ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರನ್ನು ಭಯೋತ್ಪಾದಕರು ಎಂದ ಶಿಕ್ಷಕ: ವಿಡಿಯೋ ಹಂಚಿಕೊಂಡ ಯುನೆಸ್ಕೊ ಅಧ್ಯಕ್ಷ

|
Google Oneindia Kannada News

ಮಂಗಳೂರು, ನ.28: ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ಮುಸ್ಲಿಂ ಸಮುದಾಯದವರನ್ನು 'ಭಯೋತ್ಪಾದಕ' ಎಂಬ ಪದವನ್ನು ಬಳಸಿ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತರಗತಿಯಲ್ಲಿದ್ದ ವಿದ್ಯಾರ್ಥಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಧ್ಯಕ್ಷರೂ ಆಗಿರುವ ಪ್ರೊಫೆಸರ್ ಅಶೋಕ್ ಸ್ವೈನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಬೆಂಗಳೂರು: ಪಾಕ್ ಪರ ಘೋಷಣೆ ಮೂವರು ವಿದ್ಯಾರ್ಥಿಗಳ ಬಂಧನ, ಬಿಡುಗಡೆಬೆಂಗಳೂರು: ಪಾಕ್ ಪರ ಘೋಷಣೆ ಮೂವರು ವಿದ್ಯಾರ್ಥಿಗಳ ಬಂಧನ, ಬಿಡುಗಡೆ

ವಿಡಿಯೋದಲ್ಲಿ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡಿರುವ ವಿದ್ಯಾರ್ಥಿ, ನನ್ನ ಧರ್ಮದ ಬಗ್ಗೆ ತಮಾಷೆ ಮಾಡಲು ಸಾಧ್ಯವಿಲ್ಲ. ಈ ದೇಶದಲ್ಲಿ ಮುಸ್ಲಿಮರಾಗಿದ್ದು ಇದನ್ನೆಲ್ಲ ಎದುರಿಸುವುದು ತಮಾಷೆಯಲ್ಲ ಎಂದು ಹೇಳಿದ್ದಾರೆ. ನಂತರ ಶಿಕ್ಷಕರು ವಿದ್ಯಾರ್ಥಿಯ ಕ್ಷಮೆಯಾಚಿಸಿದ್ದಾರೆ.

Professor Allegedly Calling Muslim Student Terrorist

ಭಯೋತ್ಪಾದಕರು ಎಂದು ಕರೆದದ್ದನ್ನು ಖಂಡಿಸಿರುವ ವಿದ್ಯಾರ್ಥಿ, "ನೀವು ಅಂತಹ ಹೇಳಿಕೆಗಳನ್ನು ಹೇಗೆ ನೀಡುತ್ತಿರಿ?" ಎಂದು ಕೇಳಿದ್ದಾರೆ. ಆದರೆ ಅದನ್ನು ತಮಾಷೆಗೆ ಹೇಳಿದ್ದು ಎಂದು ಪ್ರಾಧ್ಯಾಪಕರು ಹೇಳಿದಕ್ಕೆ ವಿದ್ಯಾರ್ಥಿ ಮತ್ತಷ್ಟು ಕೋಪಗೊಂಡು, ಇದು ತಮಾಷೆಯಯ ವಿಷಯವಲ್ಲ ಸರ್, ಮುಸ್ಲಿಮರಾಗಿರುವುದು ಮತ್ತು ಈ ದೇಶದಲ್ಲಿ ಇಂತಹ ವಿಷಯಗಳನ್ನು ಎದುರಿಸುವುದು ತಮಾಷೆಯಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಳಿಕ ಪ್ರಾಧ್ಯಾಪಕರು ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿ ನೀನು ನನ್ನ ಮಗನಿಗೆ ಸಮಾನ ಎಂದು ಹೇಳಿದ್ದಾರೆ. ಅದಕ್ಕೆ ಯುವಕ, "ನಿಮ್ಮ ಮಗನನ್ನು ಹೀಗೆ ನಡೆಸಿಕೊಳ್ಳುತ್ತೀರಾ? ತರಗತಿಯಲ್ಲಿರುವ ಎಲ್ಲರ ಮುಂದೆ ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತಿರಾ..? ಕ್ಷಮಿಸಿ ಎಂದು ಕೇಳಿದರೇ, ನೀವು ಈಗ ನಮ್ಮನ್ನು ಇಡೀ ತರಗತಿಯ ಮುಂದೆ ಚಿತ್ರಿಸಿರುವ ರೀತಿ ಬದಲಾಗುವುದಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಾಧ್ಯಾಪಕರು ವಿದ್ಯಾರ್ಥಿಯೊಂದಿಗೆ ಸಂಭಾಷಣೆ ನಡೆಸಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದರು ಎಂದು ಮೂಲಗಳು ತಿಳಿಸಿವೆ. ಈ ವಿಷಯವನ್ನು ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ನಡುವೆ ಬಗೆಹರಿಸಲಾಗಿದೆ ಎಂದು ತಿಳಿಸದುಬಂದಿದೆ.

Professor Allegedly Calling Muslim Student Terrorist

ಈ ಘಟನೆಯ ವಿಡಿಯೋವನ್ನು ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಧ್ಯಕ್ಷರೂ ಆಗಿರುವ ಪ್ರೊಫೆಸರ್ ಅಶೋಕ್ ಸ್ವೈನ್ ಹಂಚಿಕೊಂಡಿದ್ದಾರೆ. ಜೊತೆಗೆ "ಭಾರತದ ತರಗತಿ ಕೊಠಡಿಯಲ್ಲಿ ಪ್ರಾಧ್ಯಾಪಕರೊಬ್ಬರು ಮುಸ್ಲಿಂ ವಿದ್ಯಾರ್ಥಿಯನ್ನು 'ಭಯೋತ್ಪಾದಕ' ಎಂದು ಕರೆಯುತ್ತಾರೆ. ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವುದು ಹೀಗೆ" ಎಂದಿದ್ದಾರೆ.

English summary
Manipal University professor allegedly calling muslim student a terrorist . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X