Property: ಬಿ ಖಾತಾದಿಂದ ಎ ಖಾತಾ ಆಸ್ತಿ ವರ್ಗಾವಣೆಯೊಂದಿಗೆ ಏಕ ನಿವೇಶನ ಖಾತಾ ಆಸ್ತಿದಾರರಿಗೂ ಗುಡ್‌ನ್ಯೂಸ್!
Property: ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆಗೆ ಅವಕಾಶ ನೀಡಲಾಗಿದೆ. ಈಚೆಗೆ ಬಿ ಖಾತಾದಿಂದ ಎ ಖಾತಾ ವರ್ಗಾವಣೆ ಮಾಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಗುಡ್‌ನ್ಯೂಸ್ ಕೊಟ್ಟಿತ್ತು. ಅಲ್ಲದೆ ಆಸ್ತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಶುಲ್ಕ ಅಥವಾ ಮಾರ್ಗಸೂಚಿ ದರವನ್ನು ಶೇ.5ರಿಂದ ಶೇ2ಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ ಏಕ ನಿವೇಶನ ಖಾತಾಗೂ ಸಹ ಶುಲ್ಕ ರಿಯಾಯಿತಿ ನೀಡಲಾಗಿದೆ.
ಇದೀಗ ಬೆಂಗಳೂರು ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಏಕ ನಿವೇಶನ ಅನುಮೋದನೆಯಡಿ ಹೊಸದಾಗಿ ಎ ಖಾತಾ ಪಡೆಯುವ ಆಸ್ತಿ ಮಾಲೀಕರಿಗೆ ಎ ಖಾತಾ ನೋಂದಣಿಗೆ ವಿಧಿಸಲಾಗುತ್ತಿದ್ದ ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಭರ್ಜರಿ ಇಳಿಕೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಆಸ್ತಿದಾರರು ಹೊಸದಾಗಿ ಎ ಖಾತಾ ಪಡೆಯುವುದಕ್ಕೆ ಇನ್ಮುಂದೇ ಶೇ.2 ಪ್ರತಿಶತ ಶುಲ್ಕ ಪಾವತಿ ಮಾಡಿದರೆ ಸಾಕು. ಹೊಸದಾಗಿ ಎ ಖಾತಾ ಪಡೆಯುವವರಿಗೆ ಭರ್ಜರಿ ವಿನಾಯಿತಿ ನೀಡಲಾಗಿದೆ. ಏಕ ನಿವೇಶನ ಖಾತಾಗೆ ವಿಧಿಸಲಾಗಿದ್ದ ಶೇ.5 ಶುಲ್ಕವನ್ನು ಶೇ.2ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೆ ಈ ಸೌಲಭ್ಯ ಆ.23ರವರೆಗೆ ಮಾತ್ರ ಇರಲಿದೆ ಎಂದು ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ಆದೇಶ ಹೊರಡಿಸಿದೆ.

ಬಿ ಖಾತಾ ಆಸ್ತಿದಾರರಿಗೂ ಗುಡ್‌ನ್ಯೂಸ್
ಇನ್ನು ಕರ್ನಾಟಕ ಸರ್ಕಾರವು ಬಿ ಖಾತಾ ಆಸ್ತಿದಾರರಿಗೂ ಬಂಪರ್ ಗುಡ್‌ನ್ಯೂಸ್ ಕೊಟ್ಟಿತ್ತು. ಬೆಂಗಳೂರಿನಲ್ಲಿ ಪ್ರಾರಂಭವಾದ ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆಯು ಮುಂದೆ ಕರ್ನಾಟಕದಾದ್ಯಂತ ವಿಸ್ತರಿಸಲಾಗಿತ್ತು. ಅಲ್ಲದೆ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಯಾವುದೇ ಲೋಪವಾಗಬಾರದು ಎನ್ನುವ ಉದ್ದೇಶದಿಂದ ಇ ಖಾತಾವನ್ನು ಸಹ ಪರಿಚಯಿಸಲಾಗಿತ್ತು. ಈ ಹಿಂದೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸಲು ವಿಧಿಸಲಾಗಿದ್ದ ಶುಲ್ಕವನ್ನು ಶೇ.5ರಿಂದ ಶೇ.2ಕ್ಕೆ ಇಳಿಕೆ ಮಾಡಲಾಗಿತ್ತು. ಆದರೆ ಏಕ ನಿವೇಶನ ಅನುಮೋದನೆಯಡಿ ಹೊಸದಾಗಿ ಎ ಖಾತಾ ಪಡೆಯುವವರಿಗೆ ವಿಧಿಸಲಾಗುತ್ತಿದ್ದ ಶುಲ್ಕ ಪ್ರಮಾಣವು ಶೇ.5ರಷ್ಟು ಮುಂದುವರಿದಿತ್ತು.
