ಚಿಕ್ಕಮಗಳೂರಿನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?

ಚಿಕ್ಕಮಗಳೂರು, ಮಾರ್ಚ್ 21 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂರು ದಿನಗಳ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಚಿಕ್ಕಮಗಳೂರಿನ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ರಾಹುಲ್ ಗಾಂಧಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. 'ನಾನು ದುರ್ಬಲರು, ಅವಕಾಶ ವಂಚಿತರ ಪರ ನಿಲ್ಲುವವನು. ನನಗೆ ನೀವು ಒಂದು ಅವಕಾಶ ಕೊಡಿ ನಾನು ದುರ್ಬಲರ, ಬಡವರ ಪರ ಹೋರಾಡುತ್ತೇನೆ' ಎಂದು ಮನವಿ ಮಾಡಿದರು.

Rahul Gandhi

ಚಿಕ್ಕಮಗಳೂರಿನಲ್ಲಿ ರಾಹುಲ್ ಹೇಳಿದ್ದೇನು?

* ಚಿಕ್ಕಮಗಳೂರಿಗೆ ಬಂದಿದ್ದು ಸಂತೋಷ ತಂದಿದೆ. ನನ್ನ ಅಜ್ಜಿಯ ಕಷ್ಟ ಕಾಲದಲ್ಲಿ ಈ ಜಿಲ್ಲೆಯ ಜನ ಸಹಕಾರ ಕೊಟ್ಟಿದ್ದರು. ನನ್ನ ಅಜ್ಜಿಯನ್ನು ವಿರೋಧಿಗಳು ರಾಜಕೀಯವಾಗಿ ಸೋಲಿಸಲು ಮುಂದಾಗಿದ್ದರು. ಆಗ ಅಜ್ಜಿಯ ಬೆನ್ನಿಗೆ ನಿಂತವರು ಈ ಜಿಲ್ಲೆಯ ಜನ.

* ಇಂದಿರಾ ಗಾಂಧಿಯವರಿಗೆ ಇಲ್ಲಿನ ಜನ ರಾಜಕೀಯ ಶಕ್ತಿ ತುಂಬಿದವರು. ನಾನು ಸಹ ಇಂದಿರಾ ಗಾಂಧಿ ಅವರ ಹಾಗೆ ಯೋಚಿಸುವವನು. ನಾನು ದುರ್ಬಲರ, ಬಡವರ ಪರ ಹೋರಾಟ ಮಾಡುತ್ತೇನೆ.

* ಶೃಂಗೇರಿ ಮಠದಲ್ಲಿ 14 ವರ್ಷದ ಬಾಲಕರಿಗೆ ಧರ್ಮದ ಅರ್ಥ ಗೊತ್ತಿದೆ. ಆದರೆ, ನಮ್ಮ ದೇಶದ ಪ್ರಧಾನಿಗಳಿಗೆ ಧರ್ಮದ ಅರ್ಥ ಇನ್ನೂ ಗೊತ್ತಾಗಿಲ್ಲ.

* ಪ್ರಧಾನಿಗಳು ಎಲ್ಲೆಡೆ ಸುಳ್ಳು ಹೇಳುತ್ತಿದ್ದಾರೆ. ಬಸವಣ್ಣರವರ ನುಡಿದಂತೆ ನಡೆ ಮಾತು ಮೋದಿಯವರಿಗೆ ಇನ್ನೂ ಗೊತ್ತಾಗಿಲ್ಲ. ಮೋದಿಯವರು ನುಡಿದಂತೆ ನಡೆದುಕೊಳ್ಳುತ್ತಿಲ್ಲ.

In Pics: ಕರ್ನಾಟಕದಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ

* ದೇಶಕ್ಕೆ ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಪ್ರಧಾನಿಗಳು ಹೇಳಿದ್ದರು. ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ, 10 ರೂ. ಸಹ ಜನರ ಖಾತೆಗೆ ಪ್ರಧಾನಿಗಳು ಹಾಕಲಿಲ್ಲ.

* ಬಿಜೆಪಿಯವರು ಈ ದೇಶವನ್ನು ಒಡೆಯುತ್ತಿದ್ದಾರೆ. ಅವರು ಒಡೆಯುತ್ತಿರುವ ಭಾರತವನ್ನು ನಾನು ಒಗ್ಗೂಡಿಸುವೆ. ಈ ಕೆಲಸಕ್ಕಾಗಿ ನನಗೊಂದು ಅವಕಾಶವನ್ನು ನೀಡಿ.

* ಪ್ರಧಾನಿಗಳು ದೇಶದ 15 ಶ್ರೀಮಂತ ಉದ್ಯಮಿಗಳು ಸಾಲ ಮನ್ನಾ ಮಾಡಿದರು. ಆದರೆ, ಈ ದೇಶದ ರೈತರ ಸಾಲ ಮನ್ನಾ ಮಾಡಲು ಪ್ರಧಾನಿಗಳಿಗೆ ಆಗಿಲ್ಲ. ನಾನೊಮ್ಮೆ ಪ್ರಧಾನಿಗಳನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡಲು ಕೇಳಿಕೊಂಡೆ. ಆದರೆ, ಅವರು ಉತ್ತರವನ್ನು ನೀಡಲಿಲ್ಲ.

* ಸಿದ್ದರಾಮಯ್ಯ ಅವರಿಗೆ ರಾಜ್ಯದ ರೈತರ ಸಾಲಮನ್ನಾ ಮಾಡುವಂತೆ ಕೇಳಿದೆ. ಹತ್ತು ದಿನದೊಳಗೆ ರೈತರ ಸಾಲಮನ್ನಾ ಮಾಡಿದರು.

* ಪ್ರಧಾನಿಗಳು ಎಲ್ಲಿ ಹೋದರೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕದ ಸಾಮಾನ್ಯ ಬಾಲಕರಿಗೆ ಧರ್ಮದ ಬಗ್ಗೆ ಇರುವಷ್ಟು ತಿಳುವಳಿಕೆಯೂ ಪ್ರಧಾನಿ ಅವರಿಗೆ ಇಲ್ಲ. ಇದು ಸತ್ಯದ ನಾಡು, ನಾನಿಲ್ಲಿ ಸುಳ್ಳು ಹೇಳಲು ಬಂದಿಲ್ಲ.

* ಈ ವೇದಿಕೆಯಲ್ಲಿ ನಾನೊಂದು ಮಾತು ಹೇಳುವೆ. ರೈತರ, ಕಾರ್ಮಿಕರ, ಬಡವರ ಪರ ಕೆಲಸಗಳನ್ನು ಮಾಡಿ ತೋರಿಸುತ್ತೇನೆ. ಆದರೆ, ಹೇಳಿಕೊಳ್ಳುವುದಿಲ್ಲ. ಏಕಂದರೆ ನಾವು ಮಾತಾಡುವ ಮಾತುಗಳಿಗೆ ತೂಕ ಇರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+