‘ರಾಹುಲ್ ಗಾಂಧಿ ಪ್ರಧಾನಿಯಾಗಬೇಕು’; 26-28 ಎಂಪಿ ಸ್ಥಾನ ಗೆಲ್ಲಲು ಜಿಲ್ಲಾ ಅಧ್ಯಕ್ಷರಿಗೆ ಬಿ.ಕೆ. ಹರಿಪ್ರಸಾದ್‌ ಟಾಸ್ಕ್‌

ಬೆಂಗಳೂರು: ಬೆಂಗಳೂರಿನ ಎಲ್ಲಾ ಸಂಸತ್ ಸ್ಥಾನ ಗೆಲ್ಲಬೇಕು. ಎಂಎಲ್ಎ‌‌ ಸ್ಥಾನಗಳನ್ನು ಹೆಚ್ಚು ನಮ್ಮದಾಗಿಸಿಕೊಳ್ಳಬೇಕು. ನಾವು ಹಿಂದೆ 26, 28 ಎಂಪಿ ಸ್ಥಾನಗಳನ್ನು ಗೆಲ್ಲುತ್ತಾ ಇದ್ದೆವು. ಆದರೆ ಈಗ ಕಾಲ ಬದಲಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಬಿ ಕೆ ಹರಿಪ್ರಸಾದ್‌ ಹೇಳಿದರು.

ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಮಾತನಾಡಿ, ಮತ್ತೆ ಇತಿಹಾಸ ಮರುಕಳಿಸಬೇಕು. ರಾಹುಲ್ ಗಾಂಧಿಯವರು ಪ್ರಧಾನಿಯಾಗಬೇಕು. ಬಿಜೆಪಿಯವರನ್ನು ನಾವು ಓಡಿಸಬೇಕು. ಬಿಜೆಪಿಯವರಿಗೆ ನೋಡಿಕೊಂಡೂ ವಂದೇ ಮಾತರಂ ಹಾಡಲು ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Rahul Gandhi Should Become PM BK Hariprasad Sets Target of Winning 26-28 MP Seats for District Presidents

ಮತ್ತೆ ಅವಕಾಶ ಸಿಕ್ಕೆ ಸಿಗುತ್ತದೆ

ನಂದಕುಮಾರ್ ಅವರು ಈ ಹಿಂದೆ ಬೆಂಗಳೂರು ಕೇಂದ್ರದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ‌ ಮಾಡಿದ್ದರು. ಅವರಿಗೆ ಮತ್ತೆ ಅವಕಾಶ ಸಿಕ್ಕೆ ಸಿಗುತ್ತದೆ. ನಾನೇ ಉದಾಹರಣೆಯಾಗಿದ್ದೇನೆ. ಏಕೆಂದರೆ 53 ವರ್ಷದ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ. ಈಗ ಸರವಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪಕ್ಷದ ಹೈಕಮಾಂಡ್ ನೇಮಕ ಮಾಡಿದ್ದ ವೀಕ್ಷಕರು ಎಲ್ಲರ ಅಭಿಪ್ರಾಯ ಕೇಳಿ ಹೊಸ ಜಿಲ್ಲಾ ಅಧ್ಯಕ್ಷರುಗಳನ್ನು ನೇಮಕ ಮಾಡಿದ್ದಾರೆ. ಈ ಮೊದಲು ಮೊದಲ ಹಂತದ ನಾಯಕರನ್ನೆ ನೇಮಕ ಮಾಡುವ ಪರಿಪಾಠವಿತ್ತು. ಅದನ್ನು ಅಹಮದಾಬಾದ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪರಿಷ್ಕೃರಣೆ ಮಾಡಲಾಯಿತು.

ನಾನು ಸಹ ಈ ಹಿಂದೆ ಗುಜರಾತ್ ರಾಜ್ಯದ ಉಸ್ತುವಾರಿ ಆಗಿದ್ದಾಗ ಪೈಲಟ್ ಯೋಜನೆಯಾಗಿ ಈ ರೀತಿ ಮಾಡಲಾಯಿತು. ಈ ಮೊದಲು ನಮ್ಮನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದವರಿಗೆ ತರಕಾರಿ, ಬೆಣ್ಣೆ ನೀಡಬೇಕಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಸರವಣ ಅವರನ್ನು ನೇಮಕ ಮಾಡಿದ್ದು ರಾಹುಲ್ ಗಾಂಧಿ. ನಿಮಗೆ ಅವರೇ ನಾಯಕರು.

