ಪರಮೇಶ್ವರ್ ಗೃಹಖಾತೆ ಬದಲಿಸಬಾರದಿತ್ತು: ರೇವಣ್ಣ ಸಹಾನುಭೂತಿ

ಬೆಂಗಳೂರು, ಡಿಸೆಂಬರ್ 28: ಪರಮೇಶ್ವರ್ ಅವರ ಗೃಹಖಾತೆಯನ್ನು ಬದಲಿಸಬಾರದಿತ್ತು. ಪಾಪ ಆರು ತಿಂಗಳು ಉತ್ತಮವಾಗಿ ಕೆಲಸ ಮಾಡಿದ್ದರು. ಆ ಖಾತೆಯೂ ಅವರಿಗೆ ಇರಬೇಕಿತ್ತು ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.

ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ. ಹಾಗಾಗಿ ಗೃಹಖಾತೆ ಅವರಲ್ಲಿಯೇ ಇರಬೇಕಿತ್ತು. ಆದರೆ ಅದು ಕಾಂಗ್ರೆಸ್‌ನ ಆಂತರಿಕ ವಿಚಾರ. ನನ್ನ ಇಲಾಖೆ ಬಿಟ್ಟು ಅವರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನ ಇಲಾಖೆಯಲ್ಲಿಯೇ ಸಾಕಷ್ಟು ಕೆಲಸಗಳಿವೆ. ಅವರ ಮೇಲೆ ಎಂದಿಗೂ ಒತ್ತಡ ಹೇರಿಲ್ಲ. ವರ್ಗಾವಣೆಗೆ ಶಿಫಾರಸುಗಳನ್ನು ಮಾಡಿಲ್ಲ.

ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿಯವರು ಡಿಸಿಎಂ ಆಗಿರುವುದನ್ನು ಆ ಪಕ್ಷದವರೇ ಸಹಿಸದೆ ಇದ್ದರೆ ನಾನೇನು ಮಾಡಲಿ. ಅದಕ್ಕೆ ನಾನು ಜವಾಬ್ದಾರಿಯಲ್ಲ. ಪರಮೇಶ್ವರ್ ಅವರಿಂದ ಖಾತೆಯನ್ನು ಯಾಕೆ ಹಿಂದಕ್ಕೆ ಪಡೆದರು ಎಂದು ಅವರ ಪಕ್ಷದವರನ್ನೇ ಕೇಳಿ. ನಾನು ಹಸ್ತಕ್ಷೇಪ ಮಾಡಿದ್ದರೆ ಬಹಿರಂಗವಾಗಿ ಹೇಳಲಿ ಎಂದು ಆಗ್ರಹಿಸಿದರು.

ಪುಟಗೋಸಿ ಮಂತ್ರಿಗಿರಿಗೆ ಹೆದರೊಲ್ಲ

ಪುಟಗೋಸಿ ಮಂತ್ರಿಗಿರಿಗೆ ಹೆದರೊಲ್ಲ

ರೇವಣ್ಣ ಅವರ ಶಿಫಾರಸುಗಳಿಂದ ಬೇಸೆತ್ತು ಪರಮೇಶ್ವರ್ ಗೃಹಖಾತೆಯನ್ನು ಬಿಟ್ಟುಕೊಟ್ಟಿದ್ದಾರೆ ಎಂಬ ಸುದ್ದಿ ಹರಡಿಸುತ್ತಿದ್ದಾರೆ. ಇಂತಹ ಸುದ್ದಿಗಳಿಂದ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಇಂತಹ ವದಂತಿಗಳಿಗೆ ನಾನು ಹೆದರಿ ಓಡುವುದೂ ಇಲ್ಲ. ಇಂತಹ ವದಂತಿಗಳಿಂದ ಕಾಂಗ್ರೆಸ್‌ನವರಿಗೇ ಏಟು ಬೀಳುತ್ತದೆ. ಈ ಪುಟಗೋಸಿ ಮಂತ್ರಿಗಿರಿಗೆ ನಾನು ಹೆದರೊಲ್ಲ ಎಂದರು.

ಎಷ್ಟು ದಿನ ತಡೆದುಕೊಳ್ತಾರೋ

ಎಷ್ಟು ದಿನ ತಡೆದುಕೊಳ್ತಾರೋ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ಕಾರ್ಯದರ್ಶಿ ನೇಮಕದ ವಿಚಾರ ನನಗೆ ತಿಳಿದಿಲ್ಲ. ಅದಕ್ಕೂ ನನಗೂ ಸಂಬಂಧವೇ ಇಲ್ಲ. ಯಾರು ನೇಮಕಾತಿ ಮಾಡಿದ್ದಾರೋ ಅವರನ್ನೇ ಕೇಳಿ. ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಜೆಡಿಎಸ್ ಅನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಸಿಎಂ ಎಷ್ಟು ದಿನ ಇದನ್ನೆಲ್ಲಾ ತಡೆದುಕೊಳ್ತಾರೋ. ಆಮೇಲೆ ಏನಾಗುತ್ತೆ ನೋಡೋಣ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಬೆಂಬಲ

ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಬೆಂಬಲ

ಮುಂದಿನ ವರ್ಷದಿಂದ ಒಂದು ಸಾವಿರ ಇಂಗ್ಲಿಷ್ ಮಾಧ್ಯಮದ ಸರ್ಕಾರಿ ಶಾಲೆ ತೆರೆಯುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಉದ್ದೇಶಕ್ಕೆ ಎಚ್ ಡಿ ರೇವಣ್ಣ ಬೆಂಬಲ ನೀಡಿದ್ದಾರೆ. ಕನ್ನಡ ಶಾಲೆಯಲ್ಲಿ ಓದುವುದು ಹಳೆಯ ಕಾಲ. ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು. ಕೂಲಿ ಮಾಡಿಯಾದರೂ ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಬೇಕು ಎಂದು ಅನೇಜಕ ಪೋಷಕರು ಪ್ರಯತ್ನಿಸುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ನನ್ನ ಬೆಂಬಲ ಇದೆ ಎಂದರು.

ಸಿದ್ದರಾಮಯ್ಯಗೆ ಟಾಂಗ್

ಸಿದ್ದರಾಮಯ್ಯಗೆ ಟಾಂಗ್

ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆ ತೆರೆಯುವ ಸರ್ಕಾರದ ತೀರ್ಮಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂಬ ಆಸೆ ಬಡವರಿಗೂ ಇರುತ್ತದೆ. ಅವರಿಗೆ ಇಂಗ್ಲಿಷ್ ಶಿಕ್ಷಣ ಸಿಗಬೇಕೆಂದರೆ ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲಿಷ್ ಮಾಧ್ಯಮ ಆರಂಭಿಸಬೇಕು ಎಂದು ಹೇಳಿದರು. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+