Get Updates
Get notified of breaking news, exclusive insights, and must-see stories!

Property Good News: ಶನಿವಾರ & ಭಾನುವಾರವೂ ಓಪನ್‌ ಇರಲಿದೆ ಸಬ್ ರಿಜಿಸ್ಟ್ರಾರ್ ಆಫೀಸ್‌: ರಜೆ ಯಾವಾಗ ?

ಕರ್ನಾಟಕ ಕಾಂಗ್ರೆಸ್‌ ಸರ್ಕಾರವು ಆಸ್ತಿಗಳ ನೋಂದಣಿ ವಿಧಾನವನ್ನು ಇನ್ನಷ್ಟು ಸರಳೀಕರಣ ಮಾಡಿದೆ. ಅಲ್ಲದೇ ಸಬ್ ರಿಜಿಸ್ಟ್ರಾರ್ ಕಚೇರಿಗಳ ಅವಧಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ರಾಜ್ಯದಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಜಾರಿ ಮಾಡಲಾಗಿದೆಯಾದರೂ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಹಾಗೂ ಸರ್ವರ್‌ ಸಮಸ್ಯೆಯಿಂದ ಆಸ್ತಿ ರಿಜಿಸ್ಟ್ರೇಷನ್‌ ಕೆಲಸಗಳು ವಿಳಂಬವಾಗುತ್ತಿದ್ದವು. ಅದರಲ್ಲಿ ಸರ್ಕಾರಿ ರಜೆ ದಿನಗಳು ಹಾಗೂ ಭಾನುವಾರ - ಎರಡನೇ ಹಾಗೂ ನಾಲ್ಕನೇ ಶನಿವಾರವೂ ರಜೆ ಹಿನ್ನೆಲೆಯಲ್ಲಿ ಆಸ್ತಿಗಳಿಗೆ ಸಂಬಂಧಿಸಿದ ಪ್ರಮುಖ ಕೆಲಸಗಳು ಬಾಕಿ ಉಳಿಯುತ್ತಿದ್ದವು. ಇದೀಗ ಈ ರಜೆದಿನಗಳಲ್ಲೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದಿರಲಿದೆ. ಅಲ್ಲದೇ ಇದೇ ಸಮಯದಲ್ಲಿ ಆಸ್ತಿ ರಿಜಿಸ್ಟ್ರೇಷನ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ ನೀಡಲಾಗಿದೆ ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಆಸ್ತಿದಾರರಿಗೆ ಮಹತ್ವದ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಇದರಿಂದ ರಾಜ್ಯದಲ್ಲಿ ಆಸ್ತಿಗಳ ನೋಂದಣಿ ವಿಧಾನವು ಇನ್ನಷ್ಟು ಸರಳೀಕೃತವಾಗಲಿದೆ ಎಂದು ಹೇಳಲಾಗಿದೆ. ದೇಶದಲ್ಲೇ ಮೊದಲು ಎನ್ನುವಂತೆ ಕರ್ನಾಟಕ ಸರ್ಕಾರವು ಸಬ್ ರಿಜಿಸ್ಟ್ರಾರ್ ಕಚೇರಿಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ರಜೆ ದಿನಗಳಲ್ಲೂ ಸಬ್ ರಿಜಿಸ್ಟ್ರಾರ್ ಕಚೇರಿ ಕೆಲಸ ನಿರ್ವಹಿಸುವಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಭಾನುವಾರ ಮಾತ್ರ ರಜೆ ಇರುವವ ಆಸ್ತಿದಾರರಿಗೆ ಇಲ್ಲವೇ ಆಸ್ತಿ ಸಂಬಂಧಿತ ಕೆಲಸಗಳನ್ನು ಮಾಡಿಕೊಳ್ಳಬೇಕು ಎನ್ನುವವರಿಗೆ ಸಹಾಯವಾಗಲಿದೆ. ಅಲ್ಲದೇ ಆಸ್ತಿ ರಿಜಿಸ್ಟ್ರೇಷನ್‌ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಕೆಲಸಗಳು ರಜೆ ದಿನದಲ್ಲೇ ಆಗಿ ಹೋಗಲಿದೆ. ಹಾಗದರೆ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ತೆಗೆದಿದ್ದರೆ ಯಾವಾಗ ರಜೆ ಇರಲಿದೆ ಎನ್ನುವುದನ್ನು ನೋಡೋಣ.

Property Good News Sub Registrar s Office will be open on Saturday amp amp Sunday thuseday holiday

ಸಬ್ ರಿಜಿಸ್ಟ್ರಾರ್ ಕಚೇರಿಗಳು ರಾಜ್ಯದಲ್ಲಿ ಉಳಿದ ಸರ್ಕಾರಿ ಕಚೇರಿಗಳಂತೆಯೇ 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದಂದು ಸರ್ಕಾರಿ ರಜೆ ಇರುತ್ತಿತ್ತು. ಈ ದಿನಗಳಲ್ಲಿ ಯಾವುದೇ ಸರ್ಕಾರಿ ಕೆಲಸಗಳು ನಡೆಯುತ್ತಿರಲಿಲ್ಲ. ಅದರಲ್ಲೂ ಈ ದಿನಗಳೊಂದಿಗೆ ಹಬ್ಬ ಅಥವಾ ವಿಶೇಷದಿನಗಳೂ ಸೇರಿದರೆ ಮೂರರಿಂದ ನಾಲ್ಕು ದಿನಗಳು ರಜೆ ಆಗಿ, ಆಸ್ತಿ ಅಥವಾ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಂಬಂಧಿಸಿದ ಯಾವುದಾದರೂ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದಾದರೆ, ಜನ ಪರದಾಡುತ್ತಿದ್ದರು. ಇದೀಗ ಈ ರಜೆ ದಿನಗಳನ್ನು ರದ್ದು ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ಮುಂದೆ ಅಂದರೆ 2025ರ ಜೂನ್ 1ರಿಂದ

2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದಂದು ಸಬ್ ರಿಜಿಸ್ಟ್ರಾರ್ ಕಚೇರಿಗಳು ಓಪನ್‌ ಆಗಿರಲಿದೆ.

ಹೌದು ರಾಜ್ಯದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜನ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಸರಳೀಕೃತವಾಗಿ ಮಾಡಿಕೊಳ್ಳಲು ಸಹಾಯವಾಗಬೇಕು ಎನ್ನುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಯಾವ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಈ ನಿಯಮ ಅನ್ವಯವಾಗಲಿದೆ: ಇನ್ನು ಈ ನಿಯಮವು ಕರ್ನಾಟಕದ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಒಟ್ಟು 257 ಉಪ ನೋಂದಣಿ ಕಚೇರಿಗಳಿಗೆ ಅನ್ವಯವಾಗಲಿದೆ. ಇದರೊಂದಿಗೆ ರಾಜ್ಯದ ಎಲ್ಲಾ ತಾಲ್ಲೂಕು ಮಟ್ಟದ ಕಚೇರಿಗಳು ಸಹ ಈ ದಿನದಂದು ಓಪನ್‌ ಇರಲಿದೆ.

ರಜೆ ದಿನಗಳಲ್ಲಿ ಕಚೇರಿಗೆ ಹಾಜರಾಗಬೇಕು ಹಾಗೂ ಎಂದಿನಂತೆ ಕಾರ್ಯ ನಿರ್ವಹಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು ದಿನಾಂಕ ಸೂಚನೆ ಹೊರಡಿಸಿದ್ದಾರೆ. ಈ ಅಧಿಸೂಚನೆ ಉಲ್ಲೇಖಿಸಿ, ಇದೀಗ ಉಪ ನೋಂದಣಿ ಕಚೇರಿಗಳಿಗೆ ಜ್ಞಾಪನ ಪತ್ರ ಕಳುಹಿಸಲಾಗಿದೆ.

ಪ್ರಮುಖ ಅಂಶಗಳು ಈ ರೀತಿ ಇವೆ !

* ಇನ್ಮುಂದೆ 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರ ಸಹ ಸಬ್ ರಿಜಿಸ್ಟ್ರಾರ್ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

* ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ನೋಂದಾಯಿಸಿಕೊಳ್ಳಲು ಹಾಗೂ ನಿರ್ದಿಷ್ಟ ಕಚೇರಿ ಕೆಲಸಗಳಿಗೆ ಅವಕಾಶ ಇರಲಿದೆ.

* ಈ ಹೊಸ ನಿಯಮವು 01-06-2025 ರಿಂದ 28-12-2025ರ ವರೆಗೆ ಪ್ರಯೋಗಾತ್ಮಕವಾಗಿ ಜಾರಿ ಮಾಡಲಾಗುತ್ತಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಗೆ ಮಂಗಳವಾರ ರಜಾ ದಿನ

ಇನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳು ಶನಿವಾರ ಹಾಗೂ ಭಾನುವಾರದಂದು ಓಪನ್‌ ಇರುವುದರಿಂದ ಈ ಕಚೇರಿಗಳಿಗೆ ಮಂಗಳವಾರದಂದು ರಜಾ ದಿನ ಎಂದು ನಿಗದಿ ಮಾಡಲಾಗಿದೆ. ಭಾನುವಾರ ಸಬ್ ರಿಜಿಸ್ಟ್ರಾರ್ ಓಪನ್‌ ಇದ್ದರೆ, ಅದೇ ವಾರದ ಮಂಗಳವಾರ ಕಚೇರಿಯ ಸಿಬ್ಬಂದಿಗೆ ರಜೆ ಇರಲಿದೆ.

ಎನಿವೇರ್ ನೋಂದಣಿ ವ್ಯವಸ್ಥೆ: ರಾಜ್ಯ ಸರ್ಕಾರದ ಈ ಹೊಸ ಬದಲಾವಣೆಯಿಂದಾಗಿ ಎನಿವೇರ್ ನೋಂದಣಿ ವ್ಯವಸ್ಥೆಗೆ ಸಹಾಯವಾಗಲಿದೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+