Get Updates
Get notified of breaking news, exclusive insights, and must-see stories!

Private Part Video: ಹೆಣ್ಣುಮಕ್ಕಳ ಪೋಷಕರಿಗೆ ಮಹತ್ವದ ಸಂದೇಶದ ವಿಡಿಯೋ ವೈರಲ್

Watch Viral Video: ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ಮಕ್ಕಳ ರಕ್ಷಣೆ, ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ ಮನೆಯೊಳಗೆ ಆರಂಭವಾಗಬೇಕು, ಯಾವ ಸ್ಪರ್ಶ "ಸರಿಯಲ್ಲ" ಎಂಬುದರ ಬಗ್ಗೆ ಪೋಷಕರು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಅರಿವು ಮೂಡಿಸುವ 'Private Part' ಸುಂದರ ವಿಡಿಯೋವೊಂದನ್ನು ಹಂಚಿಕೊಂಡು ಪೋಸ್ಟ್ ಮಾಡಲಾಗಿದೆ. ಪೋಷಕರಿಗೆ ಈ ಮೂಲಕ ಪೊಲೀಸರು ಸಲಹೆ ನೀಡಿದ್ದಾರೆ.

ಹೌದು ಹುಬ್ಬಳ್ಳಿಯಲ್ಲಿ ಮೂರು ತಿಂಗಳ ಹಿಂದಷ್ಟೇ ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕಿ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ಕೃತ್ಯ ಎಸಗಲಾಗಿತ್ತು. ಬಳಿಕ ಆಕೆಯನ್ನು ಕೊಂದು ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಬಿಹಾರದ ಪಾಟ್ನಾ ನಿವಾಸಿ ರಿತೇಶ್ ಕುಮಾರ್ ಎಂಬಾತ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ಇದು ಕೇವಲ ಹುಬ್ಬಳ್ಳಿಯ ಕಥೆಯಲ್ಲ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ. ಅದೆಷ್ಟೋ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

Private Part Video by Hubballi-Dharwad Police Raises Awareness on Child Safety

ಸರಿ-ತಪ್ಪುಗಳ ಅರಿವು ಪೋಷಕರಿಂದ ಸಿಗಬೇಕು

ಏನು ಅರಿಯದ ಬಾಲಕಿಯರು, ಸಣ್ಣ ಮಕ್ಕಳ ಮೇಲಿನ ಇಂತಹ ದೌರ್ಜನ್ಯ ತಡೆಯಲು ಮನೆಯಿಂದ ಹೋರಾಟ ಶುರುವಾಗಬೇಕು. ಅದಕ್ಕಾಗಿ ಮಹಿಳೆಯರು, ತಾಯಂದಿರು, ಪೋಷಕರು ಮನೆಯಲ್ಲಿ ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಸಬೇಕು. ಅರಿವು ಮೂಡಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸರು ತಿಳಿಸಿದ್ದಾರೆ. ಮಹತ್ವದ ವಿಡಿಯೋ ಹಂಚಿಕೊಂಡಿದ್ದಾರೆ.

'ಸರಿ ಸ್ಪರ್ಶ, ತಪ್ಪು ಸ್ಪರ್ಶ' ಬಗ್ಗೆ ಹೇಳಿಕೊಡಿ..

ಶಾಲೆ ಮಕ್ಕಳಿಗೆ ಎರಡನೇ ಮನೆ ಇದ್ದಂತೆ, ಶಾಲೆಗಳಲ್ಲಿ ಶಿಕ್ಷಕರು ವಿದ್ಯೆಯೊಂದಿಗೆ ಮಕ್ಕಳಿಗೆ Good Touch, Bad Touch ಗಳ ಬಗ್ಗೆಯೂ ಕಲಿಸುವುದು ಅತ್ಯವಶ್ಯಕ ಮತ್ತು ಅಂತಹ ಘಟನೆಗಳು ನಡೆದದಲ್ಲಿ ಅದರ ವಿರುದ್ಧ ಧ್ವನಿ ಎತ್ತುವುದು, ಪೋಷಕರ/ಶಿಕ್ಷಕರ ಗಮನಕ್ಕೆ ತರುವಂತೆ ಮಕ್ಕಳಿಗೆ ಹೇಳಿಕೊಡಬೇಕು.

ಮಕ್ಕಳ ಮೇಲೆ ಲೈಂಗಿನ ದೌರ್ಜನ್ಯಗಳನ್ನು ತಡೆಗಟ್ಟಲು ಪೋಕ್ಸೊ ಕಾಯ್ದೆ ಜಾರಿಗೆ ತರಲಾಗಿದೆ. ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದು, ಮುಟ್ಟುವುದು, ಸನ್ನೆ ಮಾಡುವುದು, ರೇಗಿಸುವುದು, ವಿವಿಧ ಆಮಿಷ ತೋರಿಸಿ ಏಕಾಂತ ಸ್ಥಳಕ್ಕೆ ಕರೆಯುವುದು ಸೇರಿದಂತೆ ದೈಹಿಕವಾಗಿ ಬಳಸಿಕೊಳ್ಳುವುದು ಘೋರ ಅಪರಾಧ. ಇದು ಜಾಮೀನು ರಹಿತ ಶಿಕ್ಷೆಗೆ ಒಳಪಡುತ್ತದೆ ಎಂದು ಹುಬ್ಬಳ್ಳಿ, ಧಾರವಾಡ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಹೇಳಿದರು.

'ಪ್ರೈವೇಟ್ ಪಾರ್ಟ್' ವಿಡಿಯೋದಲ್ಲಿ ಏನಿದೆ?

ಇಂಗ್ಲಿಷ್ ಕವಿತೆ ರೀತಿಯಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುತ್ತಾರೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸುವ ವಿಡಿಯೋ ಇದಾಗಿದೆ. 'ಇವು ನನ್ನ ಖಾಸಗಿ ಅಂಗಗಳು' ಎಂದು ಹೇಳುತ್ತಾ ಹಾಡು ಶುರುವಾಗುತ್ತದೆ. ''ಇವು ನನ್ನ ಪ್ರೈವೇಟ್ ಪಾರ್ಟ್, ಯಾರು ನೋಡಬೇಡಿ....ಯಾರು ಮುಟ್ಟಬೇಡಿ...ಮುಟ್ಟಿದರೆ! ನಾನು ಅಪ್ಪ-ಅಮ್ಮನಿಗೆ ಹೇಳುತ್ತೇನೆ. ಟೀಚರ್‌ಗೆ ಹೇಳುತ್ತೇನೆ'' ಎಂದು ಅರಿವು ಮೂಡಿಸುವ ವಿಡಿಯೋ ಇದಾಗಿದೆ. ಇದನ್ನು ಶೇರ್ ಮಾಡಿಕೊಳ್ಳುವ ಮೂಲಕ ಹುಬ್ಬಳ್ಳಿ-ಧಾರವಾಡ ಪೊಲೀಸರು ಅರಿವು ಮೂಡಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+