ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನೀತ್ ರಾಜ್​ಕುಮಾರ್ ಅಕಾಲಿಕ ಸಾವು ಮತ್ತು ಜನಜಾಗೃತಿಯ ಅಚ್ಚರಿ

|
Google Oneindia Kannada News

ಕನ್ನಡದ ಯುವರತ್ನ ಪುನೀತ್ ರಾಜ್​ಕುಮಾರ್ ಅವರ ಅಕಾಲಿಕ ಸಾವು ರಾಜ್ಯದ ಜನತೆಯನ್ನು ದಿಗ್ಬ್ರಮೆಗೆ ದೂಡಿದ್ದು ಒಂದು ಕಡೆಯಾದರೆ, ಅವರ ಸಾವು ಮೂಡಿಸಿದ ಜನಜಾಗೃತಿ ಅಚ್ಚರಿ ಮೂಡುವಂತದ್ದು ಎನ್ನುವುದು ವೈದ್ಯಲೋಕದ ಅಭಿಪ್ರಾಯ.

ಫಿಟ್ ಎಂಡ್ ಫೈನ್ ಆಗಿದ್ದ ಪುನೀತ್, ಅಕ್ಟೋಬರ್ 28ರಂದು ನಿಧನ ಹೊಂದಿದ್ದರು, ಅವರಿಗೆ 46ವರ್ಷ ವಯಸ್ಸಾಗಿತ್ತು. ಶಿಸ್ತಿನ ಜೀವನಶೈಲಿ, ಆಹಾರ ಪದ್ದತಿ, ವ್ಯಾಯಾಮವನ್ನು ಪಾಲಿಸಿಕೊಂಡು ಬರುತ್ತಿದ್ದ ಅಪ್ಪುವಿನ ಹಠಾತ್ ಕಣ್ಮರೆ ಜನರಿಗೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

ಇರುವಷ್ಟು ದಿನ ಸ್ವಲ್ಪವೂ ಆರೋಗ್ಯದ ಸಮಸ್ಯೆ ಎದುರಿಸದ ಪುನೀತ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಎಂದರೆ ಅತಿಯಾದ ವರ್ಕೌಟ್ ಕೂಡಾ ಸಮಸ್ಯೆಯಾಗಲಿದೆಯಾ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇದಕ್ಕೆ ವೈದ್ಯಲೋಕದಿಂದ ಉತ್ತರವೂ ಬಂದಿದೆ.

ಸಾವಿನ ಮುನ್ಸೂಚನೆ? ಸಾವಿನ ಮುನ್ಸೂಚನೆ? "ಪುನೀತ್ ಸಾವಿಗೂ ಇದಕ್ಕೂ ಸಂಬಂಧವಿಲ್ಲ, ಅಪಾರ್ಥ ಬೇಡ"

ಪುನೀತ್ ಅವರು ತಮ್ಮ ಎರಡೂ ಕಣ್ಣನ್ನು ದಾನ ಮಾಡಿದ್ದರು, ಅವರ ಅಂತ್ಯ ಸಂಸ್ಕಾರಕ್ಕೂ ಮುನ್ನ ಅವರ ಕಣ್ಣನ್ನು ನಾರಾಯಣ ನೇತ್ರಾಲಯದ ವೈದ್ಯರು ತೆಗೆದುಕೊಂಡು ಹೋಗಿದ್ದರು. ಆಧುನಿಕ ತಂತ್ರಜ್ಞಾನದ ಮೂಲಕ ನಾಲ್ಕು ಜನರಿಗೆ ಇದರಿಂದ ದೃಷ್ಟಿ ಬಂದಿದೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್

ಪುನೀತ್ ಅವರ ಸಾವಿಗೆ ಕಾರಣ ಏನಿರಬಹುದು ಎನ್ನುವ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದಂತಹ ಡಾ. ಸಿ.ಎನ್.ಮಂಜುನಾಥ್ ಅವರು, "ಹೃದಯಾಘಾತದ ಸಮಯದಲ್ಲಿ, ಕೆಲವು ದುರದೃಷ್ಟಕರ ರೋಗಿಗಳಿಗೆ ಕೆಲವೇ ನಿಮಿಷಗಳಲ್ಲಿ ventricular fibrillation ನಿಂದಾಗಿ ಹೃದಯ ಸ್ತಂಭನ ಉಂಟಾಗುತ್ತದೆ. ಪುನೀತ್ ಅವರ ವಿಚಾರದಲ್ಲಿ ರಕ್ತ ಹೆಪ್ಪುಗಟ್ಟಿ ಕಾರ್ಡಿಯಾಕ್ ಅರೆಸ್ಟ್ ಆಗಿರುವ ಸಾಧ್ಯತೆಯಿದೆ. ಇದು ಯಾವುದೇ ಮುನ್ಸೂಚನೆ ಇಲ್ಲದೇ ಬರುವಂತದ್ದು. ಇನ್ನೊಂದು ಆಯಾಮ ಎಂದರೆ ಕುಟುಬದಲ್ಲಿ ಈ ರೀತಿಯ ಸಮಸ್ಯೆ ಇದ್ದರೂ ಆಗಬಹುದು" ಎಂದು ಡಾ.ಮಂಜುನಾಥ್ ಹೇಳಿದ್ದರು.

"ಮಾಸ್ಟರ್ ಲೋಹಿತ್ ಅಲ್ಪಾಯುಷಿ, ಆಂಜನೇಯನ ಇನ್ನೊಂದು ಹೆಸರೇ ಪುನೀತ್"
ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ

ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ

ಪುನೀತ್ ಅವರು ತಾಮ್ಮ ಕಣ್ಣನ್ನು ದಾನ ಮಾಡಿದ್ದು ಬಹಳಷ್ಟು ಜನರಿಗೆ ಪ್ರೇರಣೆಯಾಗಿದೆ. ಅಪ್ಪು ನಿಧನದ ನಂತರ ರಾಜ್ಯಾದಂತ ಕಣ್ಣು ದಾನಕ್ಕೆ ಜನರು ಮುಂದೆ ಬರುತ್ತಿದ್ದಾರೆ. ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಬೆಳಗಾವಿ, ಮೈಸೂರು, ಚಾಮರಾಜನಗರ ಮುಂತಾದ ಕಡೆ, ಜನರು ಸ್ವಯಂಪ್ರೇರಿತರಾಗಿ ನೇತ್ರದಾನ ಮಾಡುತ್ತಿರುವುದು, ಅಪ್ಪು ಅಕಾಲಿಕ ಸಾವು ಜನಜಾಗೃತಿ ಮೂಡಿಸಿದಂತಿದೆ. ಇದೇ ರೀತಿ, ಆರೋಗ್ಯ ತಪಾಸಣೆ ವಿಚಾರದಲ್ಲೂ ಕೂಡಾ. "ಎಲ್ಲೋ ನೂರು ಅರ್ಜಿಗಳು ನೇತ್ರದಾನಕ್ಕೆ ಬರುತ್ತಿದ್ದವು, ಇದೀಗ ಅದು ಎರಡು ಸಾವಿರಕ್ಕೂ ಹೆಚ್ಚು ಬರಲಾರಂಭಿಸಿದೆ. ಇದೊಂದು ದಾಖಲೆ, ಇದಕ್ಕೆ ನಮ್ಮ ಅಪ್ಪು ಪ್ರೇರಣೆ ಎಂದರೆ ತಪ್ಪಾಗಲಾರದು"ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ

ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ

"21-45ವಯಸ್ಸಿನವರು ಹೃದಯ ಸಂಬಂಧ ಯಾವುದೇ ತೊಂದರೆಯಿಲ್ಲದಿದ್ದರೂ ವರ್ಷಕೊಮ್ಮೆ ಇಸಿಜಿ, ಇಕೋ ಟೆಸ್ಟ್ ಮುಂತಾದ ತಪಾಸಣೆ ಮಾಡುವ ಪರಿಪಾಠವನ್ನು ಇಟ್ಟುಕೊಳ್ಳಬೇಕು"ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಹೇಳಿದ್ದರು. ಪುನೀತ್ ಅವರ ಸಾವು ಯಾವ ರೀತಿ ಯುವಕರನ್ನು ಅಲರ್ಟ್ ಮಾಡಿದೆಯೆಂದರೆ, ಭಾರೀ ಪ್ರಮಾಣದಲ್ಲಿ ಜನರು ಹೃದಯ ತಪಾಸಣೆಗೆ ಬರುತ್ತಿರುವುದು ಎಲ್ಲಾ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿದೆ. ಜನರು, ಪುನೀತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ ನೇತ್ರದಾನ, ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸುತ್ತಿದ್ದಾರೆ.

ಸಾಕಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪುನೀತ್

ಸಾಕಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪುನೀತ್

ಇನ್ನು, ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಮಾತಿನಂತೆ ಪುನೀತ್ ಅವರು ಮಾಡುತ್ತಿದ್ದ ಸಾಮಾಜಿಕ ಸೇವೆ ಅವರ ನಿಧನದ ನಂತರ ಒಂದೊಂದಾಗಿಯೇ ಬಹಿರಂಗವಾಗುತ್ತಿದೆ. ವೃದ್ದಾಶ್ರಮ, ಗೋಶಾಲೆ, ಅನಾಥ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ.. ಹೀಗೆ ಸಾಕಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು 1,800 ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತಿದ್ದರು. ಈಗ, ಅದನ್ನು ಮುನ್ನಡೆಸಲು ತಮಿಳು ನಟ ವಿಶಾಲ್ ಮುಂದೆ ಬಂದಿದ್ದಾರೆ. ಇದಷ್ಟೇ ಅಲ್ಲದೇ, ಇದ್ದಷ್ಟು ದಿನ ನಾವೂ ನಮ್ಮ ಕೈಯಲ್ಲಾದ ಸಾಮಾಜಿಕ ಸೇವೆಯನ್ನು ಮಾಡುತ್ತೇವೆ ಎಂದು ಯುವಕರು ಶ್ರದ್ದಾಂಜಲಿಯ ವೇಳೆ ಶಪಥಗೈಯುತ್ತಿದ್ದಾರೆ. ಒಟ್ಟಿನಲ್ಲಿ, ಪುನೀತ್ ಅವರ ಅಕಾಲಿಕ ಸಾವು, ಸಾರ್ವಜನಿಕ ವಲಯದಲ್ಲಿ ಮಿಂಚಿನ ಜನಜಾಗೃತಿ ಮೂಡಿಸಿದೆ.

English summary
Kannada Actor Puneeth Rajkumar Sudden Death due to Heart Attack creates Health Awareness Among People. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X