ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ರಿಂದ 5ನೇ ತರಗತಿ ಶಾಲೆ ಓಪನ್; ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21; ಕರ್ನಾಟಕ ಸರ್ಕಾರ ಕೋವಿಡ್ ಪರಿಸ್ಥಿತಿ ಸುಧಾರಣೆಗೊಂಡ ಹಿನ್ನಲೆಯಲ್ಲಿ 1 ರಿಂದ 5ನೇ ತರಗತಿ ಶಾಲೆಗಳನ್ನು ಆರಂಭಿಸಲು ಒಪ್ಪಿಗೆ ನೀಡಿದೆ. ಈ ಕುರಿತು ಸುತ್ತೋಲೆ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಆಯುಕ್ತರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಗುರುವಾರ ಶಾಲೆಗಳ ಆರಂಭ ಕುರಿತು ಆದೇಶ ಹೊರಡಿಸಿದೆ. 25/10/2021 ರಿಂದ 30/10/2021ರವರೆಗೆ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 5ನೇ ತರಗತಿ ವರೆಗೆ ಅರ್ಧ ದಿನ ಭೌತಿಕ ತರಗತಿಗಳನ್ನು ನಡೆಸಲು ತಿಳಿಸಲಾಗಿದೆ.

ಚೀನಾದಲ್ಲಿ ಮತ್ತೆ ಬಂತು ಕೋವಿಡ್; ವಿಮಾನ, ಶಾಲೆ ಬಂದ್ ಚೀನಾದಲ್ಲಿ ಮತ್ತೆ ಬಂತು ಕೋವಿಡ್; ವಿಮಾನ, ಶಾಲೆ ಬಂದ್

2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರು ಮತ್ತು ಇಲಾಖೆಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು.

 ದಸರಾ ಮುಗಿದ ನಂತರ ಶಾಲೆ ಜೊತೆಗೆ ಬಿಸಿಯೂಟನೂ ಆರಂಭ: ಶಿಕ್ಷಣ ಸಚಿವ ದಸರಾ ಮುಗಿದ ನಂತರ ಶಾಲೆ ಜೊತೆಗೆ ಬಿಸಿಯೂಟನೂ ಆರಂಭ: ಶಿಕ್ಷಣ ಸಚಿವ

ರಾಜ್ಯದಲ್ಲಿ 23/8/2021ರಿಂದ ಕೋವಿಡ್ ಸೋಂಕಿನ ಪ್ರಮಾಣ ಶೇ 2%ಕ್ಕಿಂತ ಕಡಿಮೆ ಇರುವ ತಾಲ್ಲೂಕು/ ವಲಯಗಳಲ್ಲಿ (ಕೇರಳ ರಾಜ್ಯದೊಡನೆ ಗಡಿ ಹಂಚಿಕೊಂಡಿರುವ ತಾಲ್ಲೂಕುಗಳನ್ನು ಹೊರತುಪಡಿಸಿ) 9 ಮತ್ತು 10ನೇ ತರಗತಿಗಳನ್ನು ಆರಂಭಿಸಲಾಗಿತ್ತು.

 Primary Classes At Karnataka Set To Reopen Time Table And Guidelines

ದಿನಾಂಕ 6/9/2021ರಿಂದ 6 ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಿ, ನಂತರದ ದಿನಗಳಲ್ಲಿ 4/10/2021ರಿಂದ 6 ರಿಂದ 10ನೇ ತರಗತಿಯವರೆಗೆ ದೈನಂದಿನ ಪೂರ್ಣ ಅವಧಿ ಪೂರ್ಣ ಪ್ರಮಾಣದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ತರಗತಿಗಳನ್ನು ಭೌತಿಕವಾಗಿ ಪ್ರಾರಂಭಿಸಲಾಗಿತ್ತು.

ಕೋವಿಡ್ ಮಾರ್ಗಸೂಚಿ ಬದಲಾವಣೆ; ಸುಳಿವು ಕೊಟ್ಟ ಮುಖ್ಯಮಂತ್ರಿಗಳು ಕೋವಿಡ್ ಮಾರ್ಗಸೂಚಿ ಬದಲಾವಣೆ; ಸುಳಿವು ಕೊಟ್ಟ ಮುಖ್ಯಮಂತ್ರಿಗಳು

ಪ್ರಸ್ತುತ, ಸರ್ಕಾರಿ ಮತ್ತು ಅನುದಾನಿತ ಶಾಲೆಗೆ ಹಾಜರಾಗುವ 6 ರಿಂದ 10 ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ದೈನಂದಿನ ಪೂರ್ಣಾವಧಿ ನಡೆಯುವುದರಿಂದ 21/10/2021ರಿಂದ ಮಧ್ಯಾಹ್ನದ ಉಪಹಾರದ ವ್ಯವಸ್ಥೆಯನ್ನು ಶಾಲೆಗಳಲ್ಲಿಯೇ ಮಧ್ಯಾಹ್ನ ಉಪಹಾರ ಯೋಜನೆಯಡಿ ನೀಡಲಾಗುತ್ತಿದೆ.

