Property: ಆಸ್ತಿದಾರರು, ಮನೆ ಮಾಲೀಕರು & ಬಾಡಿಗೆದಾರರಿಗೆ ಸರ್ಕಾರದಿಂದ ಬಿಗ್‌ಶಾಕ್ !
Property: ಕರ್ನಾಟಕ ಸರ್ಕಾರವು ಆಸ್ತಿ ತೆರಿಗೆ ಹಾಗೂ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ. ಈಗಾಗಲೇ ಇ - ಖಾತಾ - ಬಿ - ಖಾತಾ ತಿದ್ದುಪಡಿ ಮತ್ತು ಎ - ಖಾತಾದಂತಹ ಪ್ರಮುಖ ಖಾತಾಗಳಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ನಿಯಮಗಳನ್ನು ರೂಪಿಸಲಾಗಿದೆ.
ಈ ರೀತಿ ಇರುವಾಗಲೇ ಕರ್ನಾಟಕದ ಆಸ್ತಿದಾರರು (ಮನೆ ಮಾಲೀಕರು) ಹಾಗೂ ಬಾಡಿಗೆದಾರರಿಗೆ ದೊಡ್ಡ ಶಾಕ್ ಕೊಡುವುದಕ್ಕೆ ಮುಂದಾಗಿದೆ. ಬೆಂಗಳೂರು - ಮೈಸೂರು, ಹುಬ್ಬಳ್ಳಿ - ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಗಗನಮುಖಿಯಾಗಿದೆ. ಈ ರೀತಿ ಇರುವಾಗಲೇ ಮಹತ್ವದ ಅಪ್ಡೇಟ್ಸ್ ನೀಡಲಾಗಿದೆ.

ಕರ್ನಾಟಕ ಸರ್ಕಾರವು ಖಾತಾ ಹಾಗೂ ಆಸ್ತಿ ರಿಜಿಸ್ಟ್ರೇಷನ್‌ನಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿದ ಮೇಲೆ ಇದೀಗ ಕರ್ನಾಟಕದ ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೂ ಶಾಕ್ ಕೊಡುವುದಕ್ಕೆ ಮುಂದಾಗಿದೆ. ಕರ್ನಾಟಕ ಸರ್ಕಾರವು ಬಾಡಿಗೆ ನಿಯಂತ್ರಣ ಕಾಯ್ದೆಗೆ ಕೆಲವೊಂದು ಪ್ರಮುಖ ತಿದ್ದುಪಡಿಗಳನ್ನು ತಂದಿದೆ. ಬಾಡಿಗೆ ವಿವಾದಗಳನ್ನು ಅಪರಾಧವಲ್ಲ ಎಂದು ಪರಿಗಣಿಸಲಾಗಿದ್ದು, ದಂಡವನ್ನು ಹತ್ತರಿಂದ ಇಪ್ಪತ್ತು ಪಟ್ಟು ಹೆಚ್ಚಿಸಿದೆ. ಬೆಳಗಾವಿಯಲ್ಲಿ ನಡೆಯುಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ತಿದ್ದುಪಡಿಗಳನ್ನು ಮಂಡಿಸುವ ಸಾಧ್ಯತೆ ಇದೆ.
ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಈ ತಿದ್ದುಪಡಿಗಳಲ್ಲಿ ಮನೆ ಮಾಲೀಕರು ಅಥವಾ ಆಸ್ತಿದಾರರಿಗೆ ಮಾತ್ರವಲ್ಲ ಮನೆ ಬಾಡಿಗೆದಾರರಿಗೂ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸುವ ಅಧಿಕಾರವನ್ನು ಹೊಂದಿದೆ. ಕೇಂದ್ರ ಸರ್ಕಾರದ ಜನ ವಿಶ್ವಾಸ್ ಕಾಯ್ದೆ 2025ಕ್ಕೆ ಅನುಗುಣವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮನೆಯೊಂದನ್ನು ಬಾಡಿಗೆ ಪಡೆಯುವು ಬಾಡಿಗೆದಾರರು ಅದನ್ನು ಇನ್ನೊಬ್ಬರಿಗೆ ಬಾಡಿಗೆಗೆ ಬಿಡುವಂತೆ ಇಲ್ಲ.
ಮನೆ ಮಾಲೀಕರು ಬಾಡಿಗೆದಾರರನ್ನು ಕಾನೂನುಬಾಹಿರವಾಗಿ ಅಥವಾ ಒತ್ತಾಯಪೂರ್ವಕವಾಗಿ ಹೊರಹಾಕುವಂತಿಲ್ಲ. ಆಸ್ತಿ ವಿವರಗಳನ್ನು ತಪ್ಪಾಗಿ ಕೊಡುವಂತಿಲ್ಲ. ರಿಯಲ್ ಎಸ್ಟೇಟ್ ಏಜೆಂಟ್‌ಗಳು ಅಥವಾ ಮಧ್ಯವರ್ತಿಗಳು ಬಾಡಿಗೆ ನಿಯಂತ್ರಕ ಕಾನೂನಿನಲ್ಲಿ ನೋಂದಾಯಿಸಿಕೊಳ್ಳಬೇಕು ಎನ್ನುವ ಕೆಲವೊಂದು ಪ್ರಮುಖ ವಿಷಯಗಳನ್ನು ಇದರಲ್ಲಿ ಸೇರಿಸಲಾಗಿದೆ.
ರಾಜ್ಯದಲ್ಲಿ ಕೆಲವು ಆಸ್ತಿ ಮಾಲೀಕರು ಬೇಕಾಬಿಟ್ಟಿ ಬಾಡಿಗೆ ವಿಧಿಸುವುದು ಹಾಗೂ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ವ್ಯಾಜ್ಯಗಳು ಇದರಿಂದ ಕಡಿಮೆ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಮುಖ್ಯವಾಗಿ ಬಾಡಿಗೆದಾರರು ಅಥವಾ ಮನೆ ಮಾಲೀಕರು ಸರ್ಕಾರದ ಈ ಕಾಯ್ದೆಯ ನಿಯಮವನ್ನು ಉಲ್ಲಂಘನೆ ಮಾಡಿದರೆ, ಇದರಲ್ಲಿ ದಂಡ ಅಥವಾ ಜೈಲು ಶಿಕ್ಷೆ ಆಗುವ ಸಾಧ್ಯತೆಯೂ ಇದೆ.












Click it and Unblock the Notifications