ರಾಜಕಾರಣದಲ್ಲಿ ಅಣ್ಣ-ತಮ್ಮ ಆಗಲು ಆಗಲ್ಲ : ಎಚ್.ಡಿ.ಕೆಗೆ ತಿರುಗೇಟು ನೀಡಿದ ಪ್ರೀತಂಗೌಡ
ಬೆಂಗಳೂರು, ಫೆಬ್ರವರಿ 13: ರಾಜಕಾರಣದಲ್ಲಿ ಅಣ್ಣ-ತಮ್ಮ ಆಗಲು ಆಗಲ್ಲ, ಅವರ ತಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡಿರುತ್ತಾರೆ, ಅವರ ತಮ್ಮನ ಹತ್ತಿರವೇ ಮಾತನಾಡಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದರು.
ಈ ಕುರಿತು ಪ್ರೀತಂ ಗೌಡ ಮಾತನಾಡಿ, ನಮ್ಮ ನಾಯಕರು ಏನು ಹೇಳ್ತಾರೆ, ಮಾರ್ಗದರ್ಶನ ಕೊಡ್ತಾರೆ ಆ ಕೆಲಸ ಮಾಡುತ್ತೇನೆ. ಬಿರುಸಿನಿಂದ ಮಾತನಾಡ್ತಾರೆ, ಯುವಕ ಅಂತಾರೆ, ಯುವಕ ಆಗಿರುವುದಕ್ಕೆ 78 ಸಾವಿರ ಮತ ಹಾಕಿರೋದು. ಎಂಪಿ ಚುನಾವಣೆ ಆದ್ಮೇಲೆ ಬೂತ್ ತೆಗೆದು ನೋಡಿದ್ರೆ ಯಾರ್ಯಾರು ಶಕ್ತಿ ಏನು ಅನ್ನೋದು ಈಗೀರುವ ಶಾಸಕರಿಗೂ ಗೊತ್ತಾಗುತ್ತದೆ

ನನ್ನ ವಿರುದ್ಧ ಬಂದು ಚುನಾವಣೆ ಮಾಡಿದವರಿಗೂ ನನ್ನ ನೈಜ ಶಕ್ತಿ ಏನು ಅನ್ನೋದು ಗೊತ್ತಾಗುತ್ತದೆ. ನಾನು ಬೇರೆಯವರ ತರ ಒಂದ್ಸಲ ಒಂದು, ಇನ್ನೊಂದು ಸಲ ಇನ್ನೊಂದು ಮಾತನಾಡಲ್ಲ, ನಾನು ಯುವಕನಾಗಿ ಹುಮ್ಮಸ್ಸಿನಿಂದ, ಬಿರುಸಿನಿಂದ ಮಾತನಾಡಿದ್ರು ಅದರಲ್ಲಿ ಬದ್ಧತೆ ಇರುತ್ತದೆ. ಬದ್ದತೆ ಇದ್ದರೆ ಮಾತ್ರ ಮಾತನಾಡುತ್ತೇನೆ. ನಮ್ಮ ಪಕ್ಷ ಗೆಲ್ಲಬೇಕು, ನಮ್ಮ ಪಕ್ಷ ಗಟ್ಟಿಯಾಗಬೇಕು ಅಷ್ಟೇ ಎಂದು ಹೇಳಿದರು.
ನಾನೇನು ಮಾಡಬೇಕೆಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಅದುನ್ನ ಬೇರೆ ಪಕ್ಷದವರು ಹೇಳವಂತದ್ದೇನು ಪ್ರಸ್ತುತ ಅಲ್ಲ, ನಮ್ಮ ಪಕ್ಷದವರು ತೀರ್ಮಾನ ಮಾಡ್ತಾರೆ, 2023 ರಲ್ಲಿ ಉತ್ಸಾಹದಲ್ಲಿ ಪ್ರೀತಂಗೌಡರನ್ನು ಸೋಲಿಸಿ ಅಂತ ಹೇಳಿದಾಗಲೂ ಹಾಸನದ ಜನ 78 ಸಾವಿರ ಓಟು ಹಾಕಿದ್ದಾರೆ. 78 ಸಾವಿರ ಮತಗಳು ಪ್ರೀತಂಗೌಡ ಪರವಾಗಿ, ಅವರ ವಿರುದ್ಧವಾಗಿ ಬಿದ್ದಿರುವ ಮತಗಳು ಅನ್ನೋದನ್ನ ಅವರ ಮನಸ್ಸಿನಲ್ಲಿ ಇಟ್ಟುಕೊಳ್ಳಲಿ.

