ರಾಘವೇಶ್ವರ ಶ್ರೀ ನಕಲಿ ಅಶ್ಲೀಲ ಸಿಡಿ: ಸರಕಾರದ ಕ್ರಮಕ್ಕೆ ತೀವ್ರ ಹಿನ್ನಡೆ

Posted By:
Subscribe to Oneindia Kannada

ಬೆಂಗಳೂರು, ಡಿ 11: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ ಹಿಂಪಡೆದಿರುವ ಸರಕಾರದ ನಿರ್ಧಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ನೇಮಕವಾಗಿದ್ದ ವಿಶೇಷ ಸರಕಾರಿ ಅಭಿಯೋಜಕ ಅಶೋಕ್ ನಾಯ್ಕ ಅವರು ಈ ಸಂಬಂಧ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಹಿಂದಿನ ಹಲವು ರೂಲಿಂಗ್ ಗಳನ್ನು ಉಲ್ಲೇಖಿಸಿ ಪತ್ರ ಬರೆದಿರುವ ನಾಯ್ಕ, ಸರಕಾರದ ಅಭಿಯೋಜಕರು ಪ್ರಕರಣ ಹಿಂಪಡೆಯುವ ಮುನ್ನ ನ್ಯಾಯಾಲಯಕ್ಕೆ ಸಕಾರಣಗಳನ್ನು ನೀಡಬೇಕಾಗುತ್ತದೆ. (ಅಶ್ಲೀಲ ಸಿಡಿ ಪ್ರಕರಣ : ಸರ್ಕಾರಕ್ಕೆ ಭಕ್ತರ ಪ್ರಶ್ನೆಗಳು)

ಸರಕಾರಿ ಅಭಿಯೋಜಕರು ಮೊಕದ್ದಮೆ ಹಿಂತೆಗೆತದ ಬಗ್ಗೆ ಸ್ವತಂತ್ರ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಸದುದ್ದೇಶದಿಂದ, ಸಾರ್ವಜನಿಕ ಹಿತಾಶಕ್ತಿ ಪರಿಗಣಿಸಿ ಮೊಕದ್ದಮೆ ಹಿಂತೆಗೆತದ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ನಾಯ್ಕ ಪತ್ರದಲ್ಲಿ ಬರೆದಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಇದಲ್ಲದೇ ಸ್ಪಷ್ಟವಾಗಿ ರಾಘವೇಶ್ವರ ಶ್ರೀಗಳ ಹೆಸರಿಗೆ ಮಸಿ ಬಳೆಯುವ ಹುನ್ನಾರ ಇದು ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ ಎಂದು ಎಸ್ಪಿಪಿ ನಾಯ್ಕ ಆರು ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಶೋಕ್ ನಾಯ್ಕ ಉಲ್ಲೇಖಿಸಿರುವ ಆರು ಅಂಶಗಳು, ಸ್ಲೈಡಿನಲ್ಲಿ..

ಗೋಕರ್ಣದ ಮಹಾಬಲೇಶ್ವರ ದೇಗುಲ

ಗೋಕರ್ಣದ ಮಹಾಬಲೇಶ್ವರ ದೇಗುಲ

ಐತಿಹಾಸಿಕ ಗೋಕರ್ಣದ ಮಹಾಬಲೇಶ್ವರ ದೇಗುಲವನ್ನು ರಾಮಚಂದ್ರಾಪುರ ಮಠದ ಆಡಳಿತದಿಂದ ತಪ್ಪಿಸಲು ಶ್ರೀಮಠದ ಮತ್ತು ರಾಘವೇಶ್ವರ ಶ್ರೀಗಳ ಘನತೆಗೆ ಧಕ್ಕೆ ಉಂಟಾಗುವಂತೆ ಆರೋಪಿತರುಗಳು ಕೃತ್ಯ ಎಸಗಿರುವುದಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿರುತ್ತವೆ.

ಮಲ್ಲಿಕಾ ಶೆರಾವತ್ ಅರೆನಗ್ನ ಚಿತ್ರ

ಮಲ್ಲಿಕಾ ಶೆರಾವತ್ ಅರೆನಗ್ನ ಚಿತ್ರ

ಶ್ರೀಗಳ ಖ್ಯಾತಿಗೆ ಕುಂದು ತರುವಂತೆ ಮೊದಲನೇ ಆರೋಪಿ ಬಾಲಚಂದ್ರ, ಶ್ರೀಗಳನ್ನು ಹೋಲುವ ವೇಷ ಧರಿಸಿ ಫೋಟೋ ತೆಗೆಸಿ, ಕಂಪ್ಯೂಟರ್ ತಂತ್ರಜ್ಞಾನದಿಂದ ಮಲ್ಲಿಕಾ ಶೆರಾವತ್ ಅರೆನಗ್ನ ಚಿತ್ರ ಸೇರ್ಪಡಿಸಿರುವ ಬಗ್ಗೆಯೂ ಸಾಕ್ಷ್ಯಾಧಾರಗಳಿರುತ್ತವೆ.

ಖ್ಯಾತ ಚಿತ್ರನಟಿಯರ ಅಶ್ಲೀಲ ಚಿತ್ರಗಳು

ಖ್ಯಾತ ಚಿತ್ರನಟಿಯರ ಅಶ್ಲೀಲ ಚಿತ್ರಗಳು

ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಕಾಜೋಲ್, ಕಾವ್ಯ ಮಾಧವನ್, ರೋಜ, ಸ್ನೇಹ ಹೀಗೆ ಹಲವು ಖ್ಯಾತ ಚಿತ್ರನಟಿಯರ ಮುಖಗಳಿಗೆ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿದ ಮಹಿಳೆಯರ ನಗ್ನ, ಅರೆನಗ್ನ ಭಾಗದ ದೇಹದ ಭಾಗಗಳನ್ನು ಸೇರ್ಪಡಿಸಿ ಅಶ್ಲೀಲ ಚಿತ್ರ ತಯಾರಿಸಿ ಮಹಿಳೆಯರ ಗೌರವಕ್ಕೆ ಕುಂದು ತರುವಂತಹ ಅಪರಾಧಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿರುತ್ತವೆ.

ಶ್ರೀಗಳನ್ನು ಅವಮಾನಗೊಳಿಸುವ ಉದ್ದೇಶ

ಶ್ರೀಗಳನ್ನು ಅವಮಾನಗೊಳಿಸುವ ಉದ್ದೇಶ

ಮಠ ಮತ್ತು ಶ್ರೀಗಳನ್ನು ಅವಮಾನಗೊಳಿಸುವ ಉದ್ದೇಶದಿಂದ ಏಪ್ರಿಲ್ 1, 2010ರಂದು ಹೋಳಿ ಹಬ್ಬದ ದಿನದಂದು ಮುಂಜಾನೆ ಮೂರು ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ನಕಲಿ ಸಿಡಿಯನ್ನು ವಿತರಿಸಿರುವುದಕ್ಕೆ ಸಾಕ್ಷಿಗಳಿವೆ.

ಸಮೂಹಗಳ ನಡುವೆ ಸಂಘರ್ಷ

ಸಮೂಹಗಳ ನಡುವೆ ಸಂಘರ್ಷ

ಅತಿದೊಡ್ಡ ಭಕ್ತ ಸಮುದಾಯವನ್ನು ಹೊಂದಿರುವ ಮಠ ಮತ್ತು ಶ್ರೀಗಳಿಗೆ ಅವಮಾನಿಸಿ ಭಕ್ತ ಸಮುದಾಯದ ನಡುವೆ ಸಂಘರ್ಷ ಏರ್ಪಡಿಸಿ, ಸಮಾಜದ ಸಾರ್ವಜನಿಕ ನೆಮ್ಮದಿಯನ್ನು ಕೆಡಿಸಿ, ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶವಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ.

ಪೊನ್ಮುಡಿ ಸರಕಾರಿ ಬಂಗಲೆ

ಪೊನ್ಮುಡಿ ಸರಕಾರಿ ಬಂಗಲೆ

ಆರೋಪಿತರುಗಳು ಕೇರಳದ ಪೊನ್ಮುಡಿ ಸರಕಾರಿ ಬಂಗಲೆಯಲ್ಲಿ ಓರ್ವ ವ್ಯಕ್ತಿ ಓರ್ವ ಮಹಿಳೆಯೊಂದಿಗೆ ಸಂಭೋಗ ಕ್ರಿಯೆ ನಡೆಸುವುದನ್ನು ಆ ಪುರುಷ ವ್ಯಕ್ತಿಯ ಮುಖ ಕಾಣದಂತೆ ವಿಡಿಯೋ ಚಿತ್ರೀಕರಣ ಮಾಡಿರುವ ವಿಚಾರ ಆರೋಪಿಗಳ ಕಂಪ್ಯೂಟರ್ ನಲ್ಲಿ ಪತ್ತೆಯಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raghaveshwara Seer of Ramachandrapura Mutt fake CD withdrawal case: Special Public Prosecutor Ashok Naik objects government decision.
Please Wait while comments are loading...