ಪಿಎಸ್ಐ ಪರೀಕ್ಷೆ ಅಕ್ರಮ: ಬ್ಲೂಟೂತ್ ಮೂಲ ಪತ್ತೆಗೆ ಮುಂದಾದ ಸಿಐಡಿ

ಬೆಂಗಳೂರು, ಮೇ. 10: ಪಿಎಸ್ಐ ನೇಮಕಾತಿ ಸಂಬಂಧ ಪತ್ರಿಕೆ - 1ರಲ್ಲೂ ಅಭ್ಯರ್ಥಿಗಳು ಅಕ್ರಮ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಇದರ ಜಾಡು ಹಿಡಿದು ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ರಿಕೆ 1 ರಲ್ಲಿ ಅಕ್ರಮ ನಡೆಸಿರುವ ಬಗ್ಗೆ ಸಾಕ್ಷಾಧಾರಗಳ ಕಲೆ ಹಾಕುವಂತೆ ತನಿಖಾ ತಂಡಗಳಿಗೆ ಸೂಚನೆ ನೀಡಲಾಗಿದೆ.

ಪಿಎಸ್ಐ ನೇಮಕಾತಿ ಪರೀಕ್ಷೆಯ ಮೊದಲ ಪತ್ರಿಕೆ 50 ಅಂಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರಬಂಧ, ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರ, ಇಂಗ್ಲೀಷ್ ನಿಂದ ಕನ್ನಡಕ್ಕೆ ಭಾಷಾಂತರಕ್ಕೆ ಆದ್ಯತೆ ನೀಡಲಾಗುತ್ತದೆ. ಅದರಲ್ಲಿ ಭಾಷಾಂತರಕ್ಕೆ ತಲಾ 10 ಅಂಕ ನಿಗದಿ ಮಾಡಿದರೆ, ಪ್ರಬಂಧ ಕ್ಕೆ 20 ಅಂಕ, 700 ಪದಗಳ ಸುದ್ದಿಯನ್ನು ಕೇವಲ 100 ಪದಗಳಿಗೆ ಸಂಕ್ಷಿಪ್ತಗೊಳಿಸುವ ಸಂಕಲನಕ್ಕೆ 10 ಅಂಕ ಮೀಸಲಿಡಲಾಗಿದೆ.

ಇದರಲ್ಲೂ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಿಸಿ ಅಕ್ರಮ ಎಸಗಿದ್ದಾರೆ ಎನ್ನುವ ಶಂಕತೆ ಇದೆ. ಭಾಷಾಂತರ ವಿಷಯಕ್ಕೆ ಬ್ಲೂಟೂತ್ ನೆರವಿನಿಂದ ಅಕ್ರಮ ಎಸಗಿದ್ದು, ಪತ್ರಿಕೆ - 1 ರಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಅಭ್ಯರ್ಥಿಗಳನ್ನು ಕರೆಸಿ ವಿಚಾರಣೆಗೆ ಒಳಪಡಿಸಲು ಸಿಐಡಿ ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.

PSI Recruitment scam: CID police found fraud in psi exam paper 1

ಉತ್ತರ ಪತ್ರಿಕೆ ವಿಶ್ಲೇಷಣೆ; ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಷ್ಟೂ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾದವರ ಉತ್ತರ ಪತ್ರಿಕೆಗಳನ್ನು ಸಿಐಡಿ ಪೊಲೀಸರು ಅನ್ವೇಷಣೆಗೆ ಒಳಪಡಿಸಿದ್ದಾರೆ. ಪಿಎಸ್ಐ ಅಕ್ರಮದ ಜಾಡನ್ನು ಎಳೆ ಎಳೆಯಾಗಿ ತನಿಖೆ ನಡೆಸಲು ಹೆಚ್ಚುವರಿ ಎಂಟು ತಂಡಗಳನ್ನು ರಚಿಸಿದ್ದು, ಎಲ್ಲಾ ತಂಡಗಳು ತನಿಖೆಯಲ್ಲಿ ತೊಡಗಿವೆ.

ಇನ್ನೂ ಪಿಎಸ್ಐ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಹಲವು ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಕಳೆದ ಒಂದು ತಿಂಗಳಿನಿಂದ ತಲೆ ಮರೆಸಿಕೊಂಡು ತಿರುಗಾಡುತ್ತಿರುವ ಅಭ್ಯರ್ಥಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.

PSI Recruitment scam: CID police found fraud in psi exam paper 1

ಇನ್ನೊಂದೆಡೆ ಪರೀಕ್ಷಾ ಅಕ್ರಮದಲ್ಲಿ ಬ್ಲೂಟೂತ್ ಬಳಕೆ ಮಾಡಿದ್ದು, ಅವುಗಳ ಜಾಡು ಪತ್ತೆಗೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಎಲ್ಲಿಂದ ಬ್ಲೂಟೂತ್ ತರಲಾಗಿದೆ?. ಇವನ್ನು ಪೂರೈಕೆ ಮಾಡಿದವರು ಯಾರು? ಎಂಬುದರ ಬಗ್ಗೆ ಆರೋಪಿಗಳಿಂದ ಪಡೆದ ಮಾಹಿತಿ ಮೇರೆಗೆ ಮೂಲ ಪತ್ತೆ ಕಾರ್ಯದಲ್ಲಿ ಸಿಐಡಿ ತೊಡಗಿಸಿಕೊಂಡಿದೆ.

PSI Recruitment scam: CID police found fraud in psi exam paper 1

ಈ ಹಿಂದೆ ನಡೆದ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕುವ ಸಲುವಾಗಿ ಬ್ಲೂಟೂತ್ ಜಾಡು ಹಿಡಿದು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+