84 ಸಾವಿರ ಮತಗಳನ್ನು ಅವರ ಅಭ್ಯರ್ಥಿ ತಗೊಂಡಿದ್ದಾರೆ ಆ ಬೂತ್‌ಗಳ ಪಟ್ಟಿಯನ್ನು ಇಟ್ಟುಕೊಂಡಿರಲು ಹೇಳಿ. ಆ 84 ಸಾವಿರದಲ್ಲಿ ಈಗ 44 ಸಾವಿರ ಎಲ್ಲಿ ಹೋಗಿ ಕುಳಿತುಕೊಂಡಿದೆ ಅನ್ನೋದನ್ನ ನೋಡಿದರೆ ಪ್ರೀತಂಗೌಡನ ಶಕ್ತಿ ಏನು? ಅವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಏನು ಗೆಲ್ಲಿಸಿಕೊಂಡಿದ್ದಾರೆ ಅವರ ಶಕ್ತಿ ಏನು ಎಂದು ಅರ್ಥವಾಗಿ ಬಿಡುತ್ತದೆ. ಉಳಿದಿದ್ದನ್ನು ನಮ್ಮ ಪಕ್ಷದ ಹಿರಿಯರು ಮಾತನಾಡುತ್ತಾರೆ. ಅವರ ಪಕ್ಷದ ಅಭ್ಯರ್ಥಿ ಗೆದ್ದಿರೋದು, ಅವರ ಗೆಲ್ಲಲ್ಲಿ ಅಂತ ಓಟು ಹಾಕಿಲ್ಲ. ಬಿಜೆಪಿ ಸೋಲುಬೇಕು ಅಂಥ ಬೇರೆ ಯಾರೋ ಮನಸ್ಸು ಮಾಡಿ ಓಟು ಹಾಕಿದ್ರಲ್ಲಿ ಗೆದ್ದಿರುವಂತಹದ್ದು. ನನಗೆ ಬಂದಿರುವ ಮತಗಳು ಪ್ರೀತಂಗೌಡ ಗೆಲ್ಲಸಿಬೇಕು ಅಂತ ಬಂದಿರುವ ಮತಗಳು. ಅವರು ಸೋಲಿಸಿ ಅಂದಾಗಲೂ ಬಂದಿರುವ ಮತಗಳು ಎಂದು ಹೇಳಿದರು.
ನಾನು ಉತ್ಸಾಹದಲ್ಲಿ ಮಾತನಾಡಲ್ಲ, ನನ್ನ ಕೆಲಸ ಮಾತನಾಡುತ್ತನೆ. ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಅವರು ಮೂರ್ನಾಲ್ಕು ಸಾರಿ ಬಂದು ಸೋಲಿಸಿ ಅಂತ ಹೇಳಿದಾಗಲೂ 78 ಸಾವಿರ ಓಟು ಹಾಕಿದ್ದಾರೆ, ಹಾಸನದಲ್ಲಿ ಪ್ರೀತಂಗೌಡ ಶಕ್ತಿ ಏನು ಅನ್ನೋದು ಅವರಿಗೆ ಅರ್ಥ ಆಗಿರುತ್ತದೆ. ನನ್ನ ಜೊತೆ ಕುಳಿತು ಮಾತನಾಡುವ ಬದಲು ಅವರು ಶಾಸಕರ ಜೊತೆ ಕುಳಿತು ಮಾತನಾಡುವುದು ಒಳ್ಳೆಯದು,84 ಸಾವಿರ ಈಗ ಎಷ್ಟು ಸಾವಿರ ಆಗಿದೆ ಅನ್ನೋದನ್ನ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. 2023 ಸೋಲಿಸಿ ಅಂದಿದ್ದಾರೆ, ಈಗ ತಮ್ಮ ಅಂತಿದ್ದಾರೆ, 2028 ರಲ್ಲಿ ಏನು ಅಂತಾರೆ ಗೊತ್ತಿಲ್ಲ ಎಂದು ಪ್ರೀತಂ ಗೌಡ ಹೇಳಿದರು.












Click it and Unblock the Notifications