ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರಕಾರದ 40% ಕಮಿಷನ್: ಹೊಸ ಲೆಕ್ಕ ಹೇಳಿದ ಪ್ರಿಯಾಂಕ್ ಖರ್ಗೆ

|
Google Oneindia Kannada News

ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ ನ ಜಾಗತಿಕ ಜೀವನಯೋಗ್ಯ ಸೂಚ್ಯಂಕ 2022ರ ವರದಿಯನ್ನು ಉಲ್ಲೇಖಿಸುತ್ತಾ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಮತ್ತು ಪ್ರಿಯಾಕ್ ಖರ್ಗೆ, ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

"ವಿಶ್ವದ 173 ನಗರಗಳ ಪಟ್ಟಿಯಲ್ಲಿ ಭಾರತದ ಪ್ರಮುಖ ಐದು ನಗರಗಳು 140ರಿಂದ 146 ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಅತಿ ಕಳಪೆ ಸ್ಥಾನ (146) ಬೆಂಗಳೂರಿನದ್ದಾಗಿದೆ, ಕಳೆದ ವರ್ಷ ನಡೆದ ಅಧ್ಯಯನದಲ್ಲಿ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿತ್ತು" ಎಂದು ರಾಮಲಿಂಗ ರೆಡ್ಡಿ ಆರೋಪಿಸಿದರು.

'ಸಿದ್ದರಾಮೋತ್ಸವ ಡಿಕೆಶಿ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ''ಸಿದ್ದರಾಮೋತ್ಸವ ಡಿಕೆಶಿ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ'

ಬೆಂಗಳೂರು, ಜುಲೈ 4: ರಾಜ್ಯ ಸರಕಾರದ ವಿರುದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ನಲವತ್ತು ಪರ್ಸೆಂಟ್ ಕಮಿಷನ್ ಎಂದು ಆರೋಪಿಸಿದ ನಂತರ, ವಿರೋಧ ಪಕ್ಷವಾದ ಕಾಂಗ್ರೆಸ್ ಈ ವಿಚಾರದಲ್ಲಿ ಬಿಜೆಪಿ ಸರಕಾರವನ್ನು ಬೆಂಡೆತ್ತುತ್ತಲೇ ಇದೆ.

ಈ ವಿಚಾರದಲ್ಲಿ ಹೊಸ ಲೆಕ್ಕವನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ಅವರ ಪ್ರಕಾರ ಕಮಿಷನ್ ಕೇಂದ್ರ ಸರಕಾರಕ್ಕೂ ಹೋದ ನಂತರ, ಗುತ್ತಿಗೆದಾರರಿಗೆ ಸಿಗುವುದು ಹಿಡಿಮಣ್ಣು ಮಾತ್ರ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

ಪ್ರಧಾನಿ ಮೋದಿ, ಬಿಜೆಪಿ ಮೇಲೆ ಯಾಕೀ ಸಿಟ್ಟು? ಭಯವೇ ಕೆಸಿಆರ್?ಪ್ರಧಾನಿ ಮೋದಿ, ಬಿಜೆಪಿ ಮೇಲೆ ಯಾಕೀ ಸಿಟ್ಟು? ಭಯವೇ ಕೆಸಿಆರ್?

 ಎಕನಾಮಿಸ್ಟ್ ಇಂಟೆಲಿಜೆನ್ಸ್ ಜೀವನಯೋಗ್ಯ ನಗರಗಳ ಪಟ್ಟಿ

ಎಕನಾಮಿಸ್ಟ್ ಇಂಟೆಲಿಜೆನ್ಸ್ ಜೀವನಯೋಗ್ಯ ನಗರಗಳ ಪಟ್ಟಿ

ಸ್ಥಿರತೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಿಸರ, ಮೂಲಭೂತ ಸೌಕರ್ಯವನ್ನು ಆಧರಿಸಿ ಎಕನಾಮಿಸ್ಟ್ ಇಂಟೆಲಿಜೆನ್ಸ್, ಜೀವನಯೋಗ್ಯ ನಗರವನ್ನು ಪಟ್ಟಿ ಮಾಡುತ್ತದೆ. ಈ ಪಟ್ಟಿಯಲ್ಲಿ ಅತ್ಯಂತ ಯೋಗ್ಯ ನಗರದ ಶ್ರೇಯಸ್ಸು ಆಸ್ಟ್ರಿಯಾ ದೇಶದ ವಿಯೆನ್ನಾ, ಡೆನ್ಮಾರ್ಕಿನ ಕೋಪನ್ ಹೆಗನ್, ಸ್ವಿಜರ್ಲ್ಯಾಂಡಿನ ಜಿನಿವಾ, ಕೆನಡಾದ ಕ್ಯಾಲ್ಗರಿ, ವ್ಯಾಂಕೋವರ್ ನಗರಗಳಿವೆ. ಭಾರತದ ದೆಹಲಿ, ಮುಂಬೈ, ಚೆನ್ನೈ, ಅಹ್ಮದಾಬಾದ್ ನಗರದ ನಂತರ ಬೆಂಗಳೂರು 146ನೇ ಶ್ರೇಯಾಂಕದಲ್ಲಿದೆ.

 ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದಾಗ ಹಾಕಿದ ಡಾಂಬರ್

ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದಾಗ ಹಾಕಿದ ಡಾಂಬರ್

"ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದಾಗ ಹಾಕಿದ ಡಾಂಬರ್ ಒಂದೇ ದಿನದಲ್ಲಿ ಕಿತ್ತು ಹೋಯಿತು. ಬಿಜೆಪಿ ಸರಕಾರದ ಕಮಿಷನ್ ಶೇ. 40% ಅಲ್ಲ, ರಾಜ್ಯಕ್ಕೆ ನಲವತ್ತು ಪರ್ಸೆಂಟ್, ಕೇಂದ್ರ ಸರಕಾರಕ್ಕೆ ಕೂಡಾ ನಲವತ್ತು ಪರ್ಸೆಂಟ್ ಹೋಗುತ್ತಿದೆ. ಹಾಗಾಗಿ, ಅಲ್ಲಿಗೆ ಉಳಿಯುವುದು ಇಪ್ಪತ್ತು ಪರ್ಸೆಂಟ್ ಮಾತ್ರ. ಅದರಲ್ಲೇ ಗುತ್ತಿಗೆದಾರ ಕೆಲಸ ಮಾಡಬೇಕು"ಎಂದು ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ, ಕಮಿಷನಿನ ಹೊಸ ಲೆಕ್ಕವನ್ನು ನೀಡಿದ್ದಾರೆ.

 ಕರಾಚಿ ನಗರ ಬೆಂಗಳೂರಿಗಿಂತ ಉತ್ತಮ ಎಂದು ವರದಿ ಹೇಳಿದೆ

ಕರಾಚಿ ನಗರ ಬೆಂಗಳೂರಿಗಿಂತ ಉತ್ತಮ ಎಂದು ವರದಿ ಹೇಳಿದೆ

"ನಾವು ಚೆನ್ನೈಗಿಂತ ಗುಣಮಟ್ಟದಲ್ಲಿ ಕೆಳಗೆ ಹೋಗಿದ್ದೇವೆ. ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ಆದರೆ, ಕರಾಚಿ ನಗರ ಬೆಂಗಳೂರಿಗಿಂತ ಉತ್ತಮ ಎಂದು ವರದಿ ಹೇಳಿದೆ. ಕರಾಚಿಗೆ ಹೋಗಿ ಬಿಜೆಪಿಯವರು ಕಲಿಯಲಿ. ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಅಭಿವೃದ್ಧಿಯಾಗಿತ್ತು. ಎಸ್.ಎಂ. ಕೃಷ್ಣ, ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಉತ್ತಮ ಯೋಜನೆ ತಂದಿದ್ದೆವು. ಕಾವೇರಿ ಮೂರು, ನಾಲ್ಕನೇ ಹಂತ ತಂದಿದ್ದೆವು. ವಿಶ್ವದ ಟಾಪ್ ಟೆನ್ ನಗರಗಳ ಪೈಕಿ ಬೆಂಗಳೂರು ಇತ್ತು"ಎಂದು ರಾಮಲಿಂಗ ರೆಡ್ಡಿ ಹೇಳಿದರು.

 ಮೂಲ ಸೌಕರ್ಯ ಸರಿಯಿಲ್ಲ ಎಂದಿದ್ದ ಕಿರಣ್ ಮುಜುಂದಾರ್

ಮೂಲ ಸೌಕರ್ಯ ಸರಿಯಿಲ್ಲ ಎಂದಿದ್ದ ಕಿರಣ್ ಮುಜುಂದಾರ್

"ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳೇ ಕುಸಿದಿವೆ, ಇದಕ್ಕೆಲ್ಲ ಕಾರಣ ಮೂರು ವರ್ಷದ ಬಿಜೆಪಿ‌ ಸರಕಾರ. ಬೆಂಗಳೂರು ಈಗ ಐಸಿಯುನಲ್ಲಿದೆ, ಮುಂಚೆ ಗಾರ್ಡನ್ ಸಿಟಿ ನಂತರ ಗಾರ್ಬೇಜ್ ಸಿಟಿ ಆಗಿದ್ದ ಬೆಂಗಳೂರು ಈಗ ಗಾಂಜಾ ಸಿಟಿ ಆಗಿದೆ. ಇದನ್ನು ನಾವು ಹೇಳುತ್ತಿಲ್ಲ, ವರದಿಗಳು ಹೇಳುತ್ತಿವೆ. ಬೇರೆ ಬೇರೆ ರಾಜ್ಯ ಕರೆಯುತ್ತಿದ್ದಾರೆ. ಕೆಟಿಎಆರ್ ನಮ್ಮ ಕಡೆ ಬನ್ನಿ ಅಂತ ಕರೆಯುತ್ತಿದ್ದಾರೆ, ಉದ್ಯಮಿಗಳನ್ನ ಬಂಡವಾಳ ಹೂಡಿ ಅಂತಿದ್ದಾರೆ. ಮೂಲ ಸೌಕರ್ಯ ಸರಿಯಿಲ್ಲ ಅಂತ ಕಿರಣ್ ಮುಜುಂದಾರ್ ಕೂಡ ಹೇಳಿದ್ದಾರೆ, ಅವರೇನು ರಾಜಕಾರಣಿಗಳಾ"ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

English summary
Priyank Kharge And Rmalinga Reddy Said BJP Government Corruption Percentage Increased. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X