ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆಗೆ ಮುನ್ನಾ ರಾಹುಲ್ ಗಾಂಧಿ-ಕುಮಾರಸ್ವಾಮಿ ಮಹತ್ವದ ಭೇಟಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಮೈತ್ರಿ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆಗೂ ಮುನ್ನಾ ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲಿದ್ದು. ಹಲವು ಕಾರಣಗಳಿಗೆ ಈ ಭೇಟಿ ಮಹತ್ವದ ಮೂಡಿದೆ.

ಕುಮಾರಸ್ವಾಮಿ ಅವರು ಅಕ್ಟೋಬರ್‌ 6 ರಂದು ದೆಹಲಿಗೆ ಹಾರಲಿದ್ದು, ಅಂದು ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘವಾದ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಮಾರಸ್ವಾಮಿ ಜೊತೆಗೆ ಅಂದು ಕಾಂಗ್ರೆಸ್‌ ನಾಯಕರೂ ತೆರಳುತ್ತಾರಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಆದರೆ ಸಂಪುಟ ವಿಸ್ತಣೆಗೆ ಮುನ್ನಾ ಆಗಲಿರುವ ಈ ಭೇಟಿ ಮಹತ್ವದ್ದೇ ಆಗಿದೆ.

ದೇವೇಗೌಡರಿಂದ ಸಿಕ್ತು ಗ್ರೀನ್ ಸಿಗ್ನಲ್, ಅ. 12ರೊಳಗೆ ಸಂಪುಟ ವಿಸ್ತರಣೆದೇವೇಗೌಡರಿಂದ ಸಿಕ್ತು ಗ್ರೀನ್ ಸಿಗ್ನಲ್, ಅ. 12ರೊಳಗೆ ಸಂಪುಟ ವಿಸ್ತರಣೆ

ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ದೂರುಗಳ ಸುರಿಮಳೆ ಸುರಿಸಿದ್ದರು. ಈ ಬಗ್ಗೆ ಹೈಕಮಾಂಡ್‌ ಬಳಿ ಮಾತನಾಡುವುದಾಗಿ ಭರವಸೆಯನ್ನು ನೀಡಲಾಗಿತ್ತು. ಅದರ ಭಾಗವಾಗಿಯೇ ಈಗ ರಾಹುಲ್ ಅವರು ಎಚ್‌ಡಿಕೆಯನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಎಚ್‌ಡಿಕೆಗೆ ಕಿವಿ ಹಿಂಡಲಿರುವ ರಾಹುಲ್‌

ಎಚ್‌ಡಿಕೆಗೆ ಕಿವಿ ಹಿಂಡಲಿರುವ ರಾಹುಲ್‌

ಏಕಪಕ್ಷೀಯವಾಗಿ ಆಡಳಿತ ಮಾಡದೆ, ಜೆಡಿಎಸ್ ಮತ್ತು ಕಾಂಗ್ರೆಸ್‌ ಶಾಸಕರನ್ನು ಸಮಾನವಾಗಿ ಕಾಣುವಂತೆ, ರಾಹುಲ್ ಗಾಂಧಿ ಅವರು ಕುಮಾರಸ್ವಾಮಿ ಅವರಿಗೆ ಕಿವಿ ಹಿಂಡು ಸಾಧ್ಯತೆ ಇದೆ.

ಜೆಡಿಎಸ್‌ ಖಾತೆ ಕಾಂಗ್ರೆಸ್‌ ಪಡೆಯುತ್ತಾರಾ?

ಜೆಡಿಎಸ್‌ ಖಾತೆ ಕಾಂಗ್ರೆಸ್‌ ಪಡೆಯುತ್ತಾರಾ?

ಸಂಪುಟ ವಿಸ್ತರಣೆ ಮುನ್ನಾ ಈ ಭೇಟಿ ನಡೆಯುತ್ತಿರುವ ಕಾರಣ ಈ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ. ಕಾಂಗ್ರೆಸ್‌ನಲ್ಲಿ ಸಚಿವಾಕಾಂಕ್ಷಿಗಳು ಹೆಚ್ಚಿದ್ದು, ಜೆಡಿಎಸ್‌ ಬಳಿ ಉಳಿದಿರುವ ಒಂದು ಖಾತೆಯನ್ನು ರಾಹುಲ್ ಮಧ್ಯಸ್ಥಿಕೆಯಿಂದ ಕಾಂಗ್ರೆಸ್‌ ಪಡೆದುಕೊಳ್ಳುವ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ರಾಹುಲ್ ಭೇಟಿ ಮಾಡುತಿದ್ದಾರೆ ಎನ್ನುತ್ತಿವೆ ಮೂಲಗಳು.

ವಿಡಿಯೋ: ತಿಂದ ತಟ್ಟೆ ತೊಳೆದಿಟ್ಟ ಕಾಂಗ್ರೆಸ್‌ನ ರಾಜಕುಮಾರವಿಡಿಯೋ: ತಿಂದ ತಟ್ಟೆ ತೊಳೆದಿಟ್ಟ ಕಾಂಗ್ರೆಸ್‌ನ ರಾಜಕುಮಾರ

ಕಾಂಗ್ರೆಸ್ ನಾಯಕರ ಬಗ್ಗೆ ಮಾಹಿತಿ

ಕಾಂಗ್ರೆಸ್ ನಾಯಕರ ಬಗ್ಗೆ ಮಾಹಿತಿ

ಅಷ್ಟೆ ಅಲ್ಲದೆ, ಮೈತ್ರಿ ಸರ್ಕಾರದ ಕಾರ್ಯಗಳು, ಜನರಿಗೆ ಸರ್ಕಾರದ ಬಗ್ಗೆಗಿನ ಅಭಿಪ್ರಾಯ, ಕಾಂಗ್ರೆಸ್ ನಾಯಕರ ಬಗ್ಗೆ ಮಾಹಿತಿ ಹೀಗೆ ಹಲವು ಪ್ರಮುಖ ವಿಷಯಗಳು ರಾಹುಲ್ ಹಾಗೂ ಕುಮಾರಸ್ವಾಮಿ ನಡುವೆ ಚರ್ಚೆ ಆಗಲಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಹ ಅಂದು ಅಲ್ಲಿಯೇ ಇರಲಿದ್ದಾರೆ.

ಲೋಕಸಭೆ ಚುನಾವಣೆ ಸೀಟು ಹಂಚಿಕೆ

ಲೋಕಸಭೆ ಚುನಾವಣೆ ಸೀಟು ಹಂಚಿಕೆ

ಲೋಕಸಭೆ ಚುನಾವಣೆ ಸಮೀಪ ಬರುತ್ತಿದ್ದು, ಅದರ ಪ್ರಚಾರ, ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಇನ್ನಿತರ ವಿಷಯಗಳು ಅಂದು ಚರ್ಚೆ ಆಗುವ ಸಾಧ್ಯತೆ ದಟ್ಟವಾಗಿದೆ.

ರಾಹು, ಕೇತು, ಶನಿ... ಸಿದ್ದು ಹೇಳಿಕೆಗೆ ಮೌನವೇ ಉತ್ತರ ಎಂದ ಸಿಎಂ!ರಾಹು, ಕೇತು, ಶನಿ... ಸಿದ್ದು ಹೇಳಿಕೆಗೆ ಮೌನವೇ ಉತ್ತರ ಎಂದ ಸಿಎಂ!

English summary
AICC president Rahul Gandhi and Karnataka CM Kumaraswamy meeting on October 6th in Delhi. This meeting created curiosity because meeting going to happen before the cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X