ಮಳೆಗಾಲದ ಅತಿಥಿಯಾಗಿ ಬಂದ ಹೆಬ್ಬಾವು!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜೂನ್ 30 : ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ವಿಷಜಂತುಗಳು ದಿಕ್ಕು ತಪ್ಪಿ ಜನವಸತಿ ಪ್ರದೇಶದತ್ತ ಬರತೊಡಗಿವೆ. ಮಡಿಕೇರಿಯ ಗಾಳಿಬೀಡು ಗ್ರಾಮದ ಬಳಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಕೆಲಕಾಲ ಆತಂಕ ಮೂಡಿಸಿತ್ತು.

ಮಳೆಗೆ ಆಸರೆ ಹುಡುಕಿಕೊಂಡು ಅಲೆಯುವ ಪ್ರಾಣಿ ಮತ್ತು ವಿಷ ಜಂತುಗಳು ಜನರಲ್ಲಿ ಭಯಹುಟ್ಟಿಸಿ ಬಿಡುತ್ತವೆ. ಮಳೆಗಾಲದಲ್ಲಿ ಹಾವುಗಳು ತೋಟಗಳ ನಡುವೆ ಇರುವ ಮನೆಗೆ ಸೇರಿಕೊಳ್ಳುವುದು ಸಾಮಾನ್ಯ. ಕೇರೆ ಹಾವು ಸೇರಿದಂತೆ ಚಿಕ್ಕಪುಟ್ಟ ಹಾವುಗಳು ಮನೆಯತ್ತ ಧಾವಿಸಿ ಬರುತ್ತವೆ. ಇದೆಲ್ಲವೂ ಸಾಮಾನ್ಯವಾಗಿರುವುದರಿಂದ ಯಾರೂ ಗಾಬರಿಪಡುವುದಿಲ್ಲ. [ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!]

python

ಆದರೆ, ಗಾಳಿಬೀಡು ಗ್ರಾಮದ ಬಾಲಾಜಿ ಎಸ್ಟೇಟ್‍ನಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಕೆಲಕಾಲ ಕಾರ್ಮಿಕರಲ್ಲಿ ಆತಂಕ ಮೂಡಿಸಿತ್ತು. ಹೆಬ್ಬಾವು ಎಂದರೆ ಸಾಕು ಒಮ್ಮೆಲೆ ಎದೆ ನಡುಗಿ ಬಿಡುತ್ತದೆ. ಇನ್ನು ಅದನ್ನು ಹತ್ತಿರದಿಂದ ನೋಡಿದ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿ ಹೇಗಾಗಿರಬೇಕು?. [30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್]

ಹಾವನ್ನು ಕಂಡ ಜನರು ಧೈರ್ಯ ಮಾಡಿ ಅದು ತಪ್ಪಿಸಿಕೊಳ್ಳದಂತೆ ಕಾವಲು ಕಾದಿದ್ದಾರೆ. ಅಲ್ಲದೆ ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗಾಳಿಬೀಡು ಉಪವಲಯ ಅರಣ್ಯಾಧಿಕಾರಿ ಜಗದೀಶ ಹಾಗೂ ಅರಣ್ಯ ರಕ್ಷಕ ರಾಜಣ್ಣ ಅವರು ಹೆಬ್ಬಾವನ್ನು ಹಿಡಿದು, ಪುಷ್ಪಗಿರಿ ವನ್ಯಜೀವಿ ಅರಣ್ಯಕ್ಕೆ ಬಿಟ್ಟಿದ್ದಾರೆ. [ಬರೋಬ್ಬರಿ 3 ಹೆಬ್ಬಾವು ಹಿಡಿದ ಮಂಗಳೂರು ಯುವಕರು!]

ಈ ವ್ಯಾಪ್ತಿಯಲ್ಲಿ ಕಾಳಿಂಗ ಸರ್ಪ ಸೇರಿದಂತೆ ಇತರೆ ಹಾವುಗಳು ಹೆಚ್ಚಾಗಿ ಇವೆಯಾದರೂ ಹೆಬ್ಬಾವು ಕಾಣಿಸಿಕೊಂಡಿರಲಿಲ್ಲ. ಇದೀಗ ಹೆಬ್ಬಾವನ್ನು ನೋಡಿದ ಮಂದಿ ಭಯಭೀತರಾಗಿದ್ದಾರೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A huge python found in Balaji estate Galibidu village, Madikeri. Later it was caught by the forest department.
Please Wait while comments are loading...