ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಜಮೀನುಗಳಲ್ಲಿ ಜನವಸತಿ; ಸಿಹಿ ಸುದ್ದಿ ಕೊಟ್ಟ ಸರ್ಕಾರ

|
Google Oneindia Kannada News

ಬೆಂಗಳೂರು, ನವೆಂಬರ್ 08; ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರವನ್ನು ನೀಡುವ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ನಿರ್ದೇಶಕರು, ಕಂದಾಯ ಗ್ರಾಮಗಳ ರಚನಾ ಕೋಶ ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ (ಕಂದಾಯ ಇಲಾಖೆ) ಡಾ. ರಾಜೇಂದ್ರ ಪ್ರಸಾದ್ ಎಂ. ಎಸ್. ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ.

ರಾಜ್ಯದಲ್ಲಿ ನೆಲೆಗೊಂಡಿರುವ ಜನವಸತಿಗಳ ಪೈಕಿ ಹಲವಾರು ಜನವಸತಿಗಳು ವಿಶೇಷವಾಗಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಜನವಸತಿಗಳು ದಾಖಲೆರಹಿತವಾಗಿ ಉಳಿದುಕೊಂಡಿರುತ್ತವೆ.

ಮನೆ ಖರೀದಿಸಲು ದೇಶದಲ್ಲಿ ಎನ್‌ಆರ್‌ಐಗಳ ಆಯ್ಕೆ ಯಾವುದು ಗೊತ್ತೆ...?ಮನೆ ಖರೀದಿಸಲು ದೇಶದಲ್ಲಿ ಎನ್‌ಆರ್‌ಐಗಳ ಆಯ್ಕೆ ಯಾವುದು ಗೊತ್ತೆ...?

ಇಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅಥವಾ ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸಿ, ಅಂತಹ ಕುಟುಂಬಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಸರ್ಕಾರ ಹೇಳಿದೆ.

ವಕ್ಫ್ ಭೂಮಿ ಕಬಳಿಕೆ: ಹೆಸರಾಂತ ವಕೀಲರ ಕೈಗೆ ಪ್ರಕರಣಗಳು? ವಕ್ಫ್ ಭೂಮಿ ಕಬಳಿಕೆ: ಹೆಸರಾಂತ ವಕೀಲರ ಕೈಗೆ ಪ್ರಕರಣಗಳು?

ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾಲಕಾಲಕ್ಕೆ ಸರ್ಕಾರವು ಮಾರ್ಗಸೂಚಿಗಳನ್ನು ಹೂರಡಿಸಿರುತ್ತದೆ. ಸರ್ಕಾರವು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38-ಎ ಮತ್ತು ನಿಯಮ 9-ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅವಕಾಶ ಕಲ್ಪಿಸಿದೆ. ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಈ ಕೆಳಕಂಡ ಅಂಶಗಳನ್ನು ಅನುಸರಿಸಬೇಕು ಎಂದು ಸೂಚನೆ ನೀಡಲಾಗಿದೆ.

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ

ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವಾಗ ಉಲ್ಲೇಖ(1)ರಲ್ಲಿ ತಿಳಿಸಿರುವ ಮಾನದಂಡಗಳ ಅನ್ವಯ ಖಾಸಗಿ ಜಮೀನಿನಲ್ಲಿ ಜನವಸತಿಗಳು ಇದ್ದಲ್ಲಿ, ಅಂತಹ ಸರ್ವೆ ನಂಬರ್ ಮತ್ತು ವಿಸ್ತೀರ್ಣವನ್ನು ಗುರುತಿಸಬೇಕು. ಪರಿವರ್ತನೆಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಜಿಲ್ಲಾಧಿಕಾರಿಗಳು ಮೊದಲಿಗೆ ಅವು ನೆಲೆಗೊಂಡಿರುವ ಜಾಗಗಳನ್ನು ಸರ್ಕಾರದಲ್ಲಿ ನಿಹಿತಗೊಳಿಸಲು ಕರ್ನಾಟಕ ಭೂ ಸುಧಾರಣ ಕಾಯ್ದೆ 1961 ರ ಕಲಂ 38-ಎ ಪ್ರಕಾರ ಅಧಿಸೂಚನೆಯನ್ನು ನಮೂನೆ 2-ಇ ರಲ್ಲಿ ಹೊರಡಿಸಿಬೇಕು. ಅಧಿಸೂಚನೆಗೆ ಸಾರ್ವಜನಿಕರ ಸಲಹೆ/ ಆಕ್ಷೇಪಣೆಗಳನ್ನು ಆಹ್ವಾನಿಸಿ, ಜಿಲ್ಲಾಧಿಕಾರಿಗಳ ಹೆಸರಿನಲ್ಲಿ, ಜಿಲ್ಲಾಧಿಕಾರಿಗಳು ಅವರ ಹಂತದಲ್ಲೇ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆ

ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆ

ದಾಖಲೆರಹಿತ ಜನವಸತಿಯು ನೆಲೆಸಿರುವ ಖಾಸಗಿ ಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆ ಹೊರಡಿಸಬೇಕು. ಖಾಸಗಿ ಹೆಸರಿನ ಜಾಗದಲ್ಲಿ ಭೂಮಾಲೀಕರೇ ಸ್ವತಃ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು 2-ಇ ಅಧಿಸೂಚನೆಯಲ್ಲಿ ತರಬಾರದು. ಆದರೆ ಗ್ರಾಮಠಾಣಾ ವಿಸ್ತೀರ್ಣಕ್ಕೆ ಒಳಪಡಿಸಬೇಕು. ಅಧಿಸೂಚನೆ ಸಂಬಂಧ ಸಾರ್ವಜನಿಕರ ಸಲಹೆ/ ಆಕ್ಷೇಪಣೆಗಳು ನಿಗದಿತ ಅವಧಿಯೊಳಗೆ ಸ್ವೀಕೃತಗೊಂಡಲ್ಲಿ, ಜಿಲ್ಲಾಧಿಕಾರಿಗಳು ಅಂತಹ ಸಲಹೆ/ ಆಕ್ಷೇಪಣೆಗಳನ್ನು ಪರಿಶೀಲಿಸಿ, ಸೂಕ್ತ ಲಿಖಿತ ಆದೇಶದೊಂದಿಗೆ ಆಕ್ಷೇಪಣೆಗಳನ್ನು ಒಪ್ಪಬಹುದು/ ತಿರಸ್ಕರಿಸಬಹುದು. 4000 ಚ.ಮೀ ಮೀರದಂತೆ ಅಥವಾ ವ್ಯಕ್ತಿಯ ನೈಜ ಸ್ವಾಧೀನದ ಭೂಮಿಯನ್ನು ಲಿಖಿತ ಆದೇಶದ ಮೂಲಕ ನಿರ್ಧರಿಸಬೇಕು. ಸಹಾಯಕ ಆಯುಕ್ತರು, ವಿಚಾರಣೆಯ ನಂತರ ವೈಯುಕ್ತಿಕವಾಗಿ/ ಸ.ನಂ ವಾರು ಆದೇಶ ಹೊರಡಿಸಬಹುದು ಎಂದು ಸರ್ಕಾರ ಹೇಳಿದೆ.

ಭೂಮಾಲೀಕರ ಪಟ್ಟಿಯನ್ನು ಸಿದ್ಧ

ಭೂಮಾಲೀಕರ ಪಟ್ಟಿಯನ್ನು ಸಿದ್ಧ

ವಿಚಾರಣೆಯಲ್ಲಿ ಅರ್ಜಿದಾರರನು ಭೂಮಾಲೀಕನಂದು ಸಹಾಯಕ ಆಯುಕ್ತರು ಘೋಷಣೆ ಆದೇಶ ಮಾಡಿದ ತರುವಾಯ, ತಹಶೀಲ್ದಾರ್ ಅರ್ಹವಿರುವ ಭೂಮಾಲೀಕರ ಪಟ್ಟಿಯನ್ನು ಸಿದ್ಧಪಡಿಸಬೇಕು. ಅರ್ಜಿದಾರರಿಗೆ ಕರ್ನಾಟಕ ಭೂಸುಧಾರಣಾ ಕಾಯ್ದೆ ಕಲಂ 47ರ ಉಪ ಪ್ರಕರಣ (1) ಮತ್ತು (2) ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಮೊತ್ತವನ್ನು ನಿರ್ಧರಿಸಬೇಕು. ಅರ್ಜಿದಾರರಿಗೆ ಮಂಜೂರು ಮಾಡುತ್ತಿರುವ ಜಾಗದ ಜೊತೆಗೆ ಸಮುದಾಯದ ಜನರು ಬಳಸುತ್ತಿರುವ ರಸ್ತೆ, ಕಿರುದಾರಿ, ಪಥ, ಬೀದಿ, ಶಾಲೆ, ದೇವಾಲಯ, ಆರೋಗ್ಯ ಚಿಕಿತ್ಸಾಲಯ, ಕೊಳವೆ ಬಾವಿ, ತೆರೆದಬಾವಿ, ಮೈದಾನ, ತಿಪ್ಪಗಳ ವಿಸ್ತೀರ್ಣಕ್ಕೆ ವಾಸಸ್ಥಳದಲ್ಲಿ ವಾಸಿಸುವ ಕೃಷಿ ಕಾರ್ಮಿಕನು ಮಂಜೂರಾದ ಭೂಮಿಗೆ ಅನುಪಾತದಲ್ಲಿ ಮೊತ್ತವನ್ನು ಸಹ ಸರ್ಕಾರಕ್ಕೆ ಪಾವತಿಸಬೇಕು.

ತಹಶೀಲ್ದಾರ್ ಮೇಲೆ ತಿಳಿಸಿರುವ ಮಂಜೂರಿ ಜಾಗದ ಮತ್ತು ಸಮುದಾಯ ಬಳಸುತ್ತಿರುವ ಜಾಗಗಳ ಮೊತ್ತವನ್ನು ಅರ್ಜಿದಾರರಿಂದ ಸಂಗ್ರಹಿಸಿ ಸರ್ಕಾರದ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು. ತಯಾರಿಸಲಾದ ಪಟ್ಟಿಯನ್ನು ತಹಶೀಲ್ದಾರ್ ಅಧಿಕೃತ (ನಮೂನೆ 2-ಜೆ) ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಹೊರಡಿಸಬೇಕು. ಸದರಿ ಅಧಿಸೂಚನೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಮತ್ತು ಅಂತಹ ಅಧಿಸೂಚನೆ ಪ್ರತಿಯನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡಬೇಕು. ಅಂತಹ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ 7 ದಿನಗಳ ನಂತರ ಕೃಷಿ ಕಾರ್ಮಿಕರು ವಾಸಿಸುವ ಮನ ಮತ್ತು ಜೊತೆಗೆ ಹೊಂದಿಕೊಂಡ ಭೂಮಿಯ ಮಾಲೀಕರಾಗಿ ನೋಂದಾಯಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಮನೆಯ ಮಾಲೀಕರಾಗಿ ಘೋಷಣೆ

ಮನೆಯ ಮಾಲೀಕರಾಗಿ ಘೋಷಣೆ

ತಹಶೀಲ್ದಾರ್ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವ ವಿವರಗಳನ್ನು ಸ್ಥಳ ಪರಿಶೀಲನೆ ನಡೆಸಿ, ಸರ್ವೆ ನಂಬರ್, ವಿಸ್ತೀರ್ಣ ಮತ್ತು ಗಡಿಗಳನ್ನು ನಿರ್ದಿಷ್ಟಪಡಿಸಿ, ಪಟ್ಟಿ ಮಾಡಬೇಕು. ಅರ್ಜಿದಾರರು ವಾಸದ ಮನೆಯ ವಿಷಯದಲ್ಲಿ ಉಪಸಹಾಯಕವಾಗಿ ಸೇರಿರುವ ಭೂಮಿಯನ್ನು ಒಳಗೊಂಡಂತೆ ವಾಸಿಸುವ ಮನೆಯ ಮಾಲೀಕರಾಗಿ ನೋಂದಾಯಿಸಲು ಸಲ್ಲಿಸಿದ ಅರ್ಜಿಯನ್ನು ಮನೆಯ ಮಾಲೀಕರಾಗಿ ಘೋಷಿಸಲು ಸಹಾಯಕ ಆಯುಕ್ತರು ವಿಚಾರಣೆ ನಡೆಸಬೇಕು.

ವಿಚಾರಣೆ ನಡೆಸಲು ವೈಯುಕ್ತಿಕವಾಗಿ (ನಮೂನೆ 2-ಐ ರಲ್ಲಿ) ಮತ್ತು ಸಾರ್ವಜನಿಕವಾಗಿ ಸೂಚನೆ/ನೋಟೀಸ್ (ನಮೂನೆ 2-ಹೆಚ್ ರಲ್ಲಿ) ಹೂರಡಿಸಬೇಕು. ಸದರಿ ಸೂಚನೆ/ ನೋಟೀಸ್‌ನಲ್ಲಿ ಸಹಾಯಕ ಆಯುಕ್ತರು, ಅರ್ಜಿದಾರರು ಹಾಜರಾಗಬೇಕಾದ ದಿನಾಂಕ, ಸಮಯ, ನ್ಯಾಯಾಲಯದ ಆವರಣ ಮತ್ತು ಇತ್ಯಾದಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ವೈಯುಕ್ತಿಕ ನೋಟೀಸ್ ಮತ್ತು ಸಾರ್ವಜನಿಕ ನೋಟೀಸನ್ನು ಏಕಕಾಲದಲ್ಲಿ ನೀಡಬೇಕು. ವೈಯುಕ್ತಿಕ ನೋಟೀಸ್‌ನ್ನು ಅರ್ಜಿದಾರರಿಗೆ ಮತ್ತು ಭೂಮಾಲೀಕರಿಗೆ(ಎದುರುದಾರರು) ಕಡ್ಡಾಯವಾಗಿ ಜಾರಿಮಾಡಬೇಕು.

ಸಾರ್ವಜನಿಕ ನೋಟಿಸ್‌ ನಮೂದು

ಸಾರ್ವಜನಿಕ ನೋಟಿಸ್‌ ನಮೂದು

ತಹಶೀಲ್ದಾರ್ ವಿಚಾರಣೆಯ ದಿನಾಂಕ, ಸಮಯ, ನ್ಯಾಯಾಲಯದ ಆವರಣ ಮತ್ತು ಇತ್ಯಾದಿ ವಿವರಗಳನ್ನು ಸಹಾಯಕ ಆಯುಕ್ತರಿಂದ ಪಡೆದು ವೈಯುಕ್ತಿಕ ಮತ್ತು ಸಾರ್ವಜನಿಕ ನೋಟೀಸ್ ಗಳಲ್ಲಿ ನಮೂದಿಸಿ, ತಹಶೀಲ್ದಾರ್ ರವರು ನೋಟೀಸ್‌ಗೆ ಸಹಿ ಮಾಡಿ, ನೋಟೀಸ್‌ನ್ನು ಜಾರಿಗೊಳಿಸಬೇಕು. ವಾಸಿಸುವ ಮನೆಯ ಮತ್ತು ಜಮೀನು ಇರುವ ಗ್ರಾಮದ ಚಾವಡಿ, ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ತಹಶೀಲ್ದಾರ್ ಕಛೇರಿಗಳಲ್ಲಿ 30 ದಿನಗಳಿಗಿಂತ ಕಡಿಮೆ ಇಲ್ಲದ ಅವಧಿಯಲ್ಲಿ ಪ್ರಕಟಿಸಬೇಕು. ವಿಚಾರಣೆಯನ್ನು ಸಹಾಯಕ ಆಯುಕ್ತರೇ ಕಡ್ಡಾಯವಾಗಿ ನಡೆಸಬೇಕು. ಸಹಾಯಕ ಆಯುಕ್ತರು, ಕರ್ನಾಟಕ ಭೂಸುಧಾರಣಾ ಕಾಯ್ದೆ ರೀತ್ಯಾ ವಿಚಾರಣೆಯನ್ನು ನಡೆಸಿ ಅರ್ಹವಿರುವ ವ್ಯಕ್ತಿಯನ್ನು ಮನೆಯ ಮತ್ತು ಅದಕ್ಕೆ ಸೇರಿದ ಭೂಮಿಗೆ ಮಾಲೀಕರಾಗಿ ನೋಂದಾಯಿಸಲು ಅರ್ಹವಿರುವ ವ್ಯಕ್ತಿಗೆ ಜಿಲ್ಲಾಧಿಕಾರಿಗಳ ಆದೇಶದ ತರುವಾಯ ಪಹಣಿ ಪತ್ರಿಕೆಯಲ್ಲಿ 2-ಇ ಅಧಿಸೂಚನೆಯನ್ನು ಮ್ಯುಟೇಷನ್ ಮುಖಾಂತರ ಖಾಸಗಿ ಜಮೀನನ್ನು ಸರ್ಕಾರಕ್ಕೆ ನಿಹಿತಗೊಳಿಸಬೇಕು. 2-ಇ ಅಧಿಸೂಚನೆಯಲ್ಲಿ ಹೊರಡಿಸಿರುವ ವಿಸ್ತೀರ್ಣಕ್ಕೆ ಮಾತ್ರವೇ ಪಹಣಿಯಲ್ಲಿ ಇಂಡೀಕರಿಸಬೇಕು.

ಇಂಡೀಕರಣವಾದ ನಂತರ ಖಾಸಗಿ ಜಾಗದಲ್ಲಿ ನೆಲಸಿರುವ ನಿವಾಸಿಗಳು ಸಹಾಯಕ ಆಯುಕ್ತರು/ ತಹಶೀಲ್ದಾರ್‌ಗೆ ಮನೆಯ ಮತ್ತು ಅದಕ್ಕೆ ಸೇರಿದ ಭೂಮಿಗೆ ಮಾಲೀಕರಾಗಿ ನೋಂದಾಯಿಸಲು ಅರ್ಜಿ ಸಲ್ಲಿಸಬಹುದು. ಕೃಷಿ ಕಾರ್ಮಿಕನು ಮಾಲೀಕತ್ವವನ್ನು ನೋಂದಾಯಿಸಿಕೊಳ್ಳುವುದಕ್ಕೆ ಅರ್ಜಿಯನ್ನು ಜಿಲ್ಲಾಧಿಕಾರಿಗಳು ನಮೂನೆ-2 ಅಧಿಸೂಚನೆ ಹೊರಡಿಸಿದ 1 ವರ್ಷದ ಒಳಗೆ ಸಹಾಯಕ ಆಯುಕ್ತರು/ ತಹಶೀಲ್ದಾರ್ ಕಛೇರಿಗೆ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳಿಂದ ನಮೂನೆ 2-ಇ ಅಧಿಸೂಚನೆ ಹೊರಡಿಸಿ, ಖಾಸಗಿ ಜಮೀನನ್ನು ಸರ್ಕಾರಕ್ಕೆ ನಿಹಿತಗೊಳಿಸಿದ ತಕ್ಷಣವೇ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು ಖಾಸಗಿ ಜಮೀನಿನಲ್ಲಿ ನೆಲೆಸಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

English summary
Good news from Karnataka revenue department in the issue of private land convert undocumented villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X