ಬಯಲಾಯ್ತು ಹುಬ್ಬಳ್ಳಿ ಪ್ರಿನ್ಸಿಪಾಲರ ವಿಕೃತ ಕಾಮುಕತನ

ಹುಬ್ಬಳ್ಳಿ, ಸೆಪ್ಟೆಂಬರ್, 08 : ನಮ್ಮ ಇತಿಹಾಸದ ದಿನಗಳನ್ನು ಮೆಲುಕು ಹಾಕಿದಾಗ ಗುರುಗಳು ಅವರವರ ಜ್ಞಾನ, ಶಿಸ್ತು, ಪಾಂಡಿತ್ಯದಿಂದ ಗುರುವಿನ ಸ್ಥಾನವನ್ನು ಉನ್ನತ ಮಟ್ಟದಲ್ಲಿರಿಸಿದ್ದರು. ಆದರೆ ಇಂದಿನ ಗುರುಗಳು ಅವರ ಕಾಮುಕತನದಿಂದ ಗುರುವಿನ ಸ್ಥಾನಕ್ಕೆ ಕಪ್ಪುಮಸಿ ಹಚ್ಚುತ್ತಿದ್ದಾರೆ.

ಹೌದು..ಇಂತಹದೊಂದು ಘಟನೆ ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲ್ ರಿಂದ ಘಟಿಸಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರ ಮೇಲೆ ಆರೋಪ ಹೊರಿಸಲಾಗಿದೆ. ಇವರ ವಿರುದ್ಧ ವಿದ್ಯಾರ್ಥಿಗಳೇ ತಿರುಗಿ ಬಿದ್ದಿದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇವರ ಕಾರನ್ನು ಜಖಂಗೊಳಿಸಿ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.[ಕಾಮುಕರಿಗೆ ರಕ್ತ ಬರುವಂತೆ ಬಡಿದ ಹದಿನಾರರ ಹುಡುಗಿ]

Principal sexual assault on college students in Hubballi

ಏನಿದು ಘಟನೆ?

ಕಾಲೇಜಿನ ಪ್ರಿನ್ಸಿಪಾಲ್ ಆನಂದ್ ವಡ್ಡಿನ್ ಎಂಬುವರು ದಿನಾಂಕ 4 ರ ಶುಕ್ರವಾರದಿಂದ ಭಾನುವಾರ 6ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ಕಾಲೇಜು ವಿದ್ಯಾರ್ಥಿಗಳನ್ನು ಕೈಗಾರಿಕಾ ಪ್ರವಾಸದ ನಿಮಿತ್ತ ಗೋವಾಕ್ಕೆ ಕರೆದುಕೊಂಡು ಹೋಗಿದ್ದರು.

ಅಂತಹ ಸಂದರ್ಭದಲ್ಲಿ ಮಧ್ಯ ಸೇವಿಸಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಪ್ರಿನ್ಸಿಪಾಲರಿಗೆ ಹೊಡೆದು, ಇವರ ಕುರಿತಾಗಿ ವಿಡಿಯೋ ಬಿಡುಗಡೆ ಮಾಡಿ ಇವರ ಕಾಮುಕತನವನ್ನು ಬಿಚ್ಚಿಟ್ಟಿದ್ದಾರೆ.

ಈ ಪ್ರಕರಣದ ಕುರಿತಾಗಿ ಪ್ರಿನ್ಸಿಪಾಲ್ ಆನಂದ್ ಹಾಗೂ ಸಹ ಪ್ರಾಧ್ಯಾಪಕರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 ಮತ್ತು 506 ರ ಅಡಿಯಲ್ಲಿ ಕೇಸು ದಾಖಲಾಗಿದ್ದು, ಈತನ ಕುರಿತಾಗಿ ಪೊಲೀಸರು ಇನ್ನಷ್ಟು ತನಿಖೆ ಚುರುಕುಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+