ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯು ಉಪನ್ಯಾಸಕರ ವರ್ಗಾವಣೆ ದಿನಾಂಕ ನಿಗದಿ

By Nayana
|
Google Oneindia Kannada News

ಬೆಂಗಳೂರು, ಜು.25: 2017-18ನೇ ಸಾಲಿನ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್‌ ಪರಿಷ್ಕೃತ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಜು.26ರಿಂದ 31ರವರೆಗೆ ಕೋರಿಕೆ ವರ್ಗಾವಣೆ ಹಾಗೂ ಆ.1ರಿಂದ 4ರ ವರೆಗೆ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ.

ವರ್ಗಾವಣೆ ಪ್ರಕ್ರಿಯೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಸಿ.ಶಿಖಾ ಆದೇಶ ಹೊರಡಿಸಿದ್ದಾರೆ. ಕೌನ್ಸಿಲಿಂಗ್ ವೇಳೆ ಉಪನ್ಯಾಸಕರು ಕಡ್ಡಾಯವಾಗಿ ಗುರುತಿನ ಕಾರ್ಡ್ ಹಾಗೂ ಮೂಲ ಪ್ರಮಾಣ ಪತ್ರವನ್ನ‌ ಹಾಜರು ಪಡಿಸಬೇಕು.

ಶಿಕ್ಷಕರ ವರ್ಗಾವಣೆಗೆ ಕೊನೆಗೂ ಹೈಕೋರ್ಟ್‌ ಅಸ್ತು ಶಿಕ್ಷಕರ ವರ್ಗಾವಣೆಗೆ ಕೊನೆಗೂ ಹೈಕೋರ್ಟ್‌ ಅಸ್ತು

ಜುಲೈ 26ರಂದು ಐಚ್ಛಿಕ ಕನ್ನಡ, ಸಂಸ್ಕೃತ, ಹಿಂದಿ, ಉರ್ದು, ತರ್ಕಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಕ ವಿಜ್ಞಾನ ಮತ್ತು ಕನ್ನಡ ವಿಷಯದ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ.

PUC board announces lectures transfer schedule

ಜುಲೈ . 27ರಂದು ಇತಿಹಾಸ, ಭೌತಶಾಸ್ತ್ರ,ಜುಲೈ .28 ರಂದು ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಜುಲೈ. 29 ರಂದು ರಾಜ್ಯಶಾಸ್ತ್ರ, ಗಣಿತ, ಜುಲೈ. 30 ರಂದು ಜೀವಶಾಸ್ತ್ರ, ಸಮಾಜಶಾಸ್ತ್ರ, ಜುಲೈ .31 ರಂದು ಆಂಗ್ಲಭಾಷೆ, ವ್ಯವಹಾರ ಅಧ್ಯಯನ ವಿಷಯದ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್‌ ನಿಗದಿಯಾಗಿದೆ.

ಎರಡನೇ ಹಂತದಲ್ಲಿ ಕಡ್ಡಾಯ ವರ್ಗಾವಣೆ ಆಗಸ್ಟ್‌ .1 ರಂದು ಐಚ್ಛಿಕ ಕನ್ನಡ, ಸಂಸ್ಕೃತ, ಹಿಂದಿ, ಉರ್ದು, ತರ್ಕಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಕ ವಿಜ್ಞಾನ ಮತ್ತು ಕನ್ನಡ, ಭೌತಶಾಸ್ತ್ರ, ಆಗಸ್ಟ್ . 2 ರಂದು ಇತಿಹಾಸ, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಗಣಿತ.

ಆಗಸ್ಟ್ 3 ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಜುಲೈ 7ರಂದು ಇಂಗ್ಲಿಷ್‌ ಮತ್ತು ವ್ಯವಹಾರ ಅಧ್ಯಯನ ವಿಷಯದ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಪಿಯು ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೌನ್ಸೆಲಿಂಗ್‌ ನಡೆಯಲಿದೆ.

English summary
PU department issued new schedule for transfer process. Request transfer will resume from tomorrow but actual transfer counselling will start from August 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X