ಅನುದಾನರಹಿತ ಶಾಲೆಗಳಲ್ಲಿನ ಮಕ್ಕಳು ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು/ ಊಟವನ್ನು ತರುವಂತೆ ಸೂಚಿಸಲಾಗಿದೆ. ಈಗ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿನ 1 ರಿಂದ 5ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು, ಅದರಂತೆ ಸಂಬಂಧಿಸಿದ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

 Primary Classes At Karnataka Set To Reopen Time Table And Guidelines

ಅಕ್ಟೋಬರ್ 25ರಿಂದ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ಅರ್ಧ ದಿನ ಭೌತಿಕ ತರಗತಿಗಳನ್ನು ನಡೆಸಲು ಹಾಗೂ 2/11/2021ರಿಂದ ಪೂರ್ಣ ಪ್ರಮಾಣದಲ್ಲಿ ದೈನಂದಿನ ಪೂರ್ಣ ಅವಧಿಗೆ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ 1 ರಿಂದ 5ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಶಾಲೆಗೆ ಭೌತಿಕವಾಗಿ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕಿದೆ.

ಶಾಲೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಮಕ್ಕಳಿಗೆ ಪೋಷಕರ ಮೂಲಕ ಮಾಹಿತಿ ನೀಡುಬೇಕು. ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಮತ್ತು 50 ವರ್ಷ ಮೇಲ್ಪಟ್ಟ ಶಿಕ್ಷಕರು ಹೆಚ್ಚುವರಿಯಾಗಿ ಫೇಸ್ ಶೀಲ್ಡ್ (ಮುಖ ಕವಚ) ಧರಿಸುವುದು ಕಡ್ಡಾಯ.

ಅರ್ಧದಿನ ತರಗತಿಗಳು; 1 ರಿಂದ 5ನೇ ತರಗತಿಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಪ್ರಸ್ತುತ 25/10/2021 ರಿಂದ 30/10/2021ರವರೆಗೆ ಅರ್ಧ ದಿನ ಮಾತ್ರ ಶಾಲೆ ನಡೆಯುವುದರಿಂದ, ಮಧ್ಯಾಹ್ನ ಉಪಹಾರದ ವ್ಯವಸ್ಥೆಯನ್ನು ಮಧ್ಯಾಹ್ನ ಉಪಹಾರ ಯೋಜನೆಯಡಿ ಅನುಷ್ಠಾನಗೊಳಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

2/11/2021ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಯು ಪ್ರಾರಂಭವಾಗುವುದರಿಂದ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಉಳಿದಂತೆ, ಅನುದಾನರಹಿತ ಶಾಲೆಗಳಲ್ಲಿನ ಮಕ್ಕಳು ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು/ ಊಟವನ್ನು ತರುವಂತೆ ಸೂಚಿಸಲಾಗಿದೆ. ಅವಶ್ಯಕತೆ ಅನುಸಾರ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ದ ಬಿಸಿ ನೀರಿನ ವ್ಯವಸ್ಥೆ ಮಾಡುವುದು. ಪ್ರಾಥಮಿಕ ಶಾಲೆಗಳಲ್ಲಿನ 1 ರಿಂದ 5 ನೇ ತರಗತಿಗಳು ಕಳೆದ ಒಂದೂವರೆ ವರ್ಷದಿಂದ ಭೌತಿಕವಾಗಿ ನಡೆಯದೇ ಇರುವುದರಿಂದ, ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಿರುತ್ತದೆ.

ಪ್ರಯುಕ್ತ ಮಕ್ಕಳಿಗೆ ಸೇತುಬಂಧ ಶಿಕ್ಷಣದಂತಹ ಬೋಧನಾ ಪದ್ಧತಿಯಿಂದ ಪ್ರಾರಂಭಿಸಿ ಪ್ರಸಕ್ತ ಸಾಲಿನ ಕಲಿಕೆಗೆ ಅಣಿಗೊಳಿಸುವುದು. ಮಕ್ಕಳ ಭೌತಿಕ ಹಾಜರಾತಿಯನ್ನು ಪರಿಗಣಿಸಿ ಮತ್ತು ತರಗತಿ ಕೊಠಡಿಯ ಅಳತೆಯನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ 20 ಮಕ್ಕಳ ತಂಡವನ್ನು ಅಥವಾ ಒಟ್ಟು ಹಾಜರಾದ ಮಕ್ಕಳಲ್ಲಿ ಶೇಕಡಾ 50ರಷ್ಟು ಮಕ್ಕಳಿಗೆ ತರಗತಿ ಕೊಠಡಿಯಲ್ಲಿ ಆಸನದ ವ್ಯವಸ್ಥೆ ಮಾಡಬೇಕು.

