in Bengaluru. #JanaAashirwadaYatre #BengaluruNammaHemme pic.twitter.com/KUZyMIGZOF
— Congress (@INCIndia) April 8, 2018
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!