ಇದೀಗ ಹೊಸ ಆದೇಶದಂತೆ ಆಕ್ಟೋಬರ್ 23ರ ವರೆಗೆ ಎ ಖಾತಾಕ್ಕೆ ಅರ್ಜಿ ಸಲ್ಲಿಸುವ ಏಕ ನಿವೇಶನ ಅನುಮೋದನೆಯಡಿ ಹೊಸದಾಗಿ ಎ ಖಾತಾ ಪಡೆಯುವ ಆಸ್ತಿ ಮಾಲೀಕರು ಸಹ ಸೇರಿದಂತೆ ಎಲ್ಲ ಅರ್ಹ ಪ್ರಕರಣಗಳಿಗೆ ಮಾರ್ಗಸೂಚಿ ಮೌಲ್ಯದ ಶೇ.2 ಶುಲ್ಕ ಅನ್ವಯವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆಯು ತಿಳಿಸಿದೆ. ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರಿಗೂ ಸಹ ಈ ರಿಯಾಯಿತಿ ಲಭ್ಯವಾಗಲಿದೆ. ಈ ಸಂಬಂಧ ಆನ್‌ಲೈನ್‌ನಲ್ಲಿ ಹೊಸ ಅಥವಾ ಪರಿಷ್ಕೃತ ಡಿಮಾಂಡ್ ನೋಟಿಸ್‌ಗಳನ್ನು ಹೊರಡಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಶುಲ್ಕ ರಿಯಾಯಿತಿ ಯಾವಾಗ ಅಂತ್ಯ ?
ಇನ್ನು ಕರ್ನಾಟಕ ಸರ್ಕಾರವು ಬಿ ಖಾತಾದಿಂದ ಎ ಖಾತಾಗೆ ಆಸ್ತಿಗಳ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ರಿಯಾಯಿತಿ ಕೊಟ್ಟಿದೆ. ಈ ಹಿಂದೆ ಆಸ್ತಿಗಳ ಗೈಡ್‌ಲೈನ್ಸ್ ವ್ಯಾಲ್ಯೂವಿನ ಮೇಲೆ ಶೇ 5ರಷ್ಟು ಶುಲ್ಕ ಪಾವತಿ ಮಾಡಬೇಕಾಗಿತ್ತು. ಅದನ್ನು ಇದೀಗ ಶೇ2ಕ್ಕೆ ಇಳಿಕೆ ಮಾಡಲಾಗಿದ್ದು. 100 ದಿನಗಳ ವಿಶೇಷ ಅಭಿಯಾನ ಚಾಲ್ತಿಯಲ್ಲಿದೆ. ಈ ಅಭಯಾನವು ಇದೇ ಅಕ್ಟೋಬರ್ 23ಕ್ಕೆ ಮುಕ್ತಾಯವಾಗಲಿದೆ. ಇದಾದ ನಂತರ ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆ ಮಾಡಿಕೊಳ್ಳುವವರು ಶೇ 5ರಷ್ಟು ಗೈಡ್‌ಲೈನ್ಸ್‌ವ್ಯಾಲ್ಯೂ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಸರ್ಕಾರವು ತಿಳಿಸಿದೆ.


Click it and Unblock the Notifications