ಅಂದರೆ ಸಣ್ಣ ಗುಂಪುಗಳನ್ನಾಗಿಸಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದರೊಂದಿಗೆ ಭೌತಿಕ ಅಂತರವನ್ನು ಕಾಯ್ದುಕೊಳ್ಳುವುದು. ಶಾಲೆಯ ಪ್ರವೇಶ ದ್ವಾರದಲ್ಲಿ ಕೋವಿಡ್-19ರ ಲಕ್ಷಣಗಳ ಕುರಿತು ತಪಾಸಣೆ ಮಾಡುವುದು. ಈ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೆ ಕೆಮ್ಮು, ಜ್ವರ, ನೆಗಡಿ, ಮೂಗು ಸೋರುವುದು ಇತ್ಯಾದಿ ಲಕ್ಷಣಗಳಿದ್ದಲ್ಲಿ ಅವರನ್ನು ಐಸೋಲೇಷನ್ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಇರಿಸಿ ಅವರ ಪಾಲಕರನ್ನು ಸಂಪರ್ಕಿಸಿ ಮನೆಗೆ ಕಳುಹಿಸತಕ್ಕದ್ದು ಮತ್ತು ಅವರಿಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸುವುದು. ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ನಿಯಮಿತವಾಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಬೇಕು.

ತರಗತಿಯ ಕೊಠಡಿಗಳನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಬಳಸಿ ಸ್ವಚ್ಛಗೊಳಿಸುವುದು. ಶಿಕ್ಷಕರಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್-19ರ ಸೋಂಕಿನ ಯಾವುದೇ ಲಕ್ಷಣಗಳಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಶಾಲೆಯನ್ನು ಸ್ಯಾನಿಟೈಜ್ ಮಾಡಿ ಸ್ಥಳೀಯ ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ಕೆ.ಪಿ.ಎಸ್ ಶಾಲೆಗಳು, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಪ್ರಸ್ತುತ ಸರ್ಕಾರಿ ಆದೇಶದಲ್ಲಿ ಅವಕಾಶ ನೀಡದೇ ಇರುವುದರಿಂದ, ಸದರಿ ತರಗತಿಗಳನ್ನು ಪ್ರಾರಂಭಿಸಲು ಮುಂದಿನ ಆದೇಶದವರೆಗೆ ಕಾಯುವುದು ಕಡ್ಡಾಯವಾಗಿದೆ ಎಂದು ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ; 1 ರಿಂದ 5ನೇ ತರಗತಿ ಮಕ್ಕಳು ಶಾಲೆಗೆ ಹಾಜರಾಗುವ ಹಾಗೂ ಬೋಧನಾ ಕಲಿಕಾ ಪ್ರಕ್ರಿಯೆ ಕುರಿತು ಶಾಲೆಯಲ್ಲಿ ಇರುವ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಒಟ್ಟು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಪ್ರತಿ ತಂಡಕ್ಕೆ 10 ರಿಂದ 20 ಅಥವಾ ತರಗತಿಯ ಒಟ್ಟು ಮಕ್ಕಳ ಶೇ. 50 ರಷ್ಟು ಮಕ್ಕಳ ತಂಡಗಳನ್ನು ರಚಿಸುವುದು.

ಪ್ರತಿಯೊಬ್ಬ ಶಿಕ್ಷಕರು ಒಂದು ತಂಡದ ಮಕ್ಕಳಿಗೆ ಪ್ರತಿ ಅವಧಿಯಲ್ಲಿ ಈ ಮೇಲ್ಕಂಡಂತೆ ಬೋಧನೆ ಮಾಡುವುದು. ಈ ವೇಳಾಪಟ್ಟಿಯನ್ನು ಪ್ರಸ್ತುತ ಸಲಹಾತ್ಮಕವಾಗಿ ನೀಡಲಾಗಿದೆ. ಆಯಾ ಶಾಲೆಯಲ್ಲಿರುವ ಶಿಕ್ಷಕರ ಸಂಖ್ಯೆ, ಮಕ್ಕಳ ಸಂಖ್ಯೆ ಹಾಗೂ ಕೊಠಡಿ/ ಸ್ಥಳಾವಕಾಶವನ್ನು ಆಧರಿಸಿ ಸ್ಥಳೀಯವಾಗಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.

Recommended Video

ಕೊಹ್ಲಿ ರೋಹಿತ್ ಅಲ್ವೇ ಅಲ್ಲ, ಟೀಮ್ ಇಂಡಿಯಾದ ರಿಯಲ್ ಗೇಮ್ ಚೇಂಜರ್ಸ್ ಇವರೇ | Oneindia Kannada

ನವೆಂಬರ್ 2021ರ ಮಾಹೆಯಿಂದ ಸದರಿ 1 ರಿಂದ 5ನೇ ತರಗತಿಗಳು ದೈನಂದಿನ ಪೂರ್ಣ ಅವಧಿಗೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವುದರಿಂದ ತಮ್ಮ ದೈನಂದಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯಂತೆ ಮುಂದುವರೆಸುವುದು.

English summary
Primary classes across Karnataka set to reopen on October 25, 2021. Here are the guidelines for teachers and school management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X