50 ಲಕ್ಷಕ್ಕೂ ಹೆಚ್ಚು ಮತಗಳನ್ನು ಡಿಲೀಟ್

ಜ್ಞಾನೇಶ್ ಕುಮಾರ್ ಎನ್ನುವ ಅಜ್ಞಾನಿ ಯಾರನ್ನು ಎಂಎಲ್ ಎ, ಎಂಎಲ್ ಸಿ, ಎಂಪಿ ಹೀಗೆ ಯಾವುದನ್ನೂ ಆಗೋದಕ್ಕೆ ಬಿಡುವುದಿಲ್ಲ. ಏಕೆಂದರೆ ಬೆಂಗಳೂರು ಒಂದರಲ್ಲೇ 50 ಲಕ್ಷಕ್ಕೂ ಹೆಚ್ಚು ಮತಗಳನ್ನು ಡಿಲೀಟ್ ಮಾಡಲು ಹೊರಟಿದ್ದಾರೆ. ಮತದಾರರ ಹೆಸರುಗಳನ್ನು ಕಿತ್ತು ಹಾಕಲಾಗಿದೆ. ಅರ್ಹ ಮತದಾರರ ಹೆಸರನ್ನು ಬಿಡದಂತೆ ಎಚ್ಚರವಹಿಸಬೇಕು. ಸಬಿಎಲ್ ಓ ಗಳು ಅಲ್ಪಸಂಖ್ಯಾತ, ಪರಿಶಿಷ್ಟರ, ಬಡವರ ಹೆಸರನ್ನು ಉದ್ದೇಶಪೂರ್ವಕವಾಗಿ ಕಿತ್ತುಹಾಕಲಾಗಿದೆ‌. ನಮಗೆ ಜವಾಬ್ದಾರಿ ಹೆಚ್ಚಿದೆ.

ಆರ್ ಎಸ್ ಎಸ್ ಅವರು ಸ್ವಾತಂತ್ರ್ಯ ಹೋರಾಟದ ವೇಳೆ ಈ ದೇಶದ ವಿರುದ್ದ ಇದ್ದವರು. ಬ್ರಿಟಿಷ್‌ ಅವರ ಗುಲಾಮರಾಗಿದ್ದವರು. ಇವರಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಇವರು ಸಾಮಾಜಿಕ ವ್ಯವಸ್ಥೆ ಹೀಗೆಯೆ ಇರಬೇಕು ಎಂದು ಬಯಸುವವರು. ಇದಕ್ಕಾಗಿ ಚುನಾವಣಾ ಆಯೋಗ ಬಳಸಿಕೊಂಡು ಅಲ್ಪಸಂಖ್ಯಾತರ, ದಲಿತರ, ಬಡವರ ಓಟಗಳನ್ನು ಕಸಿಯುತ್ತಿದ್ದಾರೆ. ನಾವು ಜನಪ್ರತಿನಿಧಿಗಳಾಗುತ್ತೀವೋ ಇಲ್ಲವೋ ಗೊತ್ತಿಲ್ಲ. ಆದರೆ ಈ ದೇಶದ ಭವಿಷ್ಯ ಕಾಪಾಡಬೇಕಿದೆ. ಸಂವಿಧಾನವನ್ನ ಉಳಿಸಬೇಕಿದೆ.

ಚುನಾವಣಾ ಆಯೋಗದ ವಿರುದ್ದ ಹೋರಾಟ

ಚುನಾವಣಾ ಆಯೋಗದ ಜ್ಞಾನೇಶ್ ಕುಮಾರ್ ಸ್ಥಾನದಿಂದ ಇಳಿಯುವ ತನಕ ನಾವುಗಳು ವಿಶ್ರಮಿಸಬಾರದು. ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಚುನಾವಣಾ ಆಯೋಗದ ವಿರುದ್ದ ಹೋರಾಟ ಮಾಡಬೇಕು. ಆತ ನೀಚ. ಸಂವಿಧಾನಿಕ ಸಂಸ್ಥೆಯನ್ನು ಇವನಷ್ಟು ದುರುಪಯೋಗ ಮಾಡಿಕೊಂಡವನು ಯಾರೂ ಇಲ್ಲ‌. ಭಾರತೀಯ ಜನತಾಪಾರ್ಟಿಯನ್ನು ನಾವೆಲ್ಲರೂ ಸೇರಿ ಸೋಲಿಸಬೇಕು. ಆಗ ನಮಗೆಲ್ಲರಿಗೂ ಜನಸೇವೆಯ ಅಧಿಕಾರ ದೊರೆಯಲಿದೆ.

ಬೆಂಗಳೂರು ಕೇಂದ್ರವನ್ನು ನಾವೆಲ್ಲರೂ ಮನಸ್ಸು ಮಾಡಿದರೆ ಸುಲಭವಾಗಿ ಗೆಲ್ಲಿಸಬಹುದು. ಮನ್ಸೂರ್ ಅಲಿಖಾನ್ ಅವರು 33 ಸಾವಿರ ಮತಗಳ ಅಂತರದಲ್ಲಿ ಲೋಕಸಭಾ ಸ್ಥಾನ ಸೋತರು. ಇದು ಸೋಲುವ ಅಂತರವಲ್ಲ. ಇಡೀ ಬೆಂಗಳೂರಲ್ಲಿ ಕಾಂಗ್ರೆಸ್ ಎಲ್ಲೂ ಸೋಲದಂತೆ ಜಿಲ್ಲಾ ಅಧ್ಯಕ್ಷರು ಕೆಲಸ ಮಾಡಬೇಕು. 2001 ರಲ್ಲಿ ಯಾವ ಸಾಹುಕಾರನಿಗೆ ಟಿಕೆಟ್ ನೀಡಲಿಲ್ಲ.

ನಿಜವಾದ ಕಾರ್ಯಕರ್ತನಿಗೆ ಟಿಕೆಟ್ ನೀಡಲಾಯಿತು.‌ ಆಗ ಸಣ್ಣ ಸಣ್ಣ ಜಾತಿಗಳಿಗೆ ಟಿಕೆಟ್ ನೀಡಲಾಯಿತು. ಆಗ ಎಲ್ಲರೂ ಈತ ಎಸ್ ಎಂ ಕೃಷ್ಣ ಅವರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡಿದ್ದಾರೆ ಎಂದರು. ನಂತರ ಫಲಿತಾಂಶ ಬಂದಾಗ 100 ಸ್ಥಾನಗಳಲ್ಲಿ 56 ಸ್ಥಾನಗಳನ್ನು ಗೆದ್ದೆವು. 36 ಕ್ಷೇತ್ರಗಳು ಬೆಂಗಳೂರು ದಕ್ಷಿಣದಿಂದ ಗೆಲ್ಲಲಾಯಿತು. ಅವಕಾಶ ನೀಡಿದರೆ ಸಾಕು ನಮ್ಮ ನಾಯಕರು ಗೆಲ್ಲುತ್ತಾರೆ.

ಬಿಜೆಪಿ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಯಾವುದೇ ಅಭಿವೃದ್ಧಿ ವಿಚಾರ ಮಾತನಾಡಲಿಲ್ಲ. ಕೇವಲ ಹಿಜಾಬ್, ಹಲಾಲ್ ಎಂದು ಮಾತನಾಡಿದರು. ನಾವು ಕಾಂಗ್ರೆಸ್ ಅವರು ಅಭಿವೃದ್ಧಿ ಪರ ಮಾತನಾಡೋಣ. ಉದ್ಯೋಗದ ಬಗ್ಗೆ ಆಲೋಚನೆ ಮಾಡೋಣ. ನಾವು ಚುನಾವಣೆಗಾಗಿ ಗ್ಯಾರಂಟಿ ನೀಡಲಿಲ್ಲ. ಜನರನ್ನು ಕಾಪಾಡಲು ಗ್ಯಾರಂಟಿ ನೀಡಿದೆವು. ಮಹಾನಾಯಕ ಬಂದ ಮೇಲೆ ಈ ದೇಶದ ಯುವಜನ ಹೆಚ್ಚು ನಿರುದ್ಯೋಗಿಗಳಾಗಿದ್ದಾರೆ.

ನಮ್ಮ ತಳಮಟ್ಟದ, ಜಿಲ್ಲಾ ಮಟ್ಟದ‌ ನಾಯಕರು ಕಾಂಗ್ರೆಸ್ ‌ಅಲೆ ಏಳಬೇಕು. ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ. ಸದಾ ಹರಿಯುವ ನದಿ. ಇಂದು ನಾನಿರುತ್ತೇನೆ. ನಾಳೆ ಇನ್ನೊಬ್ಬರು ಬರುತ್ತಾರೆ. ಆದ ಕಾರಣ ಅವಕಾಶ ಸಿಗದೇ ಹೋದವರು ಬೇಸರಪಟ್ಟುಕೊಳ್ಳಬಾರದು. ಏಕೆಂದರೆ ಕಾಂಗ್ರೆಸ್ ಪಕ್ಷ ನಂಬಿದವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ನಾನು ಇದನ್ನು ನೋಡಿಯೂ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+