ಕೆಂಪು ಚೆಂದುಳ್ಳಿ ಚಲುವೆ ಕಾವಲಿಗೆ ನಿಂತ ಗುಳಿಕೆನ್ನೆ ಬೆಡಗಿ
ನೀವು ಗದ್ದೆಗಳಿಗೆ, ಹೊಲಗಳಿಗೆ ಹೋದಾಗ ಅಲ್ಲಿ ಹುಲ್ಲಿನ ಒಂದು ಬೆದುರು ಗೊಂಬೆಯನ್ನು ಮಾಡಿರುತ್ತಾರೆ. ದೊಡ್ಡದಾದ ಆಕೃತಿಯನ್ನು ನಿರ್ಮಿಸಿ, ಅದಕ್ಕೆ ಮನಷ್ಯನ ರೂಪ ಕೊಟ್ಟು, ಶರ್ಟ್ ಪ್ಯಾಂಟ್ ತೊಡಿಸಿರುತ್ತಾರೆ. ಇದರಿಂದ ಪ್ರಾಣಿಗಳಿಂದ ಬೆಳೆಗಳನ್ನು ಕಾಪಾಡುವುದು ರೈತರ ಪ್ಲ್ಯಾನ್. ಆದರೆ ಇಲ್ಲಬ್ಬೊ ರೈತ ತಾನು ಬೆಳೆದ ಟೊಮೆಟೊ ಕಾಯೋಕೆ ಖ್ಯಾತ ನಟಿಯರನ್ನೇ ಬಳಸಿಕೊಂಡು ಸದ್ದು ಮಾಡುತ್ತಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಆಗುತ್ತಿದೆ. ಇನ್ನು ಕೆಲವು ಭಾಗದಲ್ಲಿ ಮಳೆ ಆಗುತ್ತಿಲ್ಲ. ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳುವುದು ರೈತನಿಗೆ ದೊಡ್ಡ ಸವಾಲೇ ಆಗಿರುತ್ತದೆ. ಅದಕ್ಕಾಗಿ ರೈತ ತರಹೇವಾರಿ ಪ್ಲ್ಯಾನ್ ಮಾಡಿರುತ್ತಾನೆ. ಅದರಲ್ಲಿ ಈಗ ಭಾರೀ ವೈರಲ್ ಆಗುತ್ತಿರುವ ಫೋಟೋ, ಟೊಮೊಟೋವನ್ನು ಖ್ಯಾತ ಚಿತ್ರ ನಟಿಯರು ಕಾವಲು ಕಾಯುತ್ತಿದ್ದಾರೆ. ಈ ದೃಶ್ಯ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.

ಜಿಲ್ಲೆಯ ಶಿಡ್ಲಘಟ್ಟಾ ತಾಲೂಕಿನ ಹಂಡಿಗನಾಳ ಗ್ರಾಮದ ರೈತನ ಪ್ಲ್ಯಾನ್ ಈಗ ಸದ್ಯ ಭಾರೀ ವೈರಲ್ ಆಗುತ್ತಿದೆ. ತಾನು ಬೆಳೆದ ಟೊಮೆಟೋ ಬೆಳೆಯನ್ನು ರಕ್ಷಿಸಲು ಈತ ಬೆದರು ಗೊಂಬೆಯನ್ನು ನಿರ್ಮಿಸುವುದು ಬಿಟ್ಟು, ಖ್ಯಾತ ಕನ್ನಡದ ನಟಿಯರಾದ ರಚಿತಾ ರಾಮ, ಬಾಲಿವುಡ್ ನಟಿ ಸನ್ನಿಲಿಯೋನ್‌ರ ಭಾವಚಿತ್ರವನ್ನು ಬಳಸಿಕೊಂಡಿದ್ದಾರೆ.
ಟೊಮ್ಯಾಟೋ ಬೆಲೆ ಭಾರೀ ಬೇಡಿಕೆ
ಸದ್ಯ ಟೊಮೆಟೋಗೆ ಭಾರೀ ಬೇಡಿಕೆ ಇದ್ದು, ಇದರ ಬೆಲೆ ಕ್ವಿಂಟಲ್‌ಗೆ 4000 ದಿಂದ 5000 ಗಡಿ ದಾಟಿದೆ. ಇಷ್ಟು ವರ್ಷ ಜೋಪಾನವಾಗಿ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತ ದೀಪಕ್ ಮಾಡಿದ ಪ್ಲ್ಯಾನ್ ಸಕತ್ ವೈರಲ್ ಆಗುತ್ತಿದೆ. ತಾನು ಬೆಳೆದ ಬೆಳೆಗೆ ಜನರ ದೃಷ್ಟಿ ತಾಗದೇ ಇರಲಿ ಎಂದು ದೀಪಕ್ ಮಾಡಿರುವ ಪ್ಲ್ಯಾನ್ ಎಲ್ಲಡೆ ಸದ್ದು ಮಾಡುತ್ತಿದೆ. ಇದಕ್ಕೆ ಅವರು ಬಳಸಿಕೊಂಡಿದ್ದ ಎರಡೂ ಪೋಟೋಗಳು ವಿಶೇಷವಾಗಿವೆ.
ನಟಿಯರ ಕಾವಲು
ನಟಿ ರಚಿತಾ ರಾಮ್‌ಗೆ ಕನ್ನಡದಲ್ಲಿ ಖ್ಯಾತಿ ಇದೆ. ಅಲ್ಲದೆ ಅಭಿಮಾನಿಗಳು ಸಹ ಸಾಕಷ್ಟು ಇದ್ದಾರೆ. ಊರಿನವರ ದೃಷ್ಟಿ ತಮ್ಮ ಬೆಳೆಗೆ ಆಗದೆ ಅವರ ದೃಷ್ಟಿ ಡಿಂಪಲ್ ಕ್ವೀನ್ ರಚಿತಾ ಮೇಲೆ ಬೀಳಲಿ ಎಂಬುದೇ ದಿಪಕ್ ಅವರ ಪ್ಲ್ಯಾನ್ ಆಗಿದೆ. ಇನ್ನು ಸನ್ನಿಲಿಯೋನ್‌ಗೂ ರಾಜ್ಯದಲ್ಲಿ ಭಾರೀ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲ ಇವರ ಅಭಿಮಾನಿಗಳ ಸಂಘ ಸಹ ಇದ್ದು, ಇವರ ಫೋಟೋ ಹಾಕಿ ಜನರ ಚಿತ್ತವನ್ನು ನಟಿಯರತ್ತ ನೆಡುವಂತೆ ಆಗಿದೆ.
ಹೀಗೆ ಬೆಳೆಗಳಿಗೆ ನಟಿಯರ ಹಾಗೂ ಮಹಿಳೆಯರ ಫೋಟೋಗಳನ್ನು ಬಳಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ಬಾಳೆ ತೋಟವನ್ನು ಕಾಪಾಡಲು ರೈತ ಇದೇ ತಂತ್ರವನ್ನು ಅನುಸರಿಸಿದ್ದರು. ಅಲ್ಲದೆ ದಾವರಣಗೆರೆ ಭಾಗದಲ್ಲೂ ಇದೇ ಟ್ರೆಂಡ್ ಆಗಿದೆ.












Click it and Unblock the Notifications