ʼಒಂದು ಬಾಗಿಲು ಯತ್ನಾಳ ಕಾಯ್ತಾ ಇದ್ದಾರೆ; ಬಿಜೆಪಿ ಮೂರು ಬಾಗಿಲು ಅಲ್ಲ, ನೂರು ಬಾಗಿಲಾಗಿದೆʼ

ಬೆಂಗಳೂರು, ಡಿಸೆಂಬರ್‌ 21: ಬಿಜೆಪಿಯಲ್ಲಿ ಸಮನ್ವಯತೆ ಇಲ್ಲವಾಗಿದೆ. ಅಸಲಿ ವಿರೋಧ ಪಕ್ಷದ ನಾಯಕ ನಾನು ಅಂತ ಇನ್ನೊಬ್ಬರು ಹೇಳ್ತಾರೆ. ಮೂರಲ್ಲ ಬಿಜೆಪಿ ಅವರ ಮನೆ ನೂರು ಬಾಗಿಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದರು.

ಈ ವೇಳೆ ಲೋಕಸಭೆ ಗೆಲ್ಲಲು ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಮಾಧ್ಯಮಗಳ ಪ್ರಶ್ನೆಗೆ ಪ್ರಿಯಾಂಕ್‌ ಖರ್ಗೆ ಉತ್ತರಿಸಿ, ಎರಡೂ ಮನೆಗೂ ಬೆಂಕಿ ಹತ್ತಿದೆ. ಬೆಳಗಾವಿಯಲ್ಲಿ ನೋಡಿದ್ದೇವೆ ಇವರದ್ದು ಮನೆ ಒಂದು ಮೂರು ಬಾಗಿಲಾಗಿದೆ. ಒಂದು ಬಾಗಿಲು ಯತ್ನಾಳ ಕಾಯ್ತಾ ಇದ್ದಾರೆ. ಇನ್ನೊಂದು ಬಾಗಿಲು ಅಶೋಕ್ ಕಾಯ್ತಾ ಇದ್ದಾರೆ. ಮೂರನೇ ಬಾಗಿಲು ವಿಜಯೇಂದ್ರ ಕಾಯ್ತಾ ಇದ್ದಾರೆ. ಎಲ್ಲಿದೆ ಇವರಲ್ಲಿ ಸಮನ್ವಯ ? ಎಂದು ಪ್ರಶ್ನಿಸಿದ್ದಾರೆ.

Priyank Kharge Attacks That There Is Lack Of Coordination In BJP

ಪ್ರತಾಪ ಸಿಂಹ ವಿಚಾರಣೆ ಅಗತ್ಯ ಇಲ್ಲ ಎನ್ನುವ ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಹೇಳಿಕೆ ಕುರಿತು ಸಚಿವ ಪ್ರೀಯಾಂಕ್ ಖರ್ಗೆ ಕಿಡಿಕಾರಿದ್ದು, ಕಲ್ಬುರ್ಗಿ ಎಂ ಪಿ ಉಮೇಶ್ ಜಾದವ್ ಗೆ ಬುದ್ಧಿ ಇಲ್ಲ. ಇದು ಗಂಭೀರವಾದಂತ ವಿಚಾರ ಎಂದು ನಿಮ್ಮ ಪ್ರಧಾನಿ ಅವರೇ ಹೇಳಿದ್ದಾರೆ. ಪ್ರತಾಪ್ ಸಿಂಹ ವಿಚಾರಣೆ ಅವಶ್ಯಕತೆ ಇಲ್ಲ ಅನ್ನೋರು ಇವರ್ಯಾರು .ಇನ್ನಿಬ್ಬರಿಗೂ ಬಿಜೆಪಿ ಸಂಸದರೇ ಪಾಸ್ ಕೊಟ್ಟಿದ್ದಾರಂತೆ. ಉಮೇಶ ಜಾಧವ ಅವರೇ ಕೊಟ್ಟಿದ್ದರೆ ಏನ್ಮಾಡ್ತಿರಾ ? ಉತ್ತರ ಕೊಡಲಿ ಎಂದು ಸವಾಲ ಹಾಕಿದರು.

ಇಂಡಿಯಾ ಮೈತ್ರಿ ಕೂಟದಿಂದ ಮಲ್ಲಿಕಾರ್ಜುನ್‌ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಯಾರೋ ಒಬ್ಬರು ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ ? ಎಂದು ಹೇಳಿದರು. ಈಗಾಗಲೇ ಎಐಸಿಸಿ ಅಧ್ಯಕ್ಷರು ಈ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಮುಂದೆ ಈಗಿರುವ ಸವಾಲು ಆದಷ್ಟು ಹೆಚ್ಚಿನ ಸಂಸದರನ್ನ ಆಯ್ಕೆ ಮಾಡಿ ದೆಹಲಿಗೆ ಕಳಿಸುವುದು ಎಂದು ಮೆಜಾರಿಟಿ ತರಲು ಏನೇನು ಮಾಡಬೇಕು ಮಾಡುತ್ತೆವೆ ಎಂದು ಹೇಳಿದರು.

ಯಾರೋ ಒಬ್ಬರು ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ ? ಆದರೆ ಒಳ್ಳೆಯದು. ಈಗ ನಮ್ಮ ಮುಂದೆ ಇರುವ ಪ್ರಾಕ್ಟಿಕಲ್ ಸವಾಲುಗಳು ಏನು ಎನ್ನುವುದು ಗಮನಿಸಬೇಕು. ಸುಮ್ಮನೆ ಹಾಗಲುಗನಸು ಕಾಣೋದಲ್ಲ. ನಾವು ಮೊದಲು ಕಾಂಗ್ರೆಸ್ ನಿಂದ 200- 250 ಸ್ಥಾನ ಗೆಲ್ಲಬೇಕು. ಮೈತ್ರಿ ಕೂಟ ಜೊತೆ ಒಗ್ಗೂಡಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಇವೆಲ್ಲವೂ ಮುಗಿದ ಮೇಲೆ ಮುಂದಿನ ಪ್ರಶ್ನೆಗಳು ಎಂದು ಹೇಳಿದರು.

Priyank Kharge Attacks That There Is Lack Of Coordination In BJP

ಸಂಸತ್ ಭವನದಲ್ಲಿ ದಾಳಿ ವಿಚಾರದ ಕುರಿತು ಪ್ರತಿಕ್ರಿಯಿಸಿದರು. ಜವಾಬ್ದಾರಿ ಸ್ಥಾನದಲ್ಲಿರುವ ಆಡಳಿತ ಪಕ್ಷದವರು ಮಾತನಾಡುವುದು ತಪ್ಪು, ಆರು ಜನರು ಈಗಾಗಲೇ ಟೆರರಿಸ್ಟ್ ಆಕ್ಟ್ನಲ್ಲಿ ಅರೆಸ್ಟ್ ಆಗಿದ್ದಾರೆ. ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ಸದನದಲ್ಲಿ ಇದುವರೆಗೂ ಹೇಳಿಕೆ ಕೊಟ್ಟಿಲ್ಲ. ಯಾರು ಪ್ರಶ್ನೆ ಮಾಡ್ತಿದ್ದಾರೆ ಅಂತಹ 141 ಎಂ ಪಿ ಗಳನ್ನು ಸಸ್ಪೆಂಡ್ ಮಾಡಿದ್ದಾರೆ‌. ದಾಳಿ ಯಾಕಾಯ್ತು ? ಎಂದು ಕೇಳಿದ್ದಕ್ಕೆ ಸಸ್ಪೆಂಡ್ ಮಾಡಿದ್ದಾರೆ ಎಂದರೆ ಇದು ಅವರ ಅಸಮರ್ಥತೆ ಎತ್ತಿ ತೋರಿಸುತ್ತದೆ

ಆರು ಜನರನ್ನ ಅರೆಸ್ಟ್ ಮಾಡಿದ್ದಾರೆ. ಹಾಗಾದರೆ ಅವರಿಗೆ ಪಾಸ್ ಕೊಟ್ಟವರನ್ನು ಏಕೆ ವಿಚಾರಣೆಗೆ ಒಳಪಡಿಸಿಲ್ಲ ?. ಪಾಸ್ ಪಟ್ಟವರಿಗೆ ಏನು ಮಾಡಿದ್ದಾರೆ ?ಅವರಿಗೆ ವಿಚಾರಣೆಗೆ ಕರೆದು ಸ್ಟೇಟ್ಮೆಂಟ್ ತಗೊಂಡ್ರಾ ? ಇನ್ನೂ ಕೆಲವರಿಗೂ ಇನ್ನೊಬ್ಬ ಬಿಜೆಪಿ ಸಂಸದರೆ ಪಾಸ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಅದು ಬಹಿರಂಗವಾಗಲಿ. ಯಾವುದೇ ಗಂಭೀರ ವಿಚಾರ ಇದ್ರೆ ಪ್ರಧಾನಿ ಇರಬಹುದು ಗೃಹ ಸಚಿವರು ಇರಬಹುದು ಸೋಮೋಟಾ ಸ್ಟೇಟ್ಮೆಂಟ್ ಕೊಡುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+