ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ : ಅಕ್ರಮ ಮರಳು ಸಾಗಟ ಪ್ರಶ್ನಿಸಿದ ಪಿಎಸ್‌ಐ ಮೇಲೆ ಹಲ್ಲೆ

|
Google Oneindia Kannada News

ಹಾಸನ, ಅಕ್ಟೋಬರ್ 30 : ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಡೆದ ಪಿಎಸ್‌ಐ ಮೇಲೆ ಮರಳು ಮಾಫಿಯಾದವರು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಪಿಎಸ್‌ಐ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಮುಂಜಾನೆ ಹಾಸನದ ಚನ್ನಪಟ್ಟಣ ಸರ್ಕಲ್ ಬಳಿ ಅಪರಾಧ ಪತ್ತೆದಳದ ಪಿಎಸ್ಐ ಮಂಜೇಗೌಡ ಎಂಬುವವರ ಮೇಲೆ ಮರಳು ಮಾಫಿಯಾದವರು ಹಲ್ಲೆ ಮಾಡಿದ್ದಾರೆ. ಮಂಜೇಗೌಡರ ಎಡಗಣ್ಣಿನ ಬಳಿ ಗಾಯವಾಗಿದೆ. ಹಾಸನ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಹುಡುಕುತ್ತಿದ್ದಾರೆ. [ಮರಳು ಮಾಫಿಯಾ ಎಂದರೇನು, ಏನಿದರ ಮರ್ಮ]

karnataka

ಸಕಲೇಶಪುರದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಚನ್ನಪಟ್ಟಣ ಸರ್ಕಲ್‌ ಬಳಿ ಲಾರಿಯನ್ನು ತಡೆದ ಮಂಜೇಗೌಡ ಅವರ ಮೇಲೆ ಲಾರಿಯಲ್ಲಿದ್ದ ಇಬ್ಬರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಂತರ ಆರೋಪಿಗಳು ಲಾರಿಯನ್ನು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. [ಮರಳು ಮಾಫಿಯಾದಿಂದ ಡಿವೈಎಸ್ಪಿ ಹತ್ಯೆ ಯತ್ನ]

ಇದೇ ಮೊದಲಲ್ಲ : ಮಾರಳು ಮಾಫಿಯಾದವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಬಳ್ಳಾರಿ ಮತ್ತು ಮಂಡ್ಯದಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಹೋದವರ ಮೇಲೆ ಹಲ್ಲೆ ನಡೆದಿತ್ತು. [ಬೈಕ್ ಕಳ್ಳರಿಂದ ಪಿಎಸ್ ಐ ಹತ್ಯೆ]

* 2015ರ ಮಾರ್ಚ್ 19ರಂದು ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ತಹಶೀಲ್ದಾರ್‌ಗೆ ಲಾರಿ ಡಿಕ್ಕಿ ಹೊಡೆಸಲು ಪ್ರಯತ್ನ ಮಾಡಲಾಗಿತ್ತು. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬ್ಯಾಲಹುಣಸಿ ಗ್ರಾಮದ ಬಳಿ ಈ ಘಟನೆ ನಡೆದಿತ್ತು.

* ಮಂಡ್ಯ ಜಿಲ್ಲೆಯ ಅರಕೆರೆ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಘಟಕದ ಮೇಲೆ ದಾಳಿ ಮಾಡಿದ್ದ ಡಿವೈಎಸ್ಪಿ ಸವಿತಾ ಹೂಗಾರ್ ಅವರ ಮೇಲೆ ಲಾರಿ ಹತ್ತಿಸಿ ಕೊಲೆ ಮಾಡಲು ಪ್ರಯತ್ನ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

English summary
Police sub inspector Manje Gowda attacked in Hassan on Friday, October 30th morning by sand mafia, during a raid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X