ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ತೇಲಿ ಬಂತು
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೆಸರು ಕೇಳಿ ಬಂದಿದೆ. ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಅವರು ಕರ್ನಾಟಕ ರಾಜ್ಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಲ್ಲಿ ಭಾರಿ ಚಟುವಟಿಕೆ ಆರಂಭವಾಗಿದೆ.
ಬೆಂಗಳೂರು, ಮೇ 10: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೆಸರು ಕೇಳಿ ಬಂದಿದೆ. ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಅವರು ಕರ್ನಾಟಕ ರಾಜ್ಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಲ್ಲಿ ಭಾರಿ ಚಟುವಟಿಕೆ ಆರಂಭವಾಗಿದೆ.
2018ರ ವಿಧಾನಸಭೆ ಚುನಾವಣೆ ಎದುರಿಸಲು ಸಮರ್ಥ ನಾಯಕನ ಹುಡುಕಾಟದಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಈಗ ಖರ್ಗೆ ಅವರನ್ನು ರಾಜ್ಯ ರಾಜಕೀಯದತ್ತ ಮರಳು ಸೂಚಿಸುವ ಸಾಧ್ಯತೆಯಿದೆ.
ಕೆ ಪಿ ಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಹೆಸರು ಅಂತಿಮವಾಗದ ಕಾರಣ, ಕಾಂಗ್ರೆಸ್ ಹೈಕಮಾಂಡ್ ಹೊಸ ಹೆಸರನ್ನು ಸೂಚಿಸಿದ್ದು, ಮಲ್ಲಿಕಾರ್ಜನ ಖರ್ಗೆ ಅವರು ಮುಂದಿನ ಅಧ್ಯಕ್ಷ ಹಾಗೂ ಸಿಎಂ ಅಭ್ಯರ್ಥಿಯಾಗಿ ಮುಂದಿನ ಚುನಾವಣೆ ಎದುರಿಸಲಿದ್ದಾರೆ ಎಂಬುದು ಈ ಸಮಯದ ಬ್ರೇಕಿಂಗ್ ನ್ಯೂಸ್.
ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಕಳೆದ ಮೂರು ತಿಂಗಳಿನಿಂದ ಲಾಬಿ ನಡೆಯುತ್ತಿದೆ. ಲಿಂಗಾಯತ, ಒಕ್ಕಲಿಗ, ದಲಿತ ಮುಖಂಡರು ಈ ಹುದ್ದೆ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿದ್ದಾರೆ. ಹಾಲಿ ಅಧ್ಯಕ್ಷ ಪರಮೇಶ್ವರ್ ಅವರು ಕೂಡ ಮತ್ತೊಂದು ಅವಧಿಗೆ ಮುಂದುವರಿಸುವಂತೆ ಹೈಕಮಾಂಡ್‍ಗೆ ಮನವಿ ಮಾಡಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಒಲವು ತೋರಿದ್ದರು. ಆದರೆ, ಈಗ ಪರಮೇಶ್ವರ್ ಅವರು ಇನ್ನೊಂದು ಅವಧಿಗೆ ಮುಂದುವರೆಯುವುದಿಲ್ಲ ಎಂದು ಖರ್ಗೆ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ಸಿಎಂ ಅಭ್ಯರ್ಥಿಯಾಗಿ ಖರ್ಗೆ
ಲೋಕಸಭೆ ವಿಪಕ್ಷ ಸ್ಥಾನವನ್ನು ಮಲ್ಲಿಕಾರ್ಜನ ಖರ್ಗೆ ಅವರು ತೊರೆದರೆ ಅವರ ಸ್ಥಾನಕ್ಕೆ ಯಾರನ್ನು ನೇಮಿಸಲಾಗುತ್ತದೆ. ಅದಲ್ಲದೆ Public Committee ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಏಳುತ್ತದೆ. ಕೆಪಿ ಸಿಸಿ ಅಧ್ಯಕ್ಷ ಸ್ಥಾನಕ್ಕೇರದಿದ್ದರೂ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರಿ ಪೈಪೋಟಿ ನೀಡಲು ಖರ್ಗೆ ಸಜ್ಜಾಗಬಹುದು.

ದಲಿತರ ಮತ ಬ್ಯಾಂಕ್
ದಲಿತರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಈಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ ಪರಮೇಶ್ವರ್ ಅವರನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೆಜ್ಜೆ ಹಾಕಲಿದೆ. ಬಿಜೆಪಿಯ ಹಿಂದೂತ್ವ ಅಜೆಂಡಾಗೆ ಇದೆ ಕಾಂಗ್ರೆಸ್ ತಂತ್ರ ಎಂದು ಉಸ್ತುವಾರಿ ಕೆಸಿ ವೇಣುಗೋಪಾಲ್ ಸುಳಿವು ನೀಡಿದ್ದಾರೆ.

ಒಕ್ಕಲಿಗ ನಾಯಕ
ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಅಪ್ಪಾಜಿ ನಾಡಗೌಡ ಸೇರಿದಂತೆ ಹಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು. ಈ ಪೈಕಿ ಎಂಬಿ ಪಾಟೀಲ್ ಅವರು ನಾನು ರೇಸಿನಲ್ಲಿಲ್ಲ ಎಂದಿದ್ದಾರೆ, ಎಸ್ ಆರ್ ಪಾಟೀಲ್ ಅವರು ವಯಸ್ಸಿನ ಕಾರಣ ಹಿಂದೆ ಸರಿಯುವ ಸಾಧ್ಯತೆಯಿದೆ. ಕೊನೆಗೆ ಮುನಿಯಪ್ಪ ಹಾಗೂ ಶಿವಕುಮಾರ್ ನಡುವೆ ಪೈಪೋಟಿ ಬರಲಿದ್ದು, ಡಿಕೆಶಿ ಅವರು ಅಧ್ಯಕ್ಷ ಸ್ಥಾನಕ್ಕೇರುವ ಲಕ್ಷಣಗಳಿವೆ. ಆದರೆ, ಕರ್ನಾಟಕದ ಎಲ್ಲಾ ಭಾಗಕ್ಕೂ ಸಲ್ಲುವ ಸಮರ್ಥ ಡಿಕೆಶಿ ಅವರಿಗಿಲ್ಲ ಎಂಬ ಕೂಗೆದ್ದಿದೆ.

ದಲಿತ ನಾಯಕರತ್ತ ಒಲವು
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ತಂಡ ಮೇ 10ರೊಳಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತಂತೆ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಜತೆ ಸಭೆ ನಡೆಸಿದರೂ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ದಲಿತ ನಾಯಕ ಪರಮೇಶ್ವರ್ ಬದಲಾವಣೆ ಬೇಡ ಎಂಬ ಕೂಗೆದ್ದಿದೆ. ಜತೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಂದೆ ಸ್ಥಾನ ಬಿಟ್ಟುಕೊಡುವ ವ್ಯವಸ್ಥೆ ಮಾಡಿಕೊಳ್ಲಬಹುದು.












Click it and Unblock the Notifications