ರಾಘವೇಶ್ವರ ಶ್ರೀಗಳು ನಿರ್ದೋಷಿ, ವಿಜಯೋತ್ಸವದ ಚಿತ್ರಗಳು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 31 : ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಕ್ಲೀನ್ ಚಿಟ್ ನೀಡಿದೆ. ಶ್ರೀಗಳ ವಿರುದ್ಧದ ಎಲ್ಲಾ ಆರೋಪಗಳನ್ನು ಕೋರ್ಟ್ ಕೈಬಿಟ್ಟಿದೆ.

ಅತ್ಯಾಚಾರ ಪ್ರಕರಣದಿಂದ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಶ್ರೀಗಳು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅವರ ಪೀಠ ಶ್ರೀಗಳಿಗೆ ಗುರುವಾರ ಕ್ಲೀನ್ ಚಿಟ್ ನೀಡಿದೆ. [ಬಂಧನದ ಭೀತಿಯಿಂದ ಪಾರಾದ ರಾಘವೇಶ್ವರ ಶ್ರೀಗಳು]

raghaveshwara swamiji

'ರಾಘವೇಶ್ವರ ಶ್ರೀಗಳು ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಗುರುವಾರ ತನ್ನ ಆದೇಶವನ್ನು ಪ್ರಕಟಿಸಿದೆ.ಶ್ರೀಗಳ ಮೇಲಿನ ಕೇಸನ್ನು ವಜಾ ಮಾಡಲಾಗಿದೆ' ಎಂದು ಶ್ರೀಗಳ ಪರ ವಕೀಲ ಅರುಣ್ ಶ್ಯಾಮ್ ಮಾಧ್ಯಮಗಳಿಗೆ ತಿಳಿಸಿದರು.

ಕೋರ್ಟ್ ಆದೇಶದಲ್ಲೇನಿದೆ?
* ಪ್ರೇಮಲತಾ ಅವರ ಆರೋಪಕ್ಕೂ ದೂರವಾಣಿ ಕರೆ ಪಟ್ಟಿಗೂ ಸಾಮ್ಯತೆ ಇಲ್ಲ. ಕರೆ ಪಟ್ಟಿ ಹೊಂದಾಣಿಕೆ ಆಗುತ್ತಿಲ್ಲ.
* ಅತ್ಯಾಚಾರ ನಡೆದಿರುವುದಕ್ಕೆ ಯಾವುದೇ ಸಾಕ್ಷಿಗಳು ದೊರೆತಿಲ್ಲ
* ಬಟ್ಟೆಯಲ್ಲಿದ್ದ ವೀರ್ಯದ ಕಲೆ ಡಿಎನ್‌ಎ ಪರೀಕ್ಷೆಯಲ್ಲಿ ಹೊಂದಾಣಿಕೆ ಆಗುತ್ತಿಲ್ಲ
* ಬಟ್ಟೆಯಲ್ಲಿ ಗುರುತು ಮಾಡಿದ್ದ ಕರೆ ಇದ್ದ ವೀರ್ಯದ ಹೊಂದಾಣಿಕೆ ಇಲ್ಲ

ಕೋರ್ಟ್ ಆದೇಶ ಪ್ರಕಟಗೊಂಡ ಬಳಿಕ ಗಿರಿನಗರದ ಮಠದಲ್ಲಿ ಭಕ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ

-
-
-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru session court on March 31, 2016 given a clean chit to Ramachandrapura Math Raghaveshwara BharathiSwamiji in the Singer Premalatha Divakar rape case.
Please Wait while comments are loading...