ಅರೆ ಇಸ್ಕಿ, ಖಮರುಲ್ ಇಸ್ಲಾಂ ಯೂ ಟೂರ್ನ್ ತಗೊಂಡ್ಬಿಟ್ರು!

Posted By:
Subscribe to Oneindia Kannada

ಕಲಬುರಗಿ, ಜುಲೈ 01: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯ ಬಾವುಟ ಹಾರಿಸಿದ್ದವರ ಪೈಕಿ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರು ಈಗ ಯೂ ಟರ್ನ್ ಹೊಡೆದಿದ್ದಾರೆ. ಸಿದ್ದರಾಮಯ್ಯ ಅವರು ನಮ್ಮ ನಾಯಕರು, ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದೆ ಎಂದು ಖಮರುಲ್ ಅವರು ಶುಕ್ರವಾರ ಹೇಳಿದ್ದಾರೆ.

ಸಿದ್ದರಾಮಯ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಎ.ಚಲ್ಲಕುಮಾರ್ ಭೇಟಿ ಬಳಿಕ ಖಮರುಲ್ ಇಸ್ಲಾಂ ಅವರು ತಮ್ಮ ವರಸೆ ಬದಲಾಯಿಸಿದ್ದಾರೆ. ಈ ಮೂಲಕ ಈಗ ಭಿನ್ನಮತೀಯರ ಪೈಕಿ ಅಂಬರೀಶ್ ಸೈಲಂಟ್ ಆಗಿದ್ದರೆ, ಶ್ರೀನಿವಾಸ್ ಪ್ರಸಾದ್ ಮಾತ್ರ ಗರಂ ಆಗಿದ್ದಾರೆ, ಇಸ್ಲಾಂ ಈಗ ಸಿದ್ದು ಜಪ ಮಾಡುತ್ತಿದ್ದಾರೆ.[ಭಿನ್ನಮತೀಯರ 'ರಾಜಕೀಯ'ದಲ್ಲಿ ಏಕಾಂಗಿಯಾದ ಶ್ರೀನಿವಾಸ ಪ್ರಸಾದ್]

Former minister Qamar-Ul-Islam does a U Turn says Siddaramaiah is our leader

'ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಶ್ರೀನಿವಾಸಪ್ರಸಾದ್ ಜತೆಗಿಲ್ಲ' ಎಂದು ಗುರುವಾರ ಹೇಳಿದ್ದ ಇಸ್ಲಾಂ ಅವರು, ನಾವು ನಾಯಕತ್ವ ಬದಲಾವಣೆ ಬಯಸಿರಲಿಲ್ಲ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುವುದನ್ನು ತಪ್ಪಿಸಲು ಹೋರಾಟಕ್ಕೆ ಇಳಿದಿದ್ದು ನಿಜ. ಸಂಪುಟ ಪುನಾರಚನೆ ವೇಳೆಯಲ್ಲಿ ಈ ಭಾಗಕ್ಕೆ ನ್ಯಾಯ ಸಂದಾಯವಾಗಿಲ್ಲ ಎಂದು ಅಸಮಾಧಾನಗೊಂಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ವಿಷಯ ಈಗ ಹೈಕಮಾಂಡ್ ತಲುಪಿದೆ. ಶೇ 8೦ಕ್ಕೂ ಅಧಿಕ ಅಲ್ಪಸಂಖ್ಯಾತರನ್ನು ಹೊಂದಿರುವ ಈ ಭಾಗಕ್ಕೆ ಸೂಕ್ತ ಮನ್ನಣೆ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಈ ನಡುವೆ ನಿಗಮ-ಮಂಡಳಿ ರಚನೆಯಲ್ಲಿ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯು ಸಿಕ್ಕಿದೆ. ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೂಡಾ ಖಮರುಲ್ ಅವರಿಗೆ ಭರವಸೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former minister Qamar-Ul-Islam does a U Turn says Siddaramaiah is our leader and he will not associated with any of the dissident leaders or group. Party has assured justice to him and his followers.
Please Wait while comments are loading...