Pratap Simha: ಕಾಂಗ್ರೆಸ್ ನಿಮ್ಮಪ್ಪನನ್ನೇ ಸಿಎಂ ಮಾಡಲಿಲ್ಲ, ನೀವು ಸದನದಲ್ಲಿ 'ಪೈಲ್ಸ್ ಪ್ರಿಯಾಂಕ'
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸಾಲು ಸಾಲಾಗಿ ಪ್ರಿಯಾಂಕ್ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಂತೂ ಪ್ರಿಯಾಂಕ್ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. 'ಪ್ರಿಯಾಂಕ್ ಖರ್ಗೆ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ. ಒಂದು ದಿನವೂ ಅವರು ತಮ್ಮ ಇಲಾಖೆ ಬಗ್ಗೆ ಮಾತನಾಡಿದ್ದೇ ನೋಡಿಲ್ಲ. ತಾವು ಮಾಡಿಕೊಂಡ ಸಾಧನೆ ಬಗ್ಗೆಯೂ ಹೇಳಿಕೊಂಡಿದ್ದಿಲ್ಲ. ವರ್ಷಕ್ಕೆ ನೂರು ಬಾರಿ ಪ್ರೆಸ್‌ಮೀಟ್ ನಡೆದರೂ, ಮಾಧ್ಯಮದವರು ಸಿಕ್ಕರೂ ಬಿಜೆಪಿಯನ್ನ ಬೈಯೋದು, ಆರ್‌ಎಸ್‌ಎಸ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನ ಬಿಟ್ಟರೆ ಬೇರೆ ಏನೂ ಮಾಡಿಲ್ಲ' ಎಂದು ತಿರುಗೇಟು ನೀಡಿದ್ದಾರೆ.
'ಈ ರೋಗ, ಈ ವ್ಯಾದಿ ಪ್ರಿಯಾಂಕ ಖರ್ಗೆ, ಕಲಗಟಗಿಯ ಲಾಡು ಹಾಗೂ ಆ ಚಿಕ್ಕಬಳ್ಳಾಪುರದಲ್ಲೊಬ್ಬ ಯಾವಾಗಲೂ ಊಳಿಡುತ್ತಿರುತ್ತಾನೆ. ನಾನು ಪ್ರಿಯಾಂಕ್ ಖರ್ಗೆ ಅವರಿಗೆ ಒಂದು ಮಾತನ್ನು ಕೇಳಲು ಬಯಸುತ್ತೇನೆ. ನಿಮಗೆ ಏನಾಗಿದೆ? ನಿಮಗೆ ಐಟಿಬಿಟಿಯಂತಹ ಖಾತೆ ನೀಡಿದ್ದರೂ ನಿಮ್ಮ ಖಾತೆ ಹೊರತಾಗಿ ಬೇರೆಯದ್ದನ್ನೇ ಮಾತನಾಡುತ್ತೀರಿ. ಅಧಿವೇಶನ ನಡೆಯುವಾಗ ಸದನದಲ್ಲಿ ಪ್ರತಿಯೊಬ್ಬರು ಮಾತನಾಡಲು ಎದ್ದಾಗಲೂ ಮಧ್ಯದಲ್ಲಿ ಬಾಯಿ ಹಾಕಿ ಪೈಲ್ಸ್ ಪ್ರಿಯಾಂಕ ಆಗಿಬಿಡುತ್ತೀರಿ. ಇನ್ನು ಅಧಿವೇಶನ ಮುಗಿದ ನಂತರ ಪ್ರತಿನಿತ್ಯವೂ ಬೊಬ್ಬೆ ಹೊಡೆಯುತ್ತಾ ಕೂಗು ಮಾರಿ ಪ್ರಿಯಾಂಕ, ಕೂಗು ಮಾರಿ ಖರ್ಗೆ ಆಗ್ತೀರಿ' ಎಂದು ಲೇವಡಿ ಮಾಡಿದ್ದಾರೆ.

'ನೀವು ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀರಾ? ನೀವು ಯಾರ ಮಗಳ ಹೆಸರು ಇಟ್ಟುಕೊಂಡಿದ್ದೀರೋ ಅವರ ತಂದೆ ರಾಜೀವ್ ಗಾಂಧಿ ಕೂಡ ಈ ದೇಶವನ್ನಾಳಿದ್ರೂ ಅವರ ಕೈಯಲ್ಲೂ ಆರ್‌ಎಸ್‌ಎಸ್ ಬ್ಯಾನ್ ಮಾಡೋಕೆ ಆಗಲಿಲ್ಲ. ಆ ರಾಜೀವ್ ಗಾಂಧಿಯನ್ನ ಹೆತ್ತ ಇಂದಿರಾಗಾಂಧಿ ಅವರು ದೇಶವಾಳಿದ್ರು, ಆರ್‌ಎಸ್‌ಎಸ್ ಬ್ಯಾನ್ ಮಾಡಿ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು. ಇಂದಿರಾಗಾಂಧಿಗೆ ಜನ್ಮ ಕೊಟ್ಟಂತಹ ನೆಹರೂ ಕೂಡ ಆರ್‌ಎಸ್‌ಎಸ್ ಬ್ಯಾನ್ ಮಾಡಿ, ಅನಿವಾರ್ಯವಾಗಿ ಅದನ್ನ ವಾಪಸ್ ಪಡೆದು ಆರ್‌ಎಸ್‌ಎಸ್ ಅನ್ನೇ ಶ್ಲಾಘಿಸಿದ್ದರು'.
ನಿಮ್ಮ ಹೆಸರಲ್ಲೂ ಸಂತತಿ ಇಲ್ಲ
́́'ಇನ್ನು ನೆಹರೂ ಅವರ ಮರಿಮಗಳ ಹೆಸರನ್ನು ಇಟ್ಟುಕೊಂಡಿರುವ ನೀವೇನ್ ಸಾರ್ ಬ್ಯಾನ್ ಮಾಡ್ತೀರಾ? ನಿಮ್ಮ ಹೆಸರಲ್ಲೂ ಸಂತತಿ ಇಲ್ಲ, ಖರ್ಗೆ ಅನ್ನೋದು ಕೂಡ ನಿಮ್ಮ ತಂದೆಯವರಿಂದ ಬಂದಿರುವ ಬಳುವಳಿ. ನಿಮ್ಮದು ಅಂತ ಏನಿದೆ? ಏನು ಸಾಧನೆ ಇದೆ? ಒಳ್ಳೆಯ ವರ್ತನೆಯೂ ನಿಮ್ಮಲ್ಲಿಲ್ಲ. ಎರಡು ವರ್ಷಗಳಿಂದ ನೀವು ಐಟಿಬಿಟಿ ಸಚಿವರಾಗಿ ಏನು ಮಾಡಿದ್ದೀರಿ ಹೇಳಿ. ಕರ್ನಾಟಕದ ಐಟಿಬಿಟಿ ಕಂಪನಿಗಳು ಯಾಕೆ ಬೇರೆ ಬೇರೆ ರಾಜ್ಯಕ್ಕೆ ಹೋಗ್ತಿವೆ? ನಿಮ್ಮ ಖಾತೆಯಲ್ಲಿ ಏನು ಕಡಿದು ದಬ್ಬಾಕಿದ್ದೀರಿ ಹೇಳಿ ಸರ್. ನಿಮಗೆ ಸ್ವಂತತೆ ಅನ್ನೋದೆ ಇಲ್ವಾ? ನಿಮ್ಮಪ್ಪನನ್ನೇ ಕಾಂಗ್ರೆಸ್ ಸಿಎಂ ಮಾಡ್ಲಿಲ್ಲ, ಇನ್ನು ನಿಮ್ಮನ್ನ ಮಾಡುತ್ತಾ?' ಎಂದು ಗೇಲಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.












Click it and Unblock the Notifications