ನವೆಂಬರ್ 03ರಂದು ಕಾಯಿಲೆ ಬಿದ್ದರೆ ಕಷ್ಟ ಕಷ್ಟ!

Posted By:
Subscribe to Oneindia Kannada
ನವೆಂಬರ್ 3ರಂದು ವೈದ್ಯರ ಮುಷ್ಕರ | ಖಾಸಗಿ ಆಸ್ಪತ್ರೆಗಳು ಬಂದ್ | Oneindia Kannnada

ಬೆಂಗಳೂರು, ನವೆಂಬರ್ 02: ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ ಮೆಂಟ್ ಮಸೂದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಹೊರಟಿರುವುದಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಡೆಯನ್ನು ವಿರೋಧಿಸಿ ನವೆಂಬರ್ 3 ರಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿವೆ.

ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಈ ನೂತನ ಮಸೂದೆ ಮಂಡಿಸಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನವೆಂಬರ್ 3 ರಂದು ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಾಘವೇಂದ್ರ ಭಟ್ ತಿಳಿಸಿದ್ದಾರೆ.

ನವೆಂಬರ್ 3 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು ನವೆಂಬರ್ 3 ರ ಮುಂಜಾನೆ 6 ಗಂಟೆಯಿಂದ ಮರುದಿನ ನವೆಂಬರ್ 4 ರ ಮುಂಜಾನೆ 6 ರವರೆಗೆ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿವೆ. ಖಾಸಗಿ ಆಸ್ಪತ್ರೆಗಳ ಈ ಪ್ರತಿಭಟನೆಗೆ ಔಷಧಿ ಅಂಗಡಿಗಳು ಸಾತ್ ನೀಡುವ ಭರವಸೆ ನೀಡಿವೆ ಎಂದು ಹೇಳಲಾಗಿದೆ.

Private clinics and hospitals will be closed on November 3.

ಈ ಮಸೂದೆ ಮಂಡನೆಯಲ್ಲಿ ಖಾಸಗಿ ವೈದ್ಯಕೀಯ ರಂಗದ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ. ವೈದ್ಯರು ಭಯದ ನೆರಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣ ವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ನೂತನ ಕೆಪಿಎಂಇ ಕಾಯ್ದೆಯಲ್ಲಿ ವೈದ್ಯರಿಗೆ ಹಲವಾರು ಕಟ್ಟುಪಾಡುಗಳನ್ನು ವಿಧಿಸಲಾಗಿದ್ದು ಇದರಿಂದ ವೈದ್ಯರು ವೈದ್ಯಕೀಯ ವೃತ್ತಿ ಮಾಡಲು ಅಸಾಧ್ಯ ಸ್ಥಿತಿ ಇದೆ ಎಂದು ಅಭಿಪ್ರಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಈ ಮಸೂದೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ.

ಐಎಂಎ ರಾಜ್ಯ ಘಟಕದ ಪದಾಧಿಕಾರಿಗಳು ನಾಳೆ ನವೆಂಬರ್ 2 ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಈ ನೂತನ ಮಸೂದೆಯನ್ನು ಮಂಡಿಸುವುದಿಲ್ಲ ಎಂದು ಭರವಸೆ ನೀಡಿದ್ದಲ್ಲಿ ಮುಷ್ಕರ ಹಿಂಪಡೆಯಲಾಗುವುದು. ಇಲ್ಲವಾದರೆ ನವೆಂಬರ್ 3 ರಂದು ವೈದ್ಯಕೀಯ ಸೇವೆ ಸ್ಥಗಿತ ಖಂಡಿತ ಎಂದು ಐಎಂಎ ಎಚ್ಚರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Unit of India Medical Association (IMA) has called for a voluntary Bandh of all private hospitals and private clinics on November 3 against implementation of Karnataka Private Medical Establishments (Amendment) Bill, 2017.
Please Wait while comments